ತುಳುನಾಡಿನ ಕಾರ್ಣಿಕ ಮಣ್ಣಲ್ಲಿ ಒಂದಾದ “ಶ್ರೀ ಕ್ಷೇತ್ರ ಗೆಜ್ಜೆಗಿರಿ ಸತ್ಯಧರ್ಮ ಚಾವಡಿ” ಇದರ ಕಳೆದ ವರ್ಷದ ವಿಜೃಂಭಣೆಯ ಬ್ರಹ್ಮಕಲಶೋತ್ಸವದ ಸವಿ ನೆನಪಿಗಾಗಿ “ನಮ್ಮ ಬಿಲ್ಲವೆರ್ “ಪೇಜ್ ಅರ್ಪಿಸುವ ಯು ಟ್ಯೂಬ್ ಲಿಂಕ್ ಚಾನೆಲ್ ನಲ್ಲಿ ಇಂದು ಬಿಡುಗಡೆಗೊಂಡಿರುವ “ಗೆಜ್ಜೆಗಿರಿ ಕ್ಷೇತ್ರದ ಅಮರ್ ಬೊಳ್ಳಿಲು” ತುಳು ಭಕ್ತಿ ಹಾಡು ತುಳುನಾಡ ಅನರ್ಘ್ಯ ರತ್ನ ದೇಯಿ ಬೈದೆದಿ ದಿವ್ಯ ಸನ್ನಿದಾನದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.
ಈ ಸಮಾರಂಭದಲ್ಲಿ ಕೇಂದ್ರ ಬಿಂದುವಾಗಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಶಿವಗಿರಿ ಮಠ ವರ್ಕಳ ಕೇರಳ.ಇವರ ದಿವ್ಯ ಹಸ್ತದಿ ಬಿಡುಗಡೆಗೊಂಡು ಉತ್ತಮ ರೀತಿಯಲ್ಲಿ ಈ ಹಾಡು ಜನರ ಜನಮನ್ನನೆಗಯ್ಯಳಿ ಎಂದು ಆಶೀರ್ವಚನಗೈದರು.
ಗೆಜ್ಜೆಗಿರಿ ಕ್ಷೆತ್ರದ ಯಜಮಾನರಾದ ಶ್ರೀ ಶ್ರೀಧರ ಪೂಜಾರಿ ಯವರ ಉಪಸ್ಥಿತಿಯೊಂದಿಗೆ ಹಾಡುಗಾರ್ತಿ ವಿದ್ಯಾ ಸುವರ್ಣ, ನಟನೆಗೈದ ತೃಪ್ತಿ. ಜೆ. ಬಂಗೇರ, ತುಳುನಾಡ ಕಳಸ ಎಂಬ ಬಿರುದು ಪಡೆದ ಈ ಹಾದಿಗೆ ಸಾಹಿತ್ಯ ಬರೆದ ಜಿ. ಎಸ್. ಗುರುಪುರ,ಸನ್ನಿಧಾನಕ್ಕೆ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮದ ನಿರೂಪಣೆಗೈದು, ಕೀರ್ತನ ಸನಿಲ್ ರವರು ಎಲ್ಲರನ್ನು ಸ್ವಾಗತಿಸಿ ಸಂಭ್ರಮ ಸಡಗರದೊಂದಿಗೆ ಹಾಡಿಗೆ ಚಾಲನೆ ನೀಡಲಾಯಿತು.