TOP STORIES:

ನಮ್ಮ ಸುರಕ್ಷತೆ’ಯೊಂದಿಗೆ ಸಂಪನ್ನಗೊಂಡಿತು ನಮ್ಮ ಮಂಗಳೂರು ದಸರಾ


ನಮ್ಮ ಸುರಕ್ಷತೆ’ಯೊಂದಿಗೆ ಸಂಪನ್ನಗೊಂಡಿತು ‘ನಮ್ಮ ಮಂಗಳೂರು ದಸರಾ’

ಮಂಗಳೂರು:ವಿಶ್ವವಿಖ್ಯಾತ ಮಂಗಳೂರು ದಸರಾ ಈ ಬಾರಿ ಕೊರೋನಾ ಆತಂಕದ ನಡುವೆಯೂ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಮಂಗಳೂರು ದಸರಾ ಎಂದರೆ ಅದು ಧಾರ್ಮಿಕ, ಸಾಂಸ್ಕೃತಿಕ, ಜಾನಪದ ವೈವಿಧ್ಯತೆಯ ಆಡುಂಬೊಲ. ಈ ಉತ್ಸವದಲ್ಲಿ ಧಾರ್ಮಿಕ ನಂಬಿಕೆಯ ಜತೆ ಕರ್ನಾಟಕ ಕರಾವಳಿಯ ಆರ್ಥಿಕ ಪುನಶ್ಚೇತನವೂ ಅಡಗಿದೆ. ಶ್ರೀದುರ್ಗೆ ಅಂದರೆ ಲೋಕದ ಸಂಕಷ್ಟ ದೂರ ಮಾಡುವ ಮಹಾಮಾತೆ.ಆ ದೇವಿಯ ಒಂಬತ್ತು ದಿನಗಳ ಉತ್ಸವ ನಡೆದರೆ ಖಂಡಿತಾ ಲೋಕಕ್ಕೆ ಬಂದಿರುವ ಸಂಕಷ್ಟ ಜಗತ್ತಿನಿಂದಲೇ ದೂರವಾಗಲಿದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು. ಆದರೆ ಈ ಬಾರಿಯ ಮಂಗಳೂರು ದಸರಾದ ಸಂಭ್ರಮಕ್ಕೆ ಆತಂಕದ ಕಾರ್ಮೋಡವನ್ನು ಕವಿಸಿದ್ದು ಕೋವಿಡ್ ಎನ್ನುವ ಮಹಾಮಾರಿ. ನವರಾತ್ರಿ,ದಸರಾ ಆಚರಣೆಯ ಬಳಿಕ ಈ‌ ಮಹಾಮಾರಿ ಕೊರೋನಾ ಜಗತ್ತಿನಿಂದಲೇ ದೂರವಾಗುತ್ತೆ ಅನ್ನುವ ನಂಬಿಕೆ ನಿಜವಾದಂತೆ ಕಾಣುತ್ತದೆ.
ಜಗದ್ವಿಖ್ಯಾತ ಮಂಗಳೂರು ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದಕ್ಕೆ ಚ್ಯುತಿ ಬಾರದಂತೆ, ಸಂಪ್ರದಾಯಕ್ಕೂ ಧಕ್ಕೆಯಾಗದಂತೆ ಈ ಬಾರಿ “ನಮ್ಮ ದಸರಾ- ನಮ್ಮ ಸುರಕ್ಷೆ”ಎನ್ನುವ ಧ್ಯೇಯವಾಕ್ಯದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಳಿಸಿದ ಹೆಗ್ಗಳಿಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಗೆ ಸಲ್ಲಬೇಕು

ದಸರಾ ನಡೆಯೊದೇ ಇಲ್ಲ ಅನ್ನೋ ವೇಳೆಗೆ ಪವಾಡದಂತೆ ನಡೆದೇ ಹೋಯ್ತು ಸರಳ ದಸರಾ

ದಸರಾ ಸಹಿತ ನವರಾತ್ರಿ ಉತ್ಸವಗಳ ಆಚರಣೆಗೆ ಸರ್ಕಾರವು ಮಾರ್ಗಸೂಚಿಗಳನ್ನು ನಿಗದಿಪಡಿಸಿದ ಸಂದರ್ಭದಲ್ಲಿ ಕೊರೋನಾದಿಂದ ಯಾವುದೇ ಕಾರಣಕ್ಕೂ ಮಂಗಳೂರು ದಸರಾ ಮಹೋತ್ಸವಕ್ಕೆ ಅಡ್ಡಿಯಾಗಬಾರದು ಎಂಬ ಅಭಿಪ್ರಾಯ ಭಕ್ತರು, ಉದ್ಯಮಿಗಳು, ವ್ಯಾಪಾರಿಗಳು, ಹಿತೈಷಿಗಳ ವಲಯದಿಂದ ಕೇಳಿಬಂದಿತ್ತು.ಈ ಬಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ರೂವಾರಿ,ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸಹಿತ ಅನೇಕ ಹಿರಿಯರ ಜೊತೆಗೆ ಗಂಭೀರ ಚಿಂತನೆ ನಡೆಸಿ, ಸರಕಾರದ ಮಾರ್ಗಸೂಚಿ ಪಾಲಿಸಿ ದಸರಾ ಮಹೋತ್ಸವ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿತು.ಇದಕ್ಕೆ ಪೂರಕವೆಂಬಂತೆ ಕ್ಷೇತ್ರದ ಶ್ರೀಗೋಕರ್ಣನಾಥ,ತಾಯಿ ಅನ್ನಪೂರ್ಣೇಶ್ವರಿ,ಪರಿವಾರ ದೇವರುಗಳು ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದ, ಪವಾಡದಿಂದ ಎಲ್ಲವೂ ಸಾಂಗವಾಗಿ ಆರಂಭಗೊಂಡು ಸುರಕ್ಷತೆಯೊಂದಿಗೆ ಸಂಪನ್ನಗೊಂಡಿತು.ಈ ಬಾರಿಯ ದಸರಾ ಆಚರಣೆಯಿಂದಲೇ ಈ ಕ್ಷೇತ್ರದ ದೇವರುಗಳ ಶಕ್ತಿ,ಲೀಲೆ ಎಷ್ಟು ಇದೆ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ
ಈ ಬಾರಿಯ ದಸರಾ ಮಹೋತ್ಸವದಲ್ಲೂ ಎಂದಿನಂತೆ ಸ್ವರ್ಗಲೋಕದಂತೆ ಕಂಗೊಳಿಸುವ ಮಂಟಪದಲ್ಲಿಯೇ ಮಹಾಗಣಪತಿ,ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಮೂರ್ತಿಗಳ ಪ್ರತಿಷ್ಠಾಪನೆ ದಸರಾ ಆರಂಭ ದಿನವೇ ನಡೆಯಿತು.ಈ ಬಾರಿ ಮಂಗಳೂರು ದಸರಾ ನಡೆಯೋದೇ ಇಲ್ಲ ಅಂದುಕೊಂಡವರಿಗೆ ಅಚ್ಚರಿ ಎಂಬಂತೆ ದಸರಾ ಸಂಭ್ರಮದಿಂದ ನಡೆದೇ ಹೋಯ್ತು.

ಕೋವಿಡ್ ನಿಯಮ‌ ಪಾಲನೆಯೊಂದಿಗೆ ನಡೆದ ದಸರಾ

ಸರ್ಕಾರವು ನಿಗದಿಪಡಿಸಿದ ಮಾರ್ಗಸೂಚಿಗಳಂತೆಯೇ ಮಂಗಳೂರು ದಸರಾವನ್ನು ಅಷ್ಟೂ ದಿನಗಳ ಕಾಲ ನಡೆಸಲಾಯಿತು. ಅದರಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ರಧಾನ ಗೇಟ್‍ನಲ್ಲಿಯೇ ಪ್ರವೇಶ ಮಾಡಿ, ದೇವರ ದರ್ಶನ, ಶ್ರೀ ಗಣಪತಿ,ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ದರ್ಶನ ಪಡೆಯುವ ಅವಕಾಶ ನೀಡಲಾಗಿತ್ತು. ದೇವಸ್ಥಾನ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿತ್ತು.ದೇವಸ್ಥಾನದ ವಠಾರ, ದೇವಾಲಯದೊಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೋ, ಸೆಲ್ಫಿಯನ್ನು ನಿಷೇಧಿಸಲಾಗಿತ್ತು.ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಸ್ವಯಂಸೇವಕರ ಸಹಕಾರದೊಂದಿಗೆ ಸಾಕಷ್ಟು ಶ್ರಮಪಟ್ಟಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಅಚ್ಚುಕಟ್ಟಾಗಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು

ಮಂಗಳೂರು ದಸರಾ ಧಾರ್ಮಿಕವಾಗಿ ಎಷ್ಟು ಶ್ರೀಮಂತವೋ ಸಾಂಸ್ಕೃತಿಕವಾಗಿಯೂ ಅಷ್ಟೇ ಶ್ರೀಮಂತವಾದುದು.ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ವರ್ಚುವಲ್ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಕ್ಷೇತ್ರದ ಜಯ ಸಿ. ಸುವರ್ಣ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಅಲ್ಲಿಗೆ ಕಲಾವಿದರಿಗೆ ಮಾತ್ರ ಪ್ರವೇಶವಿತ್ತು. ಕಾರ್ಯಕ್ರಮವನ್ನು ಖಾಸಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುವ ಮೂಲಕ ವೀಕ್ಷಣೆಗೆ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಜೊತೆಗೆ ದೇವಾಲಯದ ಪ್ರಾಂಗಣದಲ್ಲಿ ಬೃಹತ್ ಎಲ್‍ಇಡಿ ಸ್ಕ್ರೀನ್‍ಗಳ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.ಕಳೆದ ಹಲವಾರು ವರ್ಷಗಳಿಂದಲೂ ಸೇವಾ ರೂಪದಲ್ಲಿ ಶ್ರಮವಹಿಸುತ್ತಿದ್ದ “ನಮ್ಮಕುಡ್ಲ” ಚಾನೆಲ್ ಈ ಬಾರಿಯಂತೂ ಅದ್ಬುತ ಕೆಲಸ ಮಾಡಿದೆ.ಎಲ್ಲಾ ಕಾರ್ಯಕ್ರಮವನ್ನು ಚಾನೆಲ್,ಸಾಮಾಜಿಕ ಜಾಲ ತಾಣದಲ್ಲಿ ನೇರಪ್ರಸಾರ ಮಾಡುವ ಮೂಲಕ ಜೊತೆಗೆ ಹತ್ತು ದಿನಗಳ ಕಾಲವೂ ವರ್ಚುವಲ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮದೇ ಶ್ರಮದಿಂದ ಮಾಡಿ ಅದನ್ನು ನವರಾತ್ರಿಯ ದಿನದಂದು ಪ್ರಸಾರ ಮಾಡಿ ಮನೆಯಲ್ಲೇ ಇದ್ದ ಲಕ್ಷಾಂತರ ಭಕ್ತರಿಗೆ ಕುದ್ರೋಳಿಯ ದರ್ಶನ ನೀಡುವಲ್ಲಿ ಶ್ರಮವಹಿಸಿದ್ದಾರೆ.ನಮ್ಮ ಕುಡ್ಲ‌ ಚಾನೆಲ್ ನ ಮಾಲಕ, ಲೀಲಾಕ್ಷ ಕರ್ಕೇರ ಹಾಗೂ ತಂಡದವರ ಶ್ರಮ ಪ್ರಶಂಸನೀಯ.

*ಪ್ರಶಂಸೆಗೆ ಪಾತ್ರವಾಯಿತು ಈ ಬಾರಿಯ ಸರಳ ಅನ್ನದಾನ*

ಕುದ್ರೋಳಿ ಕ್ಷೇತ್ರದಲ್ಲಿ ಅನ್ನದಾನ ಸೇವೆಗೆ ವಿಶೇಷ ಪ್ರಾಧಾನ್ಯತೆ. ಈ ಬಾರಿಯೂ ಅನ್ನದಾನ ಸೇವೆ ನಿರಂತರವಾಗಿ ನಡೆದಿದ್ದು, ಪ್ರತೀನಿತ್ಯ ಮಧ್ಯಾಹ್ನ 12.30ರಿಂದ 2.30ರತನಕ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಅನ್ನಪ್ರಸಾದವನ್ನು ಪ್ಯಾಕೇಟ್ ರೂಪದಲ್ಲಿ ವಿತರಣೆ ಮಾಡಲಾಯಿತು.ಅಡಿಕೆ ಹಾಳೆಯ ಬೌಲ್‍ಗಳನ್ನು ನೀರಿನಲ್ಲಿ ತೊಳೆದು, ಪ್ರಸಾದ ಪ್ಯಾಕ್ ಮಾಡುವವು ಕೂಡ ಮಾಸ್ಕ್, ಫೇಸ್‍ಶೀಲ್ಡ್, ಗ್ಲೌಸ್‍ಗಳನ್ನು ಧರಿಸಿ ಪ್ರಸಾದವನ್ನು ಹಂಚುವ ಮೂಲಕ ಈ ವೇಳೆಯೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾದವು.

ಮೆರವಣಿಗೆ ಇಲ್ಲದೆ ಸಂಭ್ರಮದಿಂದ ಸಂಪನ್ನಗೊಂಡ ಸರಳ ದಸರಾ

ಮಂಗಳೂರು ದಸರಾ ಅಂದರೆ 10 ದಿನಗಳ ಕಾಲ ಮಂಗಳೂರು ನಗರವಿಡೀ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ.ಬೆಳಕಿನ ಚಿತ್ತಾರ, ರಸ್ತೆ ಬದಿಗಳಲ್ಲಿ ಕಮಾನುಗಳು, ಸ್ವಾಗತ ಗೋಪುರಗಳು ರಾರಾಜಿಸುತ್ತವೆ. ಮೆರವಣಿಗೆಯಲ್ಲಿ ಕಲಾ ತಂಡ, ಸ್ತಬ್ದ ಚಿತ್ರಗಳ ಮೆರುಗು ಆಕರ್ಷಣೀಯವಾಗಿರುತ್ತದೆ. ದೇಶ-ವಿದೇಶದಿಂದ 3 ರಿಂದ 4 ಲಕ್ಷ ಮಂದಿ ಮೆರವಣಿಗೆ ವೀಕ್ಷಣೆಗೆ ಆಗಮಿಸುತ್ತಾರೆ. ಆದರೆ ಕೊರೋನಾ ಕಾರಣದಿಂದ ಈ ಬಾರಿ ಮೆರವಣಿಗೆ ಮತ್ತು ನಗರ ಅಲಂಕಾರವಿರಲಿಲ್ಲ. ಆದರೂ ಭಕ್ತರು ಅವರ ಇಷ್ಟದಂತೆ ಅಲ್ಲಲ್ಲಿ ರಸ್ತೆಗೆ ಬೆಳಕಿನ‌ ಅಲಂಕಾರವನ್ನು ಮಾಡಿ ದಸರಾಕ್ಕೆ ಮೆರಗು ನೀಡಿದ್ದಾರೆ‌. ಜೊತೆಗೆ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯೂ ಸಾಂಕೇತಿಕ ಮೆರವಣಿಗೆ ನಡೆಸಿ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸಿದೆ.ಮಂಗಳೂರು ದಸರಾ ಆಚರಣೆಗೆ ಪ್ರೇರಣೆ ನೀಡಿದ ಬ್ರಹ್ಮ ಶ್ರೀ ನಾರಾಯಣಗುರುಗಳ ಭಾವಚಿತ್ರವಿರುವ ವಾಹನ ಈ ಬಾರಿಯೂ ನಗರದಾದ್ಯಂತ ಸಂಚರಿಸಿದೆ.ಈ ವಾಹನದಲ್ಲಿ ಭಜನಾ ತಂಡದ ಸದಸ್ಯರು ಭಜನೆಯೊಂದಿಗೆ ಪ್ರತಿ ವರ್ಷ ದಸರಾ ಮೆರವಣಿಗೆ ಸಾಗುವ ಏಳು ಕಿಲೋಮೀಟರ್ ರಸ್ತೆಯಲ್ಲಿ ಸಾಗಿದ್ದು,ದಸರಾ ಮೆರವಣಿಗೆಯನ್ನು ಈ ವರ್ಷವೂ ಸಾಂಕೇತಿಕವಾಗಿ ಆಚರಿಸಿದಂತಾಗಿದೆ. ಈ ವಾಹನ ನಗರದಾದ್ಯಂತ ಸಂಚರಿಸಿದ ಕುದ್ರೋಳಿ ಕ್ಷೇತ್ರಕ್ಕೆ ಬಂದಿದ್ದು,ಬಳಿಕ ಕ್ಷೇತ್ರದಲ್ಲಿ ವಿಸರ್ಜನಾ ಪೂಜೆ ನಡೆದು ನವದುರ್ಗೆಯರ ವಿಗ್ರಹಗಳನ್ನು ದೇವಳದ ಸುತ್ತ ಪ್ರದಕ್ಷಿಣೆಯಲ್ಲಿ ತಂದು, ದೇವಳದ ಪುಷ್ಕರಿಣಿಯಲ್ಲಿ ಜಲಸ್ತಂಭನ ಮಾಡಲಾಯಿತು. ಶಾರದಾ ಮಾತೆಯ ವಿಗ್ರಹವನ್ನು ದೇವಾಲಯದ ಮುಖ್ಯದ್ವಾರದವರೆಗೆ ಪಲ್ಲಕ್ಕಿಯಲ್ಲಿ ಕರೆತಂದು, ಬಳಿಕ ದೇಗುಲದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು. ಸಾಮಾನ್ಯವಾಗಿ 12-14 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದ ಶಾರದಾ ಮಾತೆಯ ವಿಸರ್ಜನಾ ಪ್ರಕ್ರಿಯೆ ಈ ಬಾರಿ ಮುಂಜಾವ 2 ಗಂಟೆಯ ವೇಳೆಗೆ ಸಂಪನ್ನಗೊಂಡಿತು.ಈ ಮೂಲಕ ಅದೆಷ್ಟೋ ಮಂದಿ ಭಕ್ತಾದಿಗಳು ಇದೇ ಮೊದಲ ಬಾರಿಗೆ ಜಲಸ್ತಂಭನದ ಸೊಬಗನ್ನು ಕಣ್ತುಂಬಿಕೊಂಡರು.

*ಮಂಗಳೂರು ದಸರಾಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ:ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್*

ಕೊರೋನಾದಂತಹ ಮಿಷಮ‌ ಪರಿತಿಸ್ಥಿ‌ಯ ಮಧ್ಯೆ ಸರ್ಕಾರ ನೀಡಿದ ಕೆಲವೊಂದು ಕಠಿಣ ನಿಯಮಗಳಿಂದಾಗಿ ಕುದ್ರೋಳಿ ಕ್ಷೇತ್ರದ ವತಿಯಿಂದ ‘ಮಂಗಳೂರು ದಸರಾ’ ನಡೆಸೋದೇ ನಮಗೆ ಸವಾಲಾಗಿತ್ತು.ಆದರೆ ಹತ್ತು ದಿನಗಳ ಕಾಲ ನಡೆದ ಉತ್ಸವದಲ್ಲಿ ಸಹಸ್ರಾರು ಸ್ವಯಂಸೇವಕರು ಸ್ಪಂದಿಸುವ ಮೂಲಕ ಇಡೀ ಕಾರ್ಯಕ್ರಮವೇ ಮಾದರಿಯಾಗಿ ಜನಮನ್ನಣೆ ಗಳಿಸಿದೆ.ಇದಕ್ಕೆ ಪ್ರತಿಫಲಾಪೇಕ್ಷೆ ಇಲ್ಲದೇ ಎಲ್ಲರೂ ಶ್ರಮವಹಿಸಿದ್ದಾರೆ. ಎಲ್ಲರ ಪ್ರೀತಿಗೆ ಅಭಾರಿಗಿದ್ದು, ಕ್ಷೇತ್ರದ ಎಲ್ಲಾ ಪರಿವಾರ ದೇವರುಗಳ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ ಆರ್.ಪದ್ಮರಾಜ್ ಅಭಿಪ್ರಾಯಪಟ್ಟಿದ್ದಾರೆ.

✍️ ಸುಖ್ ಪಾಲ್ ಪೊಳಲಿ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »