ಮಂಗಳೂರು: ಮಂಗಳೂರು ದಸರಾ ಮಹೋತ್ಸವ ವಿಶ್ವವಿಖ್ಯಾತವಾಗಿದ್ದು, ಈ ಬಾರಿಯೂ ಸಂಪ್ರದಾಯ ಪ್ರಕಾರ ಮಂಗಳೂರು ದಸರಾ ಮಹೋತ್ಸವ ನಡೆಸಲೇಬೇಕು ಎಂಬ ಆಗ್ರಹ ಭಕ್ತಾದಿಗಳಿಂದ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ದಸರಾ ಮಹೋತ್ಸವವನ್ನು “ನಮ್ಮ ದಸರಾ-ನಮ್ಮ ಸುರಕ್ಷೆ” ಘೋಷವಾಕ್ಯದೊಂದಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದರು.
ಮಂಗಳೂರು ದಸರಾ ಸಂದಭ ಪೂಜೆ, ಪುರಸ್ಕಾರ, ಪ್ರಸಾದ ವಿತರಣೆ, ಮಕ್ಕಳು, ಹಿರಿಯರ ಸುರಕ್ಷತೆ ಸೇರಿದಂತೆ ಪ್ರತಿಯೊಂದು ವಿಚಾರ ಗಮನದಲ್ಲಿಟ್ಟು ಕ್ಷೇತ್ರದ ಆಡಳಿತ ಮಂಡಳಿ ಕೆಲವೊಂದು ನಿಧಾರಗಳನ್ನು ತೆಗೆದುಕೊಳ್ಳಲಿದೆ. ಮಂಗಳೂರು ದಸರಾ ನಮ್ಮೆಲ್ಲರ ಉತ್ಸವ, ಪ್ರತಿಯೊಬ್ಬರು ನಮ್ಮ ಸುರಕ್ಷತೆಗೆ ಒತ್ತು ನೀಡುವುದರ ಜತೆ ಉತ್ಸವ ಯಶಸ್ವಿಯಾಗಿ ನಡೆಸೋಣ ಎಂದು ಪದ್ಮರಾಜ್ ಹೇಳಿದರು.