“ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವನಿಗೆ” ಎಂಬ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿ, ಅನ್ಯಾಯವನ್ನು ಸಹಿಸಿಕೊಳ್ಳದ, ನೇರ ನುಡಿಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ದುಷ್ಟರ ಪಾಲಿಗೆ ಬೆಂಕಿಯಾಗಿ, ನೊಂದವರ ಪಾಲಿಗೆ ಆಶಾಕಿರಣವಾಗಿ ಎಲ್ಲರ ಮನಗೆದ್ದ ನಮ್ಮ ಹೆಮ್ಮೆಯ ಯುವ ಬಿಲ್ಲವ ಕಿರಣ್ ಪೂಜಾರಿ.
ಮದ್ದು ಗುಡ್ಡೆ ಕುಂದಾಪುರ ತಾಲೂಕಿನ ನರಸಿಂಹ ಪೂಜಾರಿ ಮತ್ತು ಗೀತಾ ಎನ್ ಪೂಜಾರಿಯರ ಮಗ ಕಿರಣ್ ಪೂಜಾರಿ
ಇವರು ತನ್ನ ವಿದ್ಯಾಬ್ಯಾಸವನ್ನು ಸಂತ ಮರಿಯಾ ಹೈ ಸ್ಕೂಲ್ ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಲಾ & ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಮುಗಿಸಿ ನಂತರ ಕುಂದಾಪುರದಲ್ಲಿ “MICE” ಡಿಪ್ಲೋಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಡಿ. ಟಿ. ಪಿ ತರಬೇತಿ ಪಡೆದು ನಂತರ ಜೀವನಕ್ಕಾಗಿ “ಜನ ಈ ದಿನ ” ಪತ್ರಿಕೆಯಲ್ಲಿ ಅಡ್ವೇಟೈಸಿಂಗ್ ಡಿಸೈನರ್ ಮತ್ತು ಕಂಪ್ಯೂಟರ್ ಕೋ ಅರ್ಡಿನೆಟರ್ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದರು.
ತನ್ನ ಕನಸುಗಳು ನನಸಾಗಬೇಕು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇದ್ದ ಇವರು ಬೆಂಗಳೂರಿಗೆ ಬಂದು ಜೆಟ್ ಕಿಂಗ್ ನಲ್ಲಿ ಡಿಪ್ಲೋಮ ಇನ್ ಹಾರ್ಡ್ ವೇರ್ ಆ್ಯಂಡ್ ನೆಟ್ ವರ್ಕಿಂಗ್ ಮಾಡುತ್ತಿದ್ದು ಮತ್ತು ಅದರ ಜೊತೆಯಲ್ಲಿ ಪ್ರೆಸ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದರು. ಅನಂತರ ಕರ್ನಾಟಕ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಇನ್ಸ್ಟ್ರಕ್ಟರ್ ಆಗಿ ಮತ್ತು ಪಾರ್ಟ್ ಟೈಮ್ ಪತ್ರಿಕೆಯ ವರದಿಗಾರನಾಗಿ ಸೇವೆಯನ್ನು ಸಲ್ಲಿಸಿದ್ದರು.
ಇಷ್ಟು ಮಾತ್ರ ಅಲ್ಲದೆ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿಯೂ ಪಾರ್ಟ್ ಟೈಮ್ ವೃತ್ತಿಯನ್ನು ಮಾಡುತ್ತಿದ್ದರು ಮತ್ತು ಪುರಾವಕರ್ ಬಿಲ್ಡರ್ಸ್ ನಲ್ಲಿ ಇಂಟೀರಿಯರ್ ಡಿಪಾರ್ಟ್ಮೆಂಟ್ ನಲ್ಲಿ ಇಂಟೀರಿಯರ್ ಕೋ ಅರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದರು, ಎಚ್. ಡಿ.ಎಫ್.ಸಿ ಅಲ್ಲಿ ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ಆಗಿ ಇನ್ಶೂರೆನ್ಸ್ ಅಲ್ಲಿ ಕಾರ್ಯ ನಿರ್ವಹಿಸುತ್ತಿಸಿದ್ದರು. ಅಲ್ಲಿಂದ ಮಾರ್ಕೆಟಿಂಗ್ ಅಲ್ಲಿ ಯಶಸ್ಸ ಕಂಡ ಇವರು ಎಲ್.ಐ.ಸಿ ಡೈರೆಕ್ಟ್ ಮಾರ್ಕೆಟಿಂಗ್ ನಲ್ಲಿ ಪಯಣ ಶುರುಮಾಡಿದರು, ಎಲ್ ಐ ಸಿ ಯಲ್ಲಿ ಒಬ್ಬ ಉತ್ತಮ ಮಟ್ಟದ ಯಶಸ್ಸು ಇವರದಾಯಿತು.
ಈಗ ಪ್ರಸ್ತುತ ಎಲ್ ಐ ಸಿ ಡೈರೆಕ್ಟ್ ಮಾರ್ಕೆಟ್ ನಲ್ಲಿ ಚೀಫ್ ಆರ್ಗನೈಸರ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಸುಖಿ ಇಂಟರಿಯರ್ಸ್ ಕಂಪೆನಿ, ಕುಂದಾಪುರ ಮಿತ್ರದಲ್ಲಿ ವರದಿಗಾರನಾಗಿ ಹಾಗೂ ಹೊಸಕಿರಣ್ ನ್ಯೂಸ್ ಎನ್ನುವ ವೆಬ್ ಪೇಜ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಒಬ್ಬ ಉತ್ತಮ ಪತ್ರಕರ್ತ ಹೊರಹೊಮ್ಮಿರುವ ಇವರಿಗೆ ಕ್ರಿಕೆಟ್, ಕಬ್ಬಡಿ, ಕ್ಯಾರಂ, ಅಥ್ಲೆಟಿಕ್ಸ್ , ನಾಟಕ, ಸಂಗೀತ, ಕಥೆ ಕವನಗಳನ್ನು ಓದುವುದು ಬರೆಯುವುದು ಇವರ ಹವ್ಯಾಸಗಳಾಗಿದೆ.
ಅದೆಷ್ಟೋ ಸಲ ಸಾರ್ವಜನಿಕ ಸ್ಥಳಗಳಲ್ಲಿ ಹಣ ಸಿಕ್ಕಿದಾರೆ ಅದರ ವಾರಿಸುದಾರರಿಗೆ ವಾಪಸು ನೀಡಿ ಮಾನವೀಯತೆ ಮೆರೆದಿದ್ದಾರೆ. ಮತ್ತು ಸಮಾಜ ಏಳಿಗಗಾಗಿ ಬಡ ವಿದ್ಯಾರ್ಥಿಗಳಿಗೆ, ಬಡವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಇವರದು. ಕನ್ನಡ ಸರಕಾರಿ ಶಾಲೆಗಳಿಗೆ ತನ್ನ ಸ್ವಂತ ಹಣದಿಂದ ವಾಟರ್ ಫಿಲ್ಟರ್, ಕ್ರೀಡಾ ಸಾಮಾಗ್ರಿ ಗಳನ್ನು ಕೊಡುಗೆ ನೀಡಿ ಸರಕಾರಿ ಶಾಲೆ ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ -19 ಸಂದರ್ಭದಲ್ಲಿ ಆಶಕ್ತರಿಗೆ ಫುಡ್ ಕಿಟ್, ಆಶಾಕಾರ್ಯಕರ್ತೆಯವರ ಜೊತೆ ಸಕ್ರಿಯವಾಗಿ ಕೆಲಸ ಮಾಡಿ, ನಾಗರಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ, ಲಾಕ್ ಡೌನ್ ಸಮಯದಲ್ಲಿ ರೋಗಿಗಳಿಗೆ ಮತ್ತು ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದ್ದಾರೆ. ಕುಂದಾಪುರದ ಸಾರ್ವಜನಿಕ ವಲಯಕ್ಕೆ ಕಂಟಕ ಪ್ರಾಯವಾಗಿದ್ದ ಮಾನಸಿಕ ಅಸ್ವಸ್ಥನನ್ನು ಕಂಡು ಕುಂದಾಪುರದ ASI ಸದಾಶಿವ್ ಗೋರೋಜಿ ಅವರ ಮತ್ತು ಸಾಮಾಜಿಕ ಕಾರ್ಯಕರ್ತ ಜೊತೆಗೂಡಿ ಅವರನ್ನು ಚಿಕಿತ್ಸೆಗೆ ಒಳಪಡಿಸಿದರು, ಹೀಗೆ ಹಲವಾರು ಸಾಮಾಜಿಕ ಕೆಲಸವನ್ನು ಮಾಡುವುದರ ಜೊತೆಗೆ ಕುಂದಾಪುರ ಜನತೆ ಚಿರಪರಿಚಿತ.
ಕೆನಾಡದ ಜೆ. ಸಿ. ಡಬಲ್ಟ್ ಅವರ ಫೇಸ್ಬುಕ್ ವಾಲ್ ನಲ್ಲಿ ಕಿರಣ್ ಅವರ ಬಗ್ಗೆ ಅವರು ಬರೆದಿರುವುದು
ಅಖಿಲ ಭಾರತ ಬ್ರಾಹ್ಮಣ ಸಮ್ಮೆಳನದಲ್ಲಿ ಹೋಟೆಲ್ ಉದ್ಯಮಿ ಒಬ್ಬರು ಬಿಲ್ಲವರನ್ನು ನಿಂದಿಸಿದ ಪ್ರಕರಣ ಕುಂದಾಪುರದಲ್ಲಿ ಪ್ರಕ್ಷುಬದ್ಧ ಸೃಷ್ಟಿಯಾಗಿತ್ತು. ವ್ಯಕ್ತಿ ಸಾಕಷ್ಟು ಪ್ರಭಾವಶಾಲಿಯಾದ್ದರಿಂದ ಅವರನ್ನು ಎದುರಿಸುವ ಸಾಹಸಕ್ಕೆ ಯಾರು ಮುಂದೆ ಆಗಲಿಲ್ಲ. ಆಗ ಒಬ್ಬಂಟಿಯಾಗಿ ಬಿಲ್ಲವ ಪರವಾಗಿ ಹೋರಾಟಕ್ಕೆ ನಿಂತವರು ಕಿರಣ್ ಪೂಜಾರಿ, ಸಾಕಷ್ಟು ಪ್ರಭಾವಶಾಲಿ ವ್ಯಕ್ತಿಗಳ ಫೋನ್ ಕರೆ, ಹಣದ ಆಮಿಷ, ಜೀವ ಬೆದರಿಕೆ ಬಂದರು ದೃತಿಗೆಡದೆ, ಛಲಬಿಡದ ತ್ರಿವಿಕ್ರಮನಂತೆ ನಿಂತು ಎದುರಿಸಿ, ಬಿಲ್ಲವರಿಗೆ ಅವಹೇಳನ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಲೆ ಬೇಕು ಎಂದು ಪಣತೊಟ್ಟು ಹೋರಾಟ ಮುನ್ನಡಿಸಿದರು, ಆಗ ಇವರ ಹೋರಾಟಕ್ಕೆ ಪ್ರವೀಣ್ ಕುಮಾರ್ ಎಂ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ.) ಸಂಘಟನೆ ಜೊತೆಯಾಯಿತು ಹಾಗೂ ಮತ್ತೊಬ್ಬ ಯುವ ಹೋರಾಟಗಾರ ಕರ್ಕಿ ಪ್ರಶಾಂತ್ ಜೊತೆಗೂಡಿದರು. ಹೋರಾಟದ ತೀವ್ರತೆಯನ್ನು ನೋಡಿ ಉದ್ಯಮಿ ಸಾರ್ವಜನಿಕವಾಗಿ ಪತ್ರಿಕಾ ಹೇಳಿಕೆ ಕೊಡುವುದರ ಮೂಲಕ ಬಿಲ್ಲವ ಸಮುದಾಯಕ್ಕೆ ಕ್ಷಮೆಯಾಚಿಸಿದರು.
ಪ್ರಸುತ್ತ ಕಿರಣ್ ಪೂಜಾರಿಯವರು ಪ್ರವೀಣ್ ಕುಮಾರ್ ಎಂ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜದ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸ್ಪಂದಿಸಿ ಅವರಿಗೆ ಆಶಾಕಿರಣವಾಗಿದ್ದರೆ. ಸಾಕಷ್ಟು ಆಶಕ್ತ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದೆ ಇದ್ದಾಗ ಕಿರಣ್ ಮಿಲಪ್ ಅನ್ನುವ ಫಂಡ್ ರೈಸರ್ ಕಂಪನಿ ಜೊತೆಗೂಡಿ ಅವರಿಗೆ ಸಹಾಯ ಮಾಡಿರುತ್ತಾರೆ. ಹಿರಿಯ ನಾಗರಿಕರಿಗೆ ತೊಂದರೆ ಆದಾಗ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಕೆಲವು ಸಂಘಟನೆಗಳು ಇವರನ್ನು ಗುರುತಿಸಿ ಸನ್ಮಾನಿಸಲು ಮುಂದಾಗ ಇವರು “ನಿಮ್ಮ ಪ್ರೀತಿಗೆ ನಾನು ಚಿರಋಣಿ, ನನಗೆ ಮಾಡುವ ಸನ್ಮಾನಕ್ಕೆ ಆಗುವ ಖರ್ಚಿನಲ್ಲಿ(ಆದಾಂಜು 5ಸಾವಿರ) ಒಂದು ಬಡ ವಿದ್ಯಾರ್ಥಿಗೆ ನೀಡಿ ಅವರ ಓದಿಗೆ ಸಹಾಯ ಮಾಡಿ” ಎನ್ನುವ ಇವರ ಮಾತನ್ನು ಕೇಳಿ ಆಶ್ಚರ್ಯ ಪಟ್ಟವರೆ ಹೆಚ್ಚು. ಇಂದಿನ ಕಾಲದಲ್ಲಿ ಹಾರ, ತುರಾಯಿ, ಹೆಸರಿಗೆ ದುಡ್ಡು ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವ ಕಾಲದಲ್ಲಿ, ಅಪರೂಪದ ವ್ಯಕ್ತಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅನುಯಾಯಿ.
ಅನ್ಯಾಯವನ್ನು ಧೈರ್ಯವಾಗಿ ಎದುರಿಸಿ ನಿಲ್ಲುವ ಜೀವ ಬೆದರಿಕೆ ಇದ್ದರು ಯಾವುದನ್ನೂ ಲೆಕ್ಕಿಸದೆ ಸಮಾಜದ ಏಳಿಗೆಗಾಗಿ ದುಡಿಯುವ ನಿಮ್ಮ ಈ ಮನಸಿಗೆ ಇನ್ನಷ್ಟು ಧೈರ್ಯ ಕೊಡಲಿ ಮತ್ತು ಸೇವೆ ಮಾಡಲು ದೇವರು ಅನುಗ್ರಹಿಸಲಿ ಒಳ್ಳೆಯದಾಗಲಿ ಎಂದು ಹಾರೈಸುವ
ಬಿಲ್ಲವ ವಾರಿಯರ್ಸ್ ತಂಡ
ಬರಹ : ✍ ಪ್ರಶಾಂತ್ ಅಂಚನ್ ಮಸ್ಕತ್ತ್