ಬಿಲ್ಲವ ಈಡಿಗ ಸಮುದಾಯದ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ನಾರಾಯಣ ಗುರು ಶಕ್ತಿ ಪೀಠದ ಡಾ.ಶ್ರೀ ಪ್ರಣವಾನಂದಸ್ವಾಮೀಜಿ ಅವರು ಇಂದು ಬಂಟ್ವಾಳದಲ್ಲಿ ಬಿಲ್ಲವ ಸಮುದಾಯದ ಧೀಮಂತ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನಪೂಜಾರಿ ಅವರನ್ನು ಭೇಟಿಯಾದರು. ಸ್ವಾಮೀಜಿಯವರು ನಡೆಸುತ್ತಿರುವ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಭರವಸೆನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಉಪಸ್ಥಿತರಿದ್ದರು.