ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಥಾ ಬಿಂದು ಪ್ರಕಾಶನ ಮಂಗಳೂರು ಹಾಗೂಕಲ್ಕೂರ ಪ್ರತಿಷ್ಠಾನ ಇವರ ಸಹಯೋಗದಲ್ಲಿ ದಿನಾಂಕ 15.10.2021 ಶುಕ್ರವಾರ ಜರುಗಿದ
ತುಳು, ಕನ್ನಡ ಸಾಹಿತ್ಯೋತ್ಸವದಲ್ಲಿಕವಯಿತ್ರಿ , ನಿರೂಪಕಿ ,ನೃತ್ಯಗಾರ್ತಿ, ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಸೌರಭ ರತ್ನ” ರಾಜ್ಯ ಪ್ರಶಸ್ತಿ ನೀಡಿಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ|| ಆಕಾಶ್ ರಾಜ್ ಜೈನ್, ನರೇಶ್ ಕೆರೆಕಾಡು, ಕಥಾ ಬಿಂದು ಪ್ರಕಾಶನದ ರುವಾರಿ ಪಿ.ವಿ. ಪ್ರದೀಪ್ ಕುಮಾರ್, ಡಾ|| ಸುರೇಶ್ ನೆಗಳಗುಳಿ, ಡಾ|| ರಜನಿ ವಿ. ಪೈ, ಖ್ಯಾತ ಲೆಕ್ಕ ಪರಿಶೋಧಕ ಸಿಎ ಎಸ್. ಎಸ್ ನಾಯಕ್ಮೊದಲಾದ ಗಣ್ಯರು ಉಪಸ್ಥಿತರಿದ್ದರು.