TOP STORIES:

ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ಲಕ್ಷ್ಮೀಶ್ ಸುವರ್ಣ.


ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ತಿಮ್ಮಪ್ಪ ಪೂಜಾರಿ ಮತ್ತು ಶಶಿಕಲಾ ಟಿ ಸುವರ್ಣ ಇವರ ಮುದ್ದಿನ ಮಗ ಲಕ್ಷ್ಮೀಶ್ ಸುವರ್ಣ

ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು ಆದರೆ ಇವರಿಗೆ ಶಾಲಾ ದಿನಗಳಲ್ಲಿ ಯಾವುದೇ ರೀತಿಯ ಬೆಂಬಲ ಅಥವಾ ತಾವೇ ಮುಂದೆ ಹೋಗುವಷ್ಟು ಧೈರ್ಯ ಇರಲಿಲ್ಲ. ಹಾಡುಗಾರನಾಗಿ ಬೆಳೆಯಬೇಕು ಎಂಬ ಆಸೆಯೂ ನೆರವೇರಲಿಲ್ಲ . ಆದರೆ ನಿರೂಪಕನಾಗಿ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು ಇವರ ಕಂಚಿನ ಕಂಠದ ಧ್ವನಿಯಿಂದ ಎಂಟು ವರ್ಷದಿಂದ ನಿರೂಪಣೆಯ ಹಾದಿಯಲ್ಲಿ ಮುಂದುವರಿದರು ಕರ್ನಾಟಕದ ಅನೇಕ ಕಡೆ ಮೈಸೂರ್, ಚಿಕ್ಕಮಂಗಳೂರು, ಶೃಂಗೇರಿ,ಕೊಪ್ಪ,ಉಡುಪಿ, ಮಂಗಳೂರು, ಜೈಪುರ್, ಬಾಳೆಹೊನ್ನೂರು, ಕಾಸರಗೋಡು, ಪುತ್ತೂರು, ಸುಳ್ಯ, ಮುಂಬೈಗಳಲ್ಲಿ ಕಾರ್ಯಕ್ರಮ ನೀಡಿ ತಮ್ಮ ವಾಕ್ ಚಾತುರ್ಯದಿಂದಲೇ ಜನ ಮನ ಗೆದ್ದಿದ್ದಾರೆ. ಓಮನ್ ಬಿಲ್ಲವಾಸ್ ಅವರು ಆಯೋಜಿಸಿದ ಬಲೇ ತೆಲಿಪಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು ಆದರೆ ಕೋರೋನ ದ ಲಾಕ್ ಡೌನ್ ಕಾರಣ ಅವಕಾಶ ಕಳೆದುಕೊಂಡರು

ತನ್ನ ಪ್ರಾಥಮಿಕ ಶಿಕ್ಷಣವನ್ನು ಜೆಪ್ಪಿನಮೊಗರು ಗವರ್ನಮೆಂಟ್ ಸ್ಕೂಲ್ ಮತ್ತು ಪ್ರೌಢ ಶಿಕ್ಷಣವನ್ನು ಕ್ಯಾಸಿಯಾ ಹೈ ಸ್ಕೂಲ್ ನಲ್ಲಿ ಮಾಡಿ ಮುಗಿಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕು ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಕೊಂಡಾಗ ಇವರ ಕೈ ಹಿಡಿದದ್ದು ಕಲಾ ಮಾತೆ ಇವರು ಕೇವಲ ನಿರೂಪಕರಾಗಿರದೆ ಅನೇಕ ತುಳು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಸಿನಿಮಾ, (ತಂಬಿಲ, ಭೋಜರಾಜ್ ಎಮ್ ಬಿ ಬಿ ಎಸ್, ಭಟ್ಕಳ,)ಧಾರಾವಾಹಿ (ಅಜನೆ) ಮತ್ತು ಕಿರು ಚಿತ್ರ (ಪ್ಲಾನ್ –ಸಿ, ಆ ಒಂದು ಕೆರೆ) ಹೀಗೆ ತನ್ನಲ್ಲೂ ಒಬ್ಬ ಕಲಾವಿದ ಇದ್ದಾನೆ ಎಂದು ತೋರಿಸಿಕೊಟ್ಟಿದ್ದಾರೆ. ಜೀವನದಲ್ಲಿ ದೊಡ್ಡ ಕಲಾವಿದ ಆಗಬೇಕು, ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆಯಂತೆ. ಹಾಗೆಯೇ ನಿರೂಪಣೆ ಯಲ್ಲಿಯೂ ಒಳ್ಳೆಯ ಹೆಸರು ಮಾಡಬೇಕು ಮತ್ತು ಹೊರ ದೇಶದಲ್ಲಿಯೂ ವಾಕ್ ಚಾತುರ್ಯ ತೋರಿಸಬೇಕು ಎನ್ನುವ ಕನಸು ನನಸಾಗಲಿ ಇವರ ಈ ಎಲ್ಲಾ ಆಸೆಗೆ ಮನೆಯವರು ಪ್ರೋತ್ಸಾಹ ಮತ್ತು ಮಡದಿ ಶ್ರೀಮತಿ ಶುಭ ಲಕ್ಷ್ಮಿ ಯವರ ಸಂಪೂರ್ಣ ಪ್ರೋತ್ಸಾಹ, ಬೆಂಬಲ ಇದೆ.

ಪ್ರಸ್ತುತ ಈಗ ಇವರು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ನಾಮಫಲಕ ಕಲಾಗಾರರ ಸಂಘದ ಅಧ್ಯಕ್ಷರಾಗಿ ಬಿರ್ವೆರ್ ಕುಡ್ಲ ವಕ್ತಾರೆ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ತನ್ನ ಜೀವನಕ್ಕಾಗಿ ತನ್ನದೇ ಆದ ಸುವರ್ಣ ಗ್ರಾಫಿಕ್ಸ್ ಸ್ಟುಡಿಯೋ ನಡೆಸಿಕೊಂಡು ಹೋಗುತ್ತಿದ್ದಾರೆ.(ಕಾರ್, ಬೈಕ್ ಇದರ ಗ್ರಾಫಿಕ್ಸ್, ಸ್ಟಿಕರ್ ಕಟ್ಟಿಂಗ್, ನೇಮ್ ಪ್ಲೇಟ್ )

ತಾನು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಇವರ ಕನಸು ಆದಷ್ಟು ಬೇಗ ಈಡೇರಲಿ.

ಕನ್ನಡ ತುಳು ಚಿತ್ರ ರಂಗದಲ್ಲಿ ಒಳ್ಳೆಯ ಅವಕಾಶ ಸಿಗಲಿ, ಕನ್ನಡದಲ್ಲಿ ಅಭಿನಯಿಸುವ ಆಸೆಯು ಬೇಗ ಫಲಿಸಲಿ, ಕಲಾಮಾತೆ ಮತ್ತು ತುಳುನಾಡಿನ ದೈವ ದೇವರುಗಳ ಅನುಗ್ರಹ ಸದಾ ಇರಲಿ ಒಳ್ಳೆಯದಾಗಲಿ ನಿಮಗೆ

 

ಬರಹ:✍ಪ್ರಶಾಂತ್ ಅಂಚನ್ ಮಸ್ಕತ್


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »