TOP STORIES:

FOLLOW US

ನಿರೂಪಣಾ ಕ್ಷೇತ್ರದ ಸ್ವರ್ಣ ಕಲಶ: ವಿ ಜೆ ಶರ್ಮಿಳಾ ಅಮೀನ್


ಹಚ್ಚ ಹಸಿರ ಪ್ರಕೃತಿಯ ಮಧ್ಯೆ ಮೂಡುತಿದೆ ಛಾಯೇ, ತಂಗಾಳಿ ಅಲೆಗಳಲ್ಲಿ ಕೇಳಿಬರುತಿದೆ ಸ್ವರ ಮಾಧುರ್ಯದ ಮಾಯೆ!!

ಇಲ್ಲೊಬ್ಬರ ಬಗ್ಗೆ ಹೇಳ್ತಾ ಹೊರಟಾಗ ತನ್ನ ಜೀವನದಲ್ಲಿ ಯಾವುದರಲ್ಲಿ ಸಂತೋಷ ಸಿಗುತ್ತದೆ ಅದರಂತೆ ನಡೆದವರು.. ವೇದಿಕೆಯ ಮೇಲೆ ತನ್ನ ಸಿಹಿ ನಗುವಿನೊಂದಿಗೆ,ಪಟಪಟ ಮಾತಾಡುತ್ತಾ ನೋಡುಗರ ಕಿವಿ ಮನಗಳಿಗೆ ರಸದೌತಣ ನೀಡೋ ನಿರೂಪಣಾ ಕ್ಷೇತ್ರದ ಸ್ವರ್ಣ ಕಲಶ ವಿಜೆ ಶರ್ಮಿಳಾ ಅಮೀನ್.

ತುಳುನಾಡಿನ ಹೆಮ್ಮೆಯ ನಗರ ಮಂಗಳೂರಿನಲ್ಲಿ ,ಶೇಖರ್ ಅಮೀನ್ ಮತ್ತು ಕಮಲಾಕ್ಷಿ ಎಸ್ ಅಮೀನ್ ಇವರ ಮುದ್ದಿನ ಮಗಳಾಗಿ ಜನಿಸಿದರು..ಶಾಲಾ ದಿನಗಳಲ್ಲಿಯೇ ತಂದೆ ತಾಯಿಯ ಪ್ರೋತ್ಸಾಹದಿಂದ ಪ್ರತಿಯೊಂದು ಚಟುವಟಿಕೆಗಳಲ್ಲಿ ಪುಟ್ಟ ಸಂಸಾರದ ಜ್ಯೋತಿಯಾದವರಾಕೆ..ಶಾಲಾ ಕಾಲೇಜು ಶಿಕ್ಷಣವನ್ನು ವಿಕ್ಟೋರಿಯಾ ಬಾಲಕಿಯರ ಹೈಸ್ಕೂಲ್ ಲೇಡಿಹಿಲ್ ಹಾಗೂ ವಿಕ್ಟೋರಿಯಾ ಪಿಯು ಕಾಲೇಜ್ ಲೇಡಿಹಿಲ್ ನಲ್ಲಿ ಪೂರೈಸಿದ ಇವರು ಪದವಿ ಶಿಕ್ಷಣವನ್ನು ಎಸ್ ಡಿ ಎಂ ಮಂಗಳೂರಿನಲ್ಲಿ ಅಭ್ಯಸಿಸುತ್ತಾರೆ. ಎಂ ಬಿ ಎ ಇನ್ ಹೆಚ್ ಆರ್(MBA in HR) ಸಿಕ್ಕಿಂ ಮಣಿಪಾಲ್ ಯೂನಿವರ್ಸಿಟಿಯಲ್ಲಿ ಪೂರ್ಣಗೊಳಿಸಿರುತ್ತಾರೆ.

ಎಸ್ ಡಿ ಎಂ ನಲ್ಲಿ ಕಲಿಯುತ್ತಿರುವಾಗಲೇ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟ ಇವರು ಮತ್ತೆಂದೂ ಹಿಂತಿರುಗಿ ನೋಡೆ ಇಲ್ಲ. ಸಹಾಯಟಿವಿ ಮುಖಾಂತರ ಟಿ ವಿ ನಿರೂಪಣೆಯತ್ತ ಅಂಬೆಗಾಲಿಟ್ಟ ಇವರು ನಂತರದ ದಿನಗಳಲ್ಲಿ ದೈಜಿ ವರ್ಲ್ಡ್ ನಲ್ಲಿನಿರೂಪಣೆ ಮಾಡುತ್ತಾ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಇವೆಲ್ಲದರ ನಡುವೆ ಇವರು ನಡಸಿಕೊಟ್ಟ ಕಾರ್ಯಕ್ರಮಗಳ ಬಗ್ಗೆ ತಿಳಿದಾಗ ಒಮ್ಮೆಗೆ ಅನಿಸಿದುಂಟು,ಆಡು ಮುಟ್ಟದ ಸೊಪ್ಪಿಲ್ಲ. ಶರ್ಮಿಲಾ ನಿರೂಪಣೆ ಮಾಡದಂತಹ ಕ್ಷೇತ್ರವಿಲ್ಲ.

ಮೀಟ್ ಅ್ಯಂಡ್ ಗ್ರೀಟ್ ಆಪ್ ಕೊಲ್ಕತ್ತಾ ನೈಟ್ ರೈಡರ್ಸ್ (IPL- 2019) ಕ್ರಿಕೆಟರ್ಸ್ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ, ರಾಷ್ಟ್ರಮಟ್ಟದ ದೈಜಿವಲ್ಡ್ ಶಾರ್ಟ್ ಪಿಲ್ಮ್ ಅವಾರ್ಡ್,ರಾಷ್ಟ್ರಮಟ್ಟದ ಅರೇನಾ ಶಾರ್ಟ್ ಪಿಲ್ಮ್ ಅವಾರ್ಡ್,ದೈಜಿವಲ್ಡ್ ಸ್ಟೂಡಿಯೋ voice ಇದರ ಸಿಂಗಿಂಗ್ ರಿಯಾಲಿಟಿ ಶೋ ,ಜ್ಯೂನಿಯರ್ ಮಸ್ತಿ ಸೀಝನ್ -೨ ಡ್ಯಾನ್ಸ್ ರಿಯಾಲಿಟಿ ಶೋ, ಕನ್ನಡ ಮತ್ತು ತುಳು ಚಿತ್ರರಂಗದ ಖ್ಯಾತ ಸಿನಿತಾರೆಯರ ಸಂದರ್ಶನ ,ಲಗೋರಿ ಪ್ರೀಮಿಯರ್ ಲೀಗ್, ಮಂಗಳೂರ್ ಪ್ರೀಮಿಯರ್ ಲೀಗ್, ರೆನಾಲ್ಟ್ ಕ್ವಿಡ್ ,ರೆನಾಲ್ಟ್ ಡಸ್ಟರ್ ದಟ್ಸಬ್ ರೆಡಿ ಗೋ ಲಾಂಚ್ ,ಸಿನೆಮಾ ,ಧಾರಾವಾಹಿ ಹಾಗೂ ಆಡಿಯೋ ರಿಲೀಸ್ ಕಾರ್ಯಕ್ರಮಗಳ ನಿರೂಪಣೆ..ಐಟಿಸಿ ,ಯುಬಿ ಗ್ರೂಪ್ ,ಬಿರ್ಲಾ ಗ್ರೂಪ್, ಅಸ್ಟ್ರಾಲ್ ಪೈಪ್ಸ್ ಸೇರಿದಂತೆ ಹಲವಾರು ಕಾರ್ಪೊರೇಟ್ ಸಂಸ್ಥೆಗಳ ಕಾರ್ಯಕ್ರಮ, ಕರ್ನಾಟಕದಾದ್ಯಂತ ಸ್ಟಾರ್ ನೈಟ್ ಮತ್ತು ಡ್ಯಾನ್ಸ್ ಇನ್ನಿತರ ಕಾರ್ಯಕ್ರಮಗಳ ನಿರೂಪಣೆ, ಸಂಭ್ರಮ ಶಾರ್ಟ್ ಪಿಲ್ಮ್ ಅವಾರ್ಡ್, ರೆಡ್ ಎಪ್ ಎಂ ತುಳು ಸಿನೆಮಾ ಅವಾರ್ಡ್ ಸೇರಿದಂತೆ ನೂರಾರು ಪ್ರಖ್ಯಾತ ಕಾರ್ಯಕ್ರಮಗಳ ಮೂಲಕ ನಿರೂಪಣೆಯ ಕ್ಷೇತ್ರದಲ್ಲಿ ರಾಜ್ಯವನ್ನಷ್ಟೇ ಅಲ್ಲದೇ ದೇಶದಾದ್ಯಂತ ಸಂಚರಿಸಿದ ಹೆಗ್ಗಳಿಕೆಗೆ ಶರ್ಮಿಳಾ ಅಮೀನ್ ಪಾತ್ರರಾಗುತ್ತಾರೆ.

ಇವರ ನೆನಪಿನಾಳದಲ್ಲಿ ಅಚ್ಚಳೀಯದೇ ಉಳಿದಂತಹ ನಿರೂಪಣಾ ಕ್ಷಣಗಳೆಂದರೆ, ದುಬೈಯಲ್ಲಿ ನಡೆದಂತಹ ಬಿಲ್ಲವಾಸ್ ದುಬೈ ಕಾರ್ಯಕ್ರಮ ಹಾಗೂ ವಿಶ್ವವಿಖ್ಯಾತ ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಡೆಸಿದಂತಹ ನಿರೂಪಣೆಯ ಕ್ಷಣಗಳನ್ನು ನೆನಪಿಸುತ್ತಾರೆ.

ತನ್ನ ಕಂಚಿನ ಕಂಠದ ಮೂಲಕ ಮನೆಮಾತಾದ ಇವರು ಹಲವಾರು ಕಾರ್ಯಕ್ರಮಗಳಿಗೆ ಧ್ವನಿಯನ್ನು ನೀಡಿರುತ್ತಾರೆ. ಇತ್ತೀಚೆಗೆ ನಿತೇಶ್ ಪೂಜಾರಿ ಮಾರ್ನಾಡ್ ಇವರ ಯೂಟ್ಯೂಬ್ ಚಾನೆಲ್ನಲ್ಲಿ ತುಳುನಾಡಿನ ಸಂಸ್ಕೃತಿ,ಆಚಾರ ವಿಚಾರವನ್ನು ಬಿಂಬಿಸುವ ನಮ್ಮ ತುಳುನಾಡುನಲ್ಲಿಯೂ 11 ಜನ ಪ್ರಸಿದ್ದ ನಿರೂಪಕರಲ್ಲಿ ತಮ್ಮ ಧ್ವನಿಯನ್ನು ನೀಡಿ ಜನಮಾನಸದಲ್ಲಿ ಅಚ್ಚಳೀಯದೇ ಉಳಿದವರು.

ನಿರೂಪಣೆಯಲ್ಲದೇ ಹಲವಾರು ಕಾರ್ಯಕ್ರಮಗಳಿಗೆ ತೀರ್ಪುಗಾರ್ತಿಯಾದಂತಹ ಹೆಗ್ಗಳಿಕೆ ಇವರದ್ದು. ತಾನು ಕಲಿತ ಎಸ್ ಡಿ ಎಂ ಕಾಲೇಜ್ ,ಕೆನರಾ ಕಾಲೇಜು, ರೋಟರಿ ಕ್ಲಬ್ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸಿರುತ್ತಾರೆ.

ಕಾಲೇಜು ದಿನಗಳಿಂದಲೇ ಇವರ ನಿರೂಪಣಾ ಶೈಲಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದೆ. ಹಾಗೂ, ಹಲವಾರು ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟು ,ಹೊರದೇಶದಲ್ಲಿಯೂ ಸನ್ಮಾನಿಸಲ್ಪಟ್ಟು ಹುಟ್ಟಿದ ಊರಿಗೆ ಹಾಗೂ ತನ್ನ ಮನೆಯವರಿಗೆ ಕೀರ್ತಿಯನ್ನು ತಂದಿರುತ್ತಾರೆ..

ಬಾಲ್ಯದಿಂದಲೂ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ,ಸ್ಪರ್ಧೆಗಳಲ್ಲಿ ಪಾಲು ಪಡೆಯಲು ಪ್ರೇರಣಾ ಶಕ್ತಿಯಾದಂತಹ ತನ್ನ ತಂದೆತಾಯಿ ನನಗೆ ಸ್ಪೂರ್ತಿ ಎನ್ನುತ್ತಾರೆ ಶರ್ಮಿಳಾ.

ಯುವ ಜನತೆ ಹಾಗೂ ಪ್ರತಿಭೆಗಳಿಗೆ ಸ್ಪೂರ್ತಿಯ ಮಾತುಗಳನ್ನು ತಿಳಿಸಿ ಎಂದು ಕೇಳಿಕೊಂಡಾಗ , ಜೀವನದ ಪ್ರತಿ ಕ್ಷಣಗಳನ್ನು ಖುಷಿಯಿಂದ ಸ್ವೀಕರಿಸಿ..ಬೇರೆಯವರನ್ನು ನೋಡಿ ನಿಮ್ಮ ಜೀವನವನ್ನು ರೂಪಿಸಬೇಡಿ.ನಮ್ಮದೇ ಹಾದಿಯಲ್ಲಿ ಸಾಗಿ ನಮ್ಮ ಸ್ವಂತ ಶೈಲಿಯನ್ನು ಹೊಸದಾಗಿ ನಿರ್ಮಿಸಬೇಕು..ನಿಮ್ಮ ಕನಸನ್ನು ಸಕಾರಗೊಳಿಸಲು ಪ್ರಯತ್ನಿಸಿ ನಿಮಗೆ ಖಂಡಿತವಾಗಿಯೂ ಅದರಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ.ಜೀವನದಲ್ಲಿ ಸೋತ ಕ್ಷಣಗಳನ್ನು,ನಮ್ಮ ಕಷ್ಟವನ್ನು ಯೋಚಿಸಿ ಕೊರಗುವುದಕ್ಕಿಂತ ಅದನ್ನು ದೈರ್ಯದಿಂದ ಎದುರಿಸಿ.ಯಶಸ್ಸಿನ ಹಿಂದೆ ಓಡುವುದಕ್ಕಿಂತ ನಮಗೆ ಯಾವುದರಲ್ಲಿ ತೃಪ್ತಿಯಿದೆ ಅದರಂತೆ ನಡೆಯಿರಿ ಎನ್ನುತ್ತಾರೆ ಶರ್ಮಿಳಾ.

ಪ್ರಸ್ತುತ ದಿನದಲ್ಲಿ ಶರ್ಮಿಳಾರವರು ದೈಜಿವಲ್ಡ್ ನ ನಿರೂಪಣೆ ಜೊತೆಜೊತೆಗೆ ಟಾಟಾ ಕನ್ಸಲ್ಟನ್ಸಿ ಸರ್ವಿಸ್ (TCS) ಇದರ ಉದ್ಯೋಗಿಯಾಗಿರುವ ಇವರು ತಾಯಿ ಹೆಮ್ಮೆಯ ಮಗಳಾಗಿ, ತಂಗಿ ಲಿಖಿತಾರ ಮುದ್ದಿನ ಅಕ್ಕನಾಗಿ, ಈಶಾನ್ ಎಸ್ ಅಂಚನ್ರ ಮುದ್ದಿನ ಮಡದಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ..ಇವರ ಮುಂದಿನ ಜೀವನವು ಯಶ ಕಾಣಲಿ ,ನಿರೂಪಣೆಯ ಕ್ಷೇತ್ರದಲ್ಲಿ ಇವರ ಹೆಸರು ಬಾನಂಗಳದಲ್ಲಿ ರಾರಾಜಿಸಲಿ. ದೈವದೇವರ ಗುರುಹಿರಿಯರ ಆಶೀರ್ವಾದ ಸದಾ ಇವರ ಮೇಲಿರಲಿ ಎಂದು ಆಶಿಸುತ್ತಾ ನಿರೂಪಣಾ ಕ್ಷೇತ್ರದ ಸಾಧಕಿಯ ಕಿರುಪರಿಚಯವನ್ನು ಇಲ್ಲಿಗೆ ಪೂರ್ಣಗೊಳಿಸುತ್ತೇನೆ.

By: ನೀತು ಬೆದ್ರ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »