TOP STORIES:

FOLLOW US

ನಮ್ಮ ಸಂಘಟನೆಗಳಲ್ಲಿ ನಮ್ಮವರಿಗಾಗಿ ದುಡಿಯುವ ಮನಸ್ಥಿತಿಯೊಂದಿಗೆ ನಮ್ಮಲ್ಲಿ ಪಕ್ಷಕ್ಕಿಂತ ಸಂಘ-ಸಂಸ್ಥೆಗಳ ಮೇಲೂ ಕಾಳಜಿಯಿರಲಿ…


ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ.

ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ಎಂದು. ಹೌದು, ವಿದ್ಯೆಯಿಂದ ನಾವು ಸ್ವತಂತ್ರರಾಗುವ ಬದಲು ನಮ್ಮ ಸ್ವಾತಂತ್ರ್ಯವನ್ನು ಪರರಿಗೆ ಧಾರೆ ಎರೆದು ಪರರ ತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ಸಂಘಟನೆಗಳು ಬಲವ ತುಂಬುವ ಬದಲು ಹಲವು ಆಗುತ್ತಿದೆ. ಕೆಲವರ ಪ್ರಕಾರ ಸಂಘಟನೆಗಳು ಹೆಚ್ಚಾಗಬೇಕು ಅದರಿಂದ ಸಮಾಜಕ್ಕೆ ಪ್ರಯೋಜನವಿದೆ. ಹೆಚ್ಚಾಗಲಿ ಒಳ್ಳೆಯದು ಆದರೆ ನಮ್ಮ ಸಂಘಟನೆಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಧೃಡವಾಗಿಸಲು ಸಹಕಾರಿಯಾಗಿರಬೇಕು. ಆ ಮೂಲಕ ಸಮಾಜದ ಹಿತಚಿಂತನೆಯ ಗುರಿ ಇರಬೇಕು.

ಜಾತಿಗಳು ಧರ್ಮದೊಳಗಿನ ಬಳ್ಳಿಗಳು. ಧರ್ಮ ನಮ್ಮೆಲ್ಲರಿಗೂ ಬೇಕು. ಆದರೆ ಅದು ಕೇವಲ ಬಿಲ್ಲವರಿಗಾಗಿ ಮಾತ್ರವೇ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಾಗಿದೆ. ನಮ್ಮಲ್ಲಿ ಧರ್ಮಾಧಾರಿತ ಸಂಘಟನೆಯಲ್ಲಿ ಪ್ರಾಣತೆತ್ತವರಿದ್ದಾರೆ. ಅವರು ಯಾಕೆ ಹೋಗಬೇಕಿತ್ತು ಬೇರೆಯವರು ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಎಲ್ಲರೂ ಕೇಳುತ್ತೇವೆ. ಅದು ಸಾಮಾನ್ಯ. ಆದರೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಆದರೆ ನಮ್ಮವ ಎಂಬ ಪ್ರಜ್ಞೆ ನಮ್ಮಲ್ಲಿರಲಿ. ಆ ಮೂಲಕ ಅಲ್ಲಿ ಪಕ್ಷ ನೋಡದೆ ಸಾಂತ್ವನ ಇಲ್ಲವೇ ಅದರ ವಿರುದ್ಧ ಬೇಕಾದ ಕ್ರಮದ ಬಗ್ಗೆ ನಮ್ಮ ಸಂಘಟನೆಗಳು ಮಾಡುತ್ತಿಲ್ಲ. ಎಲ್ಲೋ ಕೆಲವು ಬೆರಳೆಣಿಕೆಯ ಸಂಘಟನೆಗಳು ಅಥವಾ ಸ್ಥಳೀಯ ಬಿಲ್ಲವ ಸಂಘ ಧ್ವನಿ ಎತ್ತುತ್ತವೆ ನಂತರ ಅದಕ್ಕೆ ಸ್ಪಂದನೆಯೂ ಇಲ್ಲ. ಇದಕ್ಕೆ ಮೂಲ ಕಾರಣ ಸಂಘಟನೆಯ ಪ್ರಮುಖರು ಪಕ್ಷದಲ್ಲಿದ್ದಾಗ ಘಟನೆಯು ಕೆಲವೊಮ್ಮೆ ಜಾತಿಗಿಂತ ಪಕ್ಷದ ಮೇಲೆ ನಿಲ್ಲುತ್ತದೆ. ಜಾತಿಗಿಂತ ಪಕ್ಷದ ಚಿಂತನೆಯಿರುವ ವ್ಯಕ್ತಿಯು ಸಂಘಟನೆಯ ಚುಕ್ಕಾಣಿ ಹಿಡಿಯಲು ಅಸಮರ್ಥ ಅಥವಾ ಪಕ್ಷಾತೀತ ವ್ಯಕ್ತಿಗೆ ನಮ್ಮ ಸಂಘಟನೆಯ ಜವಾಬ್ದಾರಿ ವಹಿಸಬೇಕಾಗಿದೆ.

ಇತ್ತೀಚಿನ ಒಂದು ಘಟನೆಯನ್ನು ನೋಡುವುದಾದರೆ ಕಲಾವಿದ ಅರವಿಂದ್ ಬೋಳಾರ್ ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಪಾತ್ರ ಮಾಡಿದಾಗ ಉಂಟಾದ ಸಮಸ್ಯೆಯ ಸಂದರ್ಭ ಖಾಸಗಿ ವಾಹಿನಿಯ ಬಗ್ಗೆ ಚಕಾರವೆತ್ತದೆ ಓರ್ವ ಕಲಾವಿದನಿಗಾದ ಅವಮಾನ ನಮಗೆ ಗೊತ್ತು. ಈ ಸಮಯದಲ್ಲಿ ನಮ್ಮವರಲ್ಲಿಯೇ ಧರ್ಮ, ಜಾತಿಯ ನಡುವಿನ ವಾದವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಆದರೆ ನಮ್ಮ ಜಾತಿಯ ಪ್ರಮುಖ ಸಂಘಟನೆಗಳೆನಿಸಿಕೊಂಡವರು ಮೌನವಾಗಿದ್ದರು. ಕಲಾವಿದನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ. ಕೆಲವರು ಮಾಡಿರಬಹುದು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವೇ? ಅಥವಾ ಯಾರು ಮುಂದೆ ಹೋಗುತ್ತಾರೆ ನಂತರ ನಾವು ಹೋಗುವ ಎಂಬ ಸೋಗಲಾಡಿತನವೇ ಎಂಬಂತಾಗಿದೆ.
ಇತರ ಜಾತಿಗಳನ್ನು ಕೊಂಡಾಡುವ ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಚುನಾವಣಾ ಸಂದರ್ಭ ಜಾತಿಯ ಪ್ರಮುಖರನ್ನು ಒಗ್ಗೂಡಿಸಿಕೊಂಡು ನಮ್ಮ ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ, ಜಾತಿಗೆ ಬೇಕಾದ ಸವಲತ್ತು ಪಡೆಯಲು ರಾಜ್ಯದ ಮುಖ್ಯಮಂತ್ರಿಯೇನು, ಪ್ರಧಾನಮಂತ್ರಿಯನ್ನೂ ಭೇಟಿಯಾಗಲು ತಾಕತ್ತು ಅವರಲ್ಲಿ ಇರಬೇಕಾದರೆ, ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾಬಲ್ಯವಿದ್ದು, ನಮ್ಮ ಜಾತಿಯ ಮತಗಳೇ ನಿರ್ಣಾಯಕವಾಗಿರುವಾಗ ನಮ್ಮಲ್ಲಿ ತಾಕತ್ತಿಲ್ಲವೇ? ನಮಗೆ ರಾಜಕೀಯ ನಾಯಕರು ಇದ್ದರು ಚುನಾವಣಾ ಸಂದರ್ಭ ನಾರಾಯಣಗುರು ಮಂದಿರದ ಭೇಟಿಯೇನು, ಜಾತಿಯ ಪ್ರಮುಖರ ಭೇಟಿ ಮಾಡುವುದೇನು? ಗೆದ್ದ ನಂತರ ಸರ್ವರೂ ಸಮಾನರು ಎಂಬ ಧೋರಣೆ ಅವರದ್ದು. ಇದು ನಮ್ಮವರಿಗೆ ರಾಜಕೀಯ ನಾಯಕರ ಬಗೆಗಿನ ತಾತ್ಸಾರಕ್ಕೂ ಕಾರಣವಾಗಿದೆ. ನಮ್ಮಲ್ಲಿ ಜಗಜ್ಜಾಹಿರಾಗುವಂತೆ ಜನ ಸೇರಿಸಿ ಅದು ಆಗ ಬೇಕು ಇದಾಗಬೇಕೆನ್ನುತ್ತೇವೆ. ಹೇಳುವುದು ಮಾತ್ರ ಅದರ ಹಿಂದೆ ಹೋಗಿ ಒತ್ತಡ ಹಾಕಲಾರೆವು. ಅದೇ ಇತರ ಜಾತಿಯವರು ಗುಪ್ತವಾಗಿ ಅವರ ನಾಯಕರು ಮಾತ್ರ ಮುಂದೆ ಹೋಗಿ ಸಮಾಜಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿ ಬೇಕಾದನ್ನು ಪಡೆಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾರ್ಖಾನೆ, ಕಂಪನಿ, ಬ್ಯಾಂಕ್ ಇತ್ಯಾದಿಗಳಿದ್ದರೂ ಅಲ್ಲಿ ಸಿರಿವಂತರಿಗೆ ಮಣೆ. ಕೆಲವು ಜಾತಿ ಪ್ರಮುಖರು ಭಾಷಣಕ್ಕೆ ಜಾತಿ ಜಾತಿ ಎಂದು ಬೊಬ್ಬಿರಿದರು ಉದ್ಯೋಗಕ್ಕಾಗಿ ಹೋದಾಗ ಜಾತಿ ಕಾಣದು.

ಪಕ್ಷ, ಧರ್ಮಗಳಿಗೆ ಜೋತು ಬೀಳುವ ನಾವು ಜಾತಿಗಾಗಿರುವ ಸಂಘಟನೆಯನ್ನು ಸಮರ್ಥವಾಗಿ ಬಳಸುವ. ಇತರೆ ಜಾತಿಗಳು ಜಾತಿ ಮೊದಲು ಧರ್ಮ ನಂತರವೆಂದರೆ ನಾವುಗಳು ಧರ್ಮ ಮೊದಲು ಜಾತಿ ನಂತರ ಎನ್ನುತ್ತೇವೆ. ಇದಕ್ಕೆ ಕಾರಣ ಹುಡುಕಿದಾಗ ಜಾತಿ ಸಂಘಟನೆಗಳಿಂದಾದ ಪ್ರಮಾದ. ಯಾವಾಗ ಜಾತಿ ಸಂಘಟನೆಗಳು ಜಾತಿಗಾಗಿ ದುಡಿಯುವುದಿಲ್ಲವೋ ಆಗ ಯುವ ಮನಸ್ಸುಗಳು ತಮ್ಮನ್ನು ಸೆಳೆಯುವ ಧರ್ಮಾಧಾರಿತ ಸಂಘಟನೆಗಳ ಕಡೆಗೆ ಒಲವು ಹರಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿ, ಪ್ರಚಾರ ಬಯಸುವ ಬದಲು ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಲ್ಲಿಯೂ ಬದಲಾವಣೆಯ ಪರ್ವ ಕಾಣಬಹುದು.
ಜಾತಿ ಸಂಘಟನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಇತರ ಜಾತಿಯನ್ನು ಅಥವಾ ಪಕ್ಷವನ್ನು ಉದ್ಧರಿಸುವ ಬದಲು ನಮ್ಮವರನ್ನೇ ಉದ್ಧಾರ ಮಾಡುವ. ನಮಗಾಗಿ ದುಡಿಯುವ ಎಂಬ ಧ್ಯೇಯ ನಮ್ಮ ಸ್ಥಳೀಯ ಬಿಲ್ಲವ ಸಂಘಗಳಿಂದ ಹಿಡಿದು ಕೇಂದ್ರ, ರಾಷ್ಟ್ರೀಯ, ಅಖಿಲ ಭಾರತ, ಜಿಲ್ಲೆ, ರಾಜ್ಯ ಇತ್ಯಾದಿ ಹಣೆಪಟ್ಟಿ ಕಟ್ಟಿಕೊಂಡ ನಮ್ಮ ಸಂಘಟನೆಗಳಲ್ಲಿ ಇರಲಿ ಎಂಬುದು ನಮ್ಮೆಲ್ಲರ ಆಶಯ.

 

ಬರಹ: ದೀಪಕ್ ಕೆ ಬೀರ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »