ನಾವು ಸತ್ತ ಮೇಲೆ ನಮ್ಮ ಫೇಸ್ಬುಕ್ , ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ..?. ಈ ರೀತಿಯ ಅನೇಕ ಪ್ರಶ್ನೆಗಳುಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ. ಹೆಚ್ಚಿನ ಜನರಲ್ಲಿ ಕನಿಷ್ಠಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆಏನಾಗುವುದು ಎಂದು ನಿಮಗೆ ತಿಳಿದಿದೆಯಾ?. ಸತ್ತ ಮೇಲೆ ನಮ್ಮ ಫೇಸ್ಬುಕ್ , ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆಏನಾಗುತ್ತದೆ, ಯಾರಾದರು ನಮ್ಮ ಖಾತೆಯನ್ನು ಹ್ಯಾಕ್ ಮಾಡಿ ಕೆಟ್ಟ ಸಂದೇಶ ಫೋಟೋಗಳನ್ನು ಹಂಚಿಕೊಂಡರೆ ಏನುಮಾಡೋದು..? ಈ ರೀತಿಯ ಅನೇಕ ಪ್ರಶ್ನೆಗಳು ಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಫೇಸ್ಬುಕ್:
ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲವಷ್ಟೆ. ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು. ಅಲ್ಲಿ ನೀವುಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.
ಇನ್ಸ್ಟಾಗ್ರಾಮ್:
ಹಾಗೆಯೆ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳನ್ನು ಅಳಿಸಲು ಅಥವಾ ಅವರ ಸಾವಿನ ನಂತರ ಅವುಗಳನ್ನುಸ್ಮರಣಾರ್ಥವಾಗಿ ಪರಿವರ್ತಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಸ್ಮರಣೀಯವಾದ ಫೇಸ್‌ಬುಕ್ ಪುಟವು ಇತರ ಪುಟಗಳಂತೆಕಾಣುತ್ತದೆ. ಆದರೆ, ವ್ಯಕ್ತಿಯ ಹೆಸರಿನ ಮುಂದೆ “Remembering” ಎಂಬ ಪದವನ್ನು ನೋಡಬಹುದು. ಫೇಸ್‌ಬುಕ್‌ನಂತೆಯೇ, ಇನ್ಸ್ಟಾಗ್ರಾಮ್ ಖಾತೆಯನ್ನು ಸ್ಮರಣೀಯಗೊಳಿಸಬಹುದು ಅಥವಾ ಅಳಿಸಬಹುದಾದ ಆಯ್ಕೆಯನ್ನು ಹೊಂದಿದೆ. ಆದರೆಖಾತೆಯನ್ನು ಸ್ಮರಣಾರ್ಥವಾಗಿಸಲು, ಜನರು ಮರಣದ ಪುರಾವೆಯೊಂದಿಗೆ ಇನ್ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕು.
ಟ್ವಿಟರ್:ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡುಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್ಗೆಮನವಿ ಮಾಡಿಕೊಳ್ಳುವ ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದು ಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.
ಜಿ– ಮೇಲ್:ಜಿ–ಮೇಲ್ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು, ಅದಕ್ಕಾಗಿ ‘ಪ್ರಿ ಸೆಲೆಕ್ಟೆಡ್ ಪೀರಿಡ್’ ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್ ನೀಡುವ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಪ್ರಿಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ಇದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.
ಯೂ ಟ್ಯೂಬ್:ಯೂ ಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವಕಾಶ ನೀಡಿದೆ. ಯೂ ಟ್ಯೂಬ್ನಲ್ಲಿ ಹಣ ಸಂಪಾದನೆಮಾಡುವಂತಹ ಲಕ್ಷಾಂತರ ಮಂದಿಗೆ ಇದು ತುಂಬಾ ಒಳ್ಳೆಯ ಆಯ್ಕೆ. ಸಾವಿನ ಬಳಿಕ ನಿಮ್ಮ ಚಾನೆಲ್ ಅನ್ನು ಯಾರುನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್ನ ಇನ್ ಆಯಕ್ಟಿವ್ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.
ಇವಿಷ್ಟು ಮಾಹಿತಿಗಳು ನಿಮಗಾಗಿ. ಇದರಲ್ಲಿ ನಿಮ್ಮ ಅಕೌಂಟ್ ಗಳಿದ್ದರೆ ಈಗಲೇ ಅಪ್ಡೇಟ್ ಮಾಡ್ಕೊಳ್ಳಿ.