ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷ್ ಪೂಜಾರಿಯವರಿಗೆ ಗುಜರಾತಿನ ಅಹಮದಾಬಾದಿನ ಗ್ಲೋಬಾಲ್ ಮ್ಯಾನೇಜ್ಮೆಂಟ್ ಕೌನ್ಸಿಲ್, “ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ” ವನ್ನು ನೀಡಿ ಗೌರವಿಸಿದೆ.
ತಮ್ಮ ಶೈಕ್ಷಣಿಕ ಭೋಧನಾ ಕೌಶಲ್ಯ,ಆನ್ ಲೈನ್ ಮುಖಾಂತರ ವಿದ್ಯಾರ್ಥಿ-ಪ್ರತಿಕ್ರಿಯೆ ಪಡೆಯುವ ಕಾರ್ಯವಿಧಾನ ಹಾಗೂ ಅವರ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮಗ್ರ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.