ತುಳುನಾಡಿನ ಹೆಮ್ಮೆಯ ಹಾಗೂ ಬಿಲ್ಲವ ಸಮಾಜದ ಯುವ ಪ್ರತಿಭೆ ಕುಕ್ಕಿಪಾಡಿಯ ಕೊರಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಮಗ ಪ್ರದೀಪ್ ಪೂಜಾರಿ ಕುಕ್ಕಿಪಾಡಿ.ಇವರು ಪ್ರಾಥಮಿಕ ಶಿಕ್ಷಣ-ಕುಕ್ಕಿಪಾಡಿ ಸಂತ ಬಾರ್ತಲೋಮಿಯರ ಸ್ಕೂಲ್, ಪ್ರೌಢ -ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು , ಕಾಲೇಜ್ -ಹೋಲಿ ರೋಸರಿ ಕಾಲೇಜು ಮೂಡಬಿದ್ರಿ ಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು.
ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ ತನ್ನ ಪ್ರತಿಭೆಯ ಜೊತೆಗೆ ಇತರ ಪ್ರತಿಭೆಗೆ ಪ್ರೋತ್ಸಹ ಕೊಟ್ಟು ಅವರಿಗೂ ವೇದಿಕೆ ಕಲ್ಪಿಸಿಕೊಟ್ಟ ಸಾಧನೆಯ ಹಾದಿಯಲ್ಲಿ ನಡೆಯುವಂತೆ ಮಾಡಿದ ಮಹಾನ್ ಸಾಧಕ. ತಾನು ಪಟ್ಟ ಕಷ್ಟ ಇನ್ನೊಬ್ಬರು ಅನುಭವಿಸಬಾರದು ಎಂದು ಅವರ ಜೀವನದಲ್ಲಿ ಬೆಳಕಾದವರು.
ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಇರುವ ಇವರಿಗೆ ನಾಯಕ ನಟನಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಕಲಾ ಕ್ಷೇತ್ರದ ಗುರುಗಳಾದ ಅಶೋಕ್ ಹಲಾಯಿ ಇವರ ನಿರ್ದೇಶನದ ಪೂರಾ ಪೊಕ್ಕಡೆ ಚಿತ್ರದಲ್ಲಿ ನಟಿಸಿ ಸೈ ಎಣಿಸಿಕೊಂಡರು.
ಹೀಗೆ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ತಾನು ಬಣ್ಣ ಅಚ್ಚುವ ಬದಲು ಇತರ ಪ್ರತಿಭೆಗೆ ಅವಕಾಶ ಕೊಡಲು ಅಪ್ಪು ಎನ್ನುವ ನೃತ್ಯ ತಂಡ ರಚಿಸಿ ಉಚಿತ ನೃತ್ಯ ತರಬೇತಿ ನೀಡುತ್ತಿದ್ದರು.ಇವರು ಅನೇಕ ಕಿರು ಚಿತ್ರ ನಿರ್ದೇಶನ ಮಾಡಿ ಯಶಸ್ವೀ ನಿರ್ದೇಶಕರು ಎನಿಸಿಕೊಂಡಿದ್ದಾರೆ. ಮನಸ್ದ ಪೊರ್ಲು, ಸಸ್ಪೆನ್ಸ್ ಮೂವಿ, ನಂಬುಗೆ, ಅಂಗಲಪು, ಆಪರೇಷನ್ ತುಳುನಾಡ ಹೀಗೆ ಅನೇಕ ಕಿರುಚಿತ್ರ ಮಾಡಿದ್ದಾರೆ. ನಿರ್ದೇಶಕ ಮಾತ್ರ ಅಲ್ಲ ಗ್ಲಾಮರ್ ಡಿಸೈನ್ ಆಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಗ್ಲಾಮರ್ ಶಾಟ್ಸ್ ನಲ್ಲಿ ಹಲವಾರು ಕಿರುಚಿತ್ರ ನಿರ್ಮಾಣ ಮಾಡಿ ಹೊಸ ಪ್ರತಿಭೆ ಅವಕಾಶ ಮಾಡಿಕೊಟ್ಟ ಕಲಾ ಪೋಷಕರು ಹೌದು, ಇವರ ಈ ಸಾಧನೆಗೆ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ತ್ರಿಶಾಲ್ ಶೆಟ್ಟಿ, ಶಶಿಂದ್ರ ಜಂಕಳ, ನಾವೆಲ್, ತಿಲಕ್, ವಿದ್ಯಾ ಹೀಗೆ ಅನೇಕರ ಸಂಪೂರ್ಣ ಸಹಕಾರ ಸಿಕ್ಕಿತ್ತು.
ಬಂಟ್ವಾಳ ತಾಲ್ಲೂಕಿನ ಜನರಿಗೆ ಮಾಹಿತಿ ನೀಡಲು ಸೂಕ್ತ ನ್ಯೂಸ್ ಚಾನಲ್ ಅನ್ನು ಯು ಟ್ಯೂಬ್ ನಲ್ಲಿ ಆರಂಭಿಸಿ ಜನರಿಗೆ ಸೂಕ್ತ ಮಾಹಿತಿ ತಲುಪುವಂತೆ ಮಾಡಿದರು ಮತ್ತು ನೊಂದ ಬಡ ಜನರ ನೋವಿನ ವರದಿಯನ್ನು ಈ ಚಾನಲ್ ಮೂಲಕ ಸಂಘ ಸಂಸ್ಥೆಗಳಿಗೆ ತಲುಪುವಂತೆ ಮಾಡಿ ಬಡವರ ಪಾಲಿಗೆ ಆಶಾ ಕಿರಣವಾದರು.
ತಮ್ಮ ನಿಸ್ವಾರ್ಥ ಸೇವೆಯಿಂದ ಸೇವೆ ಮಾಡುವ ಇವರ ಬಾಳು ಬೆಳಕಾಗಲಿ ಮತ್ತು ಕಲಾ ಮಾತೆಯ ಅನುಗ್ರಹದಿಂದ ಇನ್ನಷ್ಟು ಒಳ್ಳೆಯ ಕಿರು ಚಿತ್ರ , ಸಿನಿಮಾ ಮಾಡಿ ಪ್ರಶಸ್ತಿ ಪುರಸ್ಕಾರ ಇವರ ಮುಡಿಗೇರುವಂತೆ ಮಾಡಲಿ.
ಬರಹ: ಪ್ರಶಾಂತ್ ಅಂಚನ್ – ಮಸ್ಕತ್ತ್