ಪ್ರಸಿದ್ದ ತುಳು ಸಂಘಟಕ, ಕನ್ನಡ, ತುಳು ಸಾಹಿತಿಗಳಾದ ಅತ್ತಾವರ ಶಿವಾನಂದ ಕರ್ಕೇರ ಅವರು ಅಕ್ಟೋಬರ್ 7 ರ ಬುಧವಾರ ಸಂಜೆ ನಿಧನರಾದರು.ಅವರು ನಾಟಕ ರಚನೆಗಾರರಾಗಿದ್ದು ಎರು ಮೈಂದೆ ನಾಟಕವನ್ನು ರಚಿಸಿದ್ದಾರೆ. ತುಳು ಅಕಾಡೆಮಿ ಮಾಜಿ ಸದಸ್ಯರಾಗಿರುವ ಅವರು, ತುಳು ಎಂಎ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ಹಾಗೆಯೇ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದರು.
ಅವರು ಕಡಲ್ ಕವಿತಾ ಸಂಕಲನ ಹಾಗೂ ಎರು ಮೈಂದೆ ನಾಟಕಗಳಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಗೋಕರ್ಣನಾಥ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರು ಕೂಡಾ ಹೌದು. ಯಕ್ಷಾಂಗಣದ ಸ್ಥಾಪಕ ಉಪಾಧ್ಯಕ್ಷರಾಗಿದ್ದರು. ಸ್ವೀಕಾರ್ ಸಾಹಿತ್ಯ- ಸಾಂಸ್ಕೃತಿಕ ಕೂಟದ ಸ್ಥಾಪಕರಾಗಿದ್ದಾರೆ.
ಮೃತರು ತುಳು ಕಾರ್ಯಕ್ರಮಗಳ ಅನುಭವಿ ಸಂಘಟಕರಾಗಿದ್ದರು. ಅವರು ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದರು.