TOP STORIES:

FOLLOW US

ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ


ಮುಂಬಯಿ ಯಾಂತ್ರಿಕ ಬದುಕಿನ ಮದ್ಯೆ ವೃತ್ತಿಪರ ಜೀವನದ ಬಿಡುವಿಲ್ಲದ ಕಾರ್ಯ ವೈಖರಿಯಲ್ಲಿ ಹವ್ಯಾಸ ಪ್ರವೃತ್ತಿಯೊಂದಿಗೆ ತಮ್ಮನ್ನು ತಾವು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗಣ್ಯ ಕನ್ನಡಿಗರ ಮದ್ಯೆ ಚಿರಪರಿಚಿತರಾಗಿರುವ ಉತ್ಸಾಹಿ ಯುವಕರ ಸಾಲಿನಲ್ಲಿ ಪ್ರಭಾಕರ ಬೆಳುವಾಯಿ ಓರ್ವರು ಮುಂಬಯಿ ಮಹಾನಗರ ಕಂಡ ನಿಷ್ಠಾವಂತ ಪ್ರಾಮಾಣಿಕ ಕಲಾ ಸಂಘಟಕ.


ನಮನ ಫ್ರೆಂಡ್ಸ್ ಮುಂಬಯಿ ಇದರ ಸಂಸ್ಥಾಪಕರಾಗಿ ಕಳೆದ 15ವರ್ಷಗಳಿಂದ ಸಂಸ್ಥೆಯನ್ನು ಮಾದರಿ ಹಾಗೂ ಸಮರ್ಥವಾಗಿ ಮುನ್ನಡೆಸುವುದರ ಜೊತೆಗೆ ಮುಂಬಯಿ ಸಾಹಿತ್ಯಿಕ ಸಾಂಸ್ಕ್ರತಿಕ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ನಿರಂತರ ಸಕ್ರೀಯವಾಗಿರಿಸಿಕೊಂಡಿರುವ ಓರ್ವ ಅಪ್ಪಟ ಭಾಷಾಭಿಮಾನಿ ಕಲಾಪ್ರೇಮಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಲಾಡಿ ಮನೆತನದ ದಿ. ಬಾಬು ಪೂಜಾರಿ ಮತ್ತು ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನ ಮನೆ ಗೋಪಿ ಪೂಜಾರಿ ದಂಪತಿಯ ಪುತ್ರನಾಗಿ ಜನಿಸಿ ಕಳೆದ ಎರಡೂವರೆ ದಶಕಗಳ ಹಿಂದೆ ಭವಿಷ್ಯದ ಹಾದಿಗಾಗಿ ಮುಂಬಯಿ ಸೇರಿದರು. ಹೋಟೆಲ್ ವೃತ್ತಿಯೊಂದಿಗೆ ಬರವಣಿಗೆಯನ್ನು ಹವ್ಯಾಸವಾಗಿರಿಸಿಕೊಂಡು ವ್ಯಕ್ತಿ ಪರಿಚಯ ನಾಟಕ ವಿಶ್ಲೇಷಣೆ, ಕಥೆ, ಕವನ ಲೇಖನಗಳ ಮುಖೇನ ಪರಿಚಯಿಸಿಕೊಂಡಿರುವ ಇವರು ಕಳೆದ ಒಂದೂವರೆ ದಶಕಗಳ ಹಿಂದೆ ನಮನ ಫ್ರೆಂಡ್ಸ್ ಮುಂಬಯಿ ಎಂಬ ಮಿತ್ರ ಬಳಗವನ್ನು ಸ್ಥಾಪಿಸಿ ಆ ಮುಖೇನ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಶ್ರೇಯಸ್ಸು ಇವರದು.


ನಗರ ಹಾಗೂ ತವರೂರ ಹಲವಾರು ಕಲಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೊಸ ವೇದಿಕೆ ಕಲ್ಪಿಸುವುದರ ಜೊತೆಗೆ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೆ ತೆರೆಮರೆಯಲ್ಲಿರುವ ನಗರದ ಹಿರಿಯ ಸಮಾಜ ಸೇವಕರು, ಕಲಾವಿದರು, ಧಾರ್ಮಿಕ ಮುಂದಾಳುಗಳು, ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಿದ ಕೀರ್ತಿ ಇವರದು.
2018 ರಲ್ಲಿ ರುದ್ರ ಎಂಟರ್ಟೈನ್ಮೆಂಟ್ ಆಯೋಜಿಸಿದ ಮಿಸ್ಟರ್ ಆಂಡ್ ಮಿಸ್ ಕರಾವಳಿ- 2018 ಸೌಂದರ್ಯ ಸ್ಪರ್ಧೆ, 2019ರಲ್ಲಿ ಪುಣೆಯಲ್ಲಿ ಸೂರ್ಯ ಪೂಜಾರಿ ಕಾರ್ಕಳ ನೇತೃತ್ವದ ನಮ ತುಳುವೆರ್ ಆಯೋಜನೆಯ ಮಿಸ್ಟರ್ ಆಂಡ್ ಮಿಸ್ ಫೇಸ್ ಆಫ್ ತುಳುನಾಡು ಸೌಂದರ್ಯ ಸ್ಪರ್ಧೆಯ ಬಹುಪಾಲಿನ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.


ಅಶ್ವಿನಿ ಪ್ರಕಾಶನ ಗದಗ ಆಯೋಜಿಸಿದ ಅಖಿಲ ಕರ್ನಾಟಕ ಸ್ವರಚಿತ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನ ಪಡೆದುದು ಮಾತ್ರವಲ್ಲದೆ,
ಇವರ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಕಳಕಳಿಯನ್ನು ಗುರುತಿಸಿ “ಸ್ತುಪ್ತ ಪ್ರತಿಭೆಗಳ ಪ್ರಕಟಕ ”
“ಪ್ರತಿಭಾ ವಲ್ಲಭ”
ಸೇರಿದಂತೆ ರಂಗ್ ಮಂಚ್ ಕಾಮ್ಗಾರ್ ಸಂಸ್ಥೆ (ರಿ )ಆಶ್ರಯದಲ್ಲಿ ಜರಗಿದ ಅನಘಾ ಇವೆಂಟ್ ಮತ್ತು ಡಿ. ಎಸ್. ಎಂಟರ್ಟೈನ್ಮೆಂಟ್ ಆಯೋಜಿಸಿದ ಹಿಂದಿ ಮರಾಠಿ ಸಿನಿಮಾ ತಂತ್ರಜ್ಞರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಬ್ಯಾಕ್ ಸ್ಟೇಜ್ ಹೀರೋ -2018”
ಪ್ರಶಸ್ತಿಯನ್ನಿತ್ತು ಗೌರವಿಸಿದ್ದು ಇವರ ತೆರೆಮರೆಯ ಸಾಧನೆಗೆ ಸಂದ ಗೌರವವೇ ಆಗಿದೆ. 2019 ರಲ್ಲಿ ನಾಮಾಂಕಿತ ಇಂಗ್ಲಿಷ್ ದೈನಿಕ “ಮುಂಬಯಿ ಮಿರರ್” ಪತ್ರಿಕೆಯಲ್ಲಿ ಪ್ರಭಾಕರ ಬೆಳುವಾಯಿ ಇವರ ಸಾಧನೆಯ ಬಗ್ಗೆ ಮೆಚ್ಚುಗೆಯ ಲೇಖನ ಪ್ರಕಟಗೊಂಡಿರುವುದು ತುಳು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯ.
ಈ ನಿಟ್ಟಿನಲ್ಲಿ ಬಿಡುವಿಲ್ಲದ ವೃತ್ತಿಯೊಂದಿಗೆ ಸದಾ ಸಮಾಜಮುಖಿ ಹಾಗೂ ಕಲಾ ಸೇವೆ ಮಾಡುತ್ತಿರುವ ಪ್ರಭಾಕರ ಬೆಳುವಾಯಿ ಈ ನಮನ ಫ್ರೆಂಡ್ಸ್ ಮುಂಬಯಿ ಇದರ 15ನೇ ವಾರ್ಷಿಕೋತ್ಸವ ಸಂಭ್ರಮ “ನಮನೋತ್ಸವ -2020” ಕಾರ್ಯಕ್ರಮವನ್ನು ರಾಷ್ಟ್ರ ಪ್ರೇಮ, ಮಾತೃಪ್ರೇಮ, ಕಲಾ ಪ್ರೇಮ ಎಂಬ ಪರಿಕಲ್ಪನೆ ಯಡಿ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಅಭೂತಪೂರ್ವವಾಗಿ ಮೂಡಿಬಂದು ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ.


ಈ ಕಾರ್ಯಕ್ರಮದಲ್ಲಿ ಭಾರತದ ವೀರ ಯೋಧ ಮಾಜಿ ಕಮಾಂಡರ್ ಶ್ಯಾಮರಾಜ್ ಇ. ವಿ. ಇವರಿಗೆ “ಯೋಧ ನಮನ” ಪ್ರಶಸ್ತಿ ಸೇರಿದಂತೆ ನಗರದ ವಿವಿಧ ಕ್ಷೇತ್ರದ 7 ಗಣ್ಯರಿಗೆ ಪ್ರಶಸ್ತಿ ಮಾತ್ರವಲ್ಲದೆ 7ಯುವ ಪ್ರತಿಭೆಗಳಿಗೆ “ನಮನ ಸಿರಿ ಯುವ ಪುರಸ್ಕಾರ -2020” ಪ್ರಶಸ್ತಿಯನ್ನಿತ್ತು ಗೌರವಿಸಿ ಸನ್ಮಾನಿಸಿದ ಕೀರ್ತಿಗೆ ಭಾಜಾನರಾಗಿದ್ದಾರೆ.

“ನಮನ ಫ್ರೆಂಡ್ಸ್ ಮುಂಬಯಿ” ಮಿತ್ರ ಬಳಗದಲ್ಲಿ ಯಾವುದೇ ಪದವಿ ಕಾರ್ಯಕಾರಿ ಸಮಿತಿ ಇಲ್ಲದಿದ್ದರೂ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಅದರ ಎಲ್ಲಾ ನಿರ್ವಹಣೆ ಯನ್ನು ಪ್ರಭಾಕರ ಬೆಳುವಾಯಿ ಇವರು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ. ಸ್ವಾಭಿಮಾನ, ಸ್ವಪ್ರಯತ್ನ, ನಿಸ್ವಾರ್ಥ ಮನದ ನಂಬಿಕೆ ನಮ್ಮೊಳಗಿದ್ದರೆ ಯಶಸ್ಸು ಖಂಡಿತಾ ನಮ್ಮ ಮಡಿಲಿನೊಳಗಿರುತ್ತದೆ ಎನ್ನುವ ಪ್ರಭಾಕರ ಬೆಳುವಾಯಿ ಸಾಮಾಜಿಕ, ಸಾಂಸ್ಕೃತಿಕ ಸೇವೆ ಮಾಡಲು ಹಣ ಆಸ್ತಿ ಸಂಪತ್ತು ಬೇಕಾಗಿಲ್ಲ ಪರರ ಬಗ್ಗೆ ಕಾಳಜಿ, ಮತ್ತು ನಿಸ್ವಾರ್ಥ ನಿರ್ಮಲ ಮನ ಇದ್ದರೆ ಸಾಕು ಅನ್ನುತ್ತಾರೆ. ವೃತ್ತಿಯೊಂದಿಗೆ ಸಮಾಜಮುಖಿ ಪ್ರವೃತ್ತಿಯೊಂದಿಗೆ ತನ್ನದೇ ಆದ ಛಾಪಿನೊಂದಿಗೆ ಮಿಂಚುತ್ತಿರುವ ಇವರ ಬಾಳು ಹಸನಾಗಿ ಸಾಗಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಕಲಾಕ್ಷೇತ್ರದಲ್ಲಿ ಇವರ ಸೇವೆಯು ಇನ್ನಷ್ಟು ಸಿದ್ಧಿ ಪ್ರಸಿದ್ದಿಯೊಂದಿಗೆ ಮಿನುಗಲಿ ಎಂಬ ಆಶಯ ನಮ್ಮದು.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »