TOP STORIES:

FOLLOW US

ನಿಸ್ವಾರ್ಥ ಸೇವೆಯಲ್ಲಿ ಭಾರತಮಾತೆಯ ನಿಸ್ವಾರ್ಥಸೇವಕ ಗಡಿನಾಡ ಯೋಧ ನವೀನ್ ಪೂಜಾರಿ


ಭಾರತಮಾತೆಯ ನಿಸ್ವಾರ್ಥಸೇವಕ ಗಡಿನಾಡ ಯೋಧ ನವೀನ್ ಪೂಜಾರಿ

“ದೇಶ ಸೇವೆಯೇ ಈಶ ಸೇವೆ” ಎಂಬ ಧ್ಯೇಯವಾಕ್ಯದಂತೆ ಭರತಪುಣ್ಯ ಭೂಮಿಯ ಮಣ್ಣಿನ ಋಣದ ಸಾರ್ಥಕತೆಯನ್ನು ನಿಜವಾದ ದೇಶಭಕ್ತಿ ಪ್ರೇಮದ ಮಂತ್ರ,ತಂತ್ರದಂತೆ ಪ್ರಾಮಾಣಿಕತೆಯ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸುವವರೇ ನಿಜವಾದ ದೇಶದ ಭೂಸೇನೆಯ ಸೈನಿಕರು. ಸೈನಿಕರು ಹಗಲಿರುಳು ಮಳೆ ತೀವ್ರವಾದ ಚಳಿ ಬಿಸಿಲನ್ನು ಲೆಕ್ಕಿಸದೆ, ತನ್ನ ಪ್ರಾಣವನ್ನೂ ಲೆಕ್ಕಿಸದೆ ಅಷ್ಠ ದಿಕ್ಕಿನಲ್ಲೂ ಗಡಿನಾಡ ಕಾಯುತ್ತಾ ರಾಷ್ಟ್ರ ಮಾತೆಯ ಸುರಕ್ಷತೆಗಾಗಿ ತನ್ನ ಹುಟ್ಟೂರು, ಸಕುಟುಂಬಿಕರನ್ನು ಬಿಟ್ಟು ದೂರದ ಬೇರೆ ಬೇರೆ ರಾಜ್ಯ ಪ್ರದೇಶದಲ್ಲಿ ವರ್ಗಾವಣೆಗೊಳ್ಳುತ್ತ ನಿತ್ಯಕಠಿಣ ಜೀವನ ಕ್ರಮ ಚಟುವಟಿಕೆದೊಂದಿಗೆ ನಿರಂತರವಾಗಿ ಸೇವೆಗೈಯುತ್ತ ಪ್ರಾಣತ್ಯಾಗ ಮಾಡುವವರು ಹಾಗೇ ಪ್ರಾಣತ್ಯಾಗ ಮಾಡಲು ಸಿದ್ದರಿರುವವರು ನಿಸ್ವಾರ್ಥ ಸೇವಾ ಮಾಣಿಕ್ಯರು ಅಂದರೆ ಭೂಸೇನೆಯ ನಮ್ಮ ಗಡಿನಾಡ ಸೈನಿಕರು.ಇಂದು ದೇಶದ ಪ್ರಜೆಗಳು ಯಾವುದೇ ಭಯದ ವಾತಾವರಣವಿಲ್ಲದೆ, ಸುಭದ್ರತೆ, ಸುರಕ್ಷತೆ,ನೆಮ್ಮದಿಯಿಂದ ಸುಖವಾಗಿ ನಿದ್ರಿಸಲು ಕಾರಣಿಕರ್ತರು ನಮ್ಮ ದೇಶದ ಹೆಮ್ಮೆಯ ಸೈನಿಕರು. “ದೇಶ ಸೇವೆಯೇ ಈಶ ಸೇವೆ”ಎನ್ನುವ ತತ್ವವನ್ನು ಭೂಸೇನೆ ಸೈನಿಕರು ಅಕ್ಷರಸಃ ಪಾಲಿಸುತ್ತಿದ್ದುದರಿಂದ ದೇಶದ ಮೂಲ ಶಕ್ತಿ ಆಗಿದ್ದಾರೆ.
ಭಾರತ ವಾಸಿಗಳೆಲ್ಲರೂ ಭೂಸೇನೆಗೊಂದು ಭಕ್ತಿ ಗೌರವದಿಂದ ನಮಿಸಿ ದೊಡ್ಡ ಜೈಕಾರ ,ಸಲಾಂ ಕೊಡಲೇ ಬೇಕಾಗಿದೆ.

ಇಪ್ಪತ್ತು ವರ್ಷಗಳಿಂದ ಭರತ ಮಾತೆಯ ಭೂಸೇನೆಯಲ್ಲಿ
ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಕಾರ್ಯ ನಿರ್ವಹಿಸುತ್ತಿರುವ ನಿಸ್ವಾರ್ಥ ದೇಶ ಸೇವಕ,ಸಾಮಾಜಿಕ ಹಿತ ಚಿಂತಕ,ದೇಶಭಕ್ತ,ಸುಸಂಸ್ಕೃತ,ಸದ್ಗುಣ,ಸಜ್ಜನ,ಗೃಹಸ್ಥ,
ಧೃಡಕಾಯದ ಆದರ್ಶ ವ್ಯಕ್ತಿತ್ವದ ಸಾಧಕ,ನಿಸ್ವಾರ್ಥ ಸೇವಾ ಮಾಣಿಕ್ಯ, ದೇಶದ ಆರಾಧಕ, ಗಡಿನಾಡ ಯೋಧರಾದ ನವೀನ್ ಪೂಜಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಬಿಳಿಯೂರು ಜನತಾ ಕಾಲನಿಯ ದಿವಂಗತ ಸೇಸಪ್ಪ ಪೂಜಾರಿ ಮತ್ತು ದಿವಂಗತ ರೋಹಿಣಿಯವರ ಐದು ಜನ ಮಕ್ಕಳಲ್ಲಿ ಮೂರನೆಯವರೇ ನವೀನ್ ಪೂಜಾರಿ.1981ರ ಜೂನ್ 15 ರಂದು ಜನಿಸಿದ ಅವರು ವಿದ್ಯಾಭ್ಯಾಸವನ್ನು ಸಮಾಜ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಅಯೋಧ್ಯಾ ನಗರ ಪೆರ್ನೆಯಲ್ಲಿ ಪದವಿ ಪೂರ್ವ ಶಿಕ್ಷಣ ಪೊರೈಸಿದ ಇವರು ಪ್ರಥಮ ಪಿಯುಸಿವರೆಗೆ ವಿದ್ಯಾಭ್ಯಾಸ ಪಡೆದಿರುತ್ತಾರೆ.

ನವೀನ್ ರವರು 2000ನೇ ಇಸವಿ ಜುಲೈ 4ರಂದು ಭಾರತೀಯ ಭೂಸೇನೆಗೆ ಕಾಲಿರಿಸಿ ಹೈದರಾಬಾದಿನಲ್ಲಿ ತರಬೇತಿ ಪಡೆದಿರುತ್ತಾರೆ. ಭೂಸೇನೆಯಲ್ಲಿ ತಮ್ಮ ನಿಸ್ವಾರ್ಥ,ಹೃದಯ ವೈಶಾಲ್ಯತೆಯ ಪ್ರಾಮಾಣಿಕ,ಸಾರ್ಥಕತೆಯ ಅವಿರತ ಶ್ರಮದ ಸೇವೆ ಕೊಟ್ಟು ಇಪ್ಪತ್ತುವರ್ಷ ಐದು ತಿಂಗಳ ಸೇವೆ ಸಲ್ಲಿಸಿ ಪ್ರಸ್ತುತ ಪಂಜಾಬಿನ ಬಟಿಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನವೀನ್ ಪೂಜಾರಿಯವರು ಪ್ರಪ್ರಥಮ ಎಂಟು ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ತುಂಬಾ ಕಠಿಣ ಕ್ಲಿಷ್ಟಕರ ಜೀವನ ಶೈಲಿಯಲ್ಲಿ ಕಾರ್ಯನಿರ್ವಹಿಸಿ ಎರಡು ವರ್ಷಗಳ ಕಾಲ ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ .ಇದು ಇವರ ಸರ್ವಿಸ್ ನಲ್ಲೇ ಅತ್ಯಂತ ಕಠಿಣಕರ ಜೀವನ ಅಂದರೆ ಜೀವದ ಹಂಗು ತೊರೆದು ಕರ್ತವ್ಯ ಮಾಡಿದಂತಹ ದಿನಗಳು ಅಂದರೆ ತಪ್ಪಾಗಲಾರದು. ತೀವ್ರವಾದ ಚಳಿ ಇದ್ದುದರಿಂದ ಆ ಮಂಜುಗಡ್ಡೆಯೊಂದಿಗೆ ಹರಸಾಹಸದಿಂದ ಸರಸವಾಡುತ್ತ ದೇಶ ಸೇವೆಯಲ್ಲಿ ತೊಡಗಿಸಿ ಕೊಂಡಂತಹ ಅವಸ್ಮರಣೀಯ ದಿನಗಳಿವು.ತದನಂತರ ಉಳಿದ ಹತ್ತು ವರ್ಷ ಐದು ತಿಂಗಳು ಸಾಮಾನ್ಯವಾಗಿ ಸೇವೆ ಸಲ್ಲಿಸಿರುತ್ತಾರೆ.

ನವೀನ್ ಅವರು ಪ್ರಾಮಾಣಿಕವಾಗಿ ದೇಶ ಸೇವೆ ಮಾಡಿದ ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ :-
2000-2001ಹೈದರಾಬಾದ್
2001-2004 ಜಮ್ಮುಕಾಶ್ಮೀರದ ನೌಶಾರ (ಇಂಡೋ- ಪಾಕ್ ಬಾರ್ಡರ್),2004-2008 ಜಮ್ಮುಕಾಶ್ಮೀರದ ಸತ್ವರಿ (ಇಂಡೋ- ಪಾಕ್ ಬಾರ್ಡರ್),2008-2012 ಸಿಕ್ಕಿಂನ ಗ್ಯಾಂಗ್ ಟೋಕ್ (ಇಂಡಿಯಾ- ಚೈನಾ ಬಾರ್ಡರ್)
2012-2018 ರಾಜಸ್ಥಾನದ ಜೋಧಪುರ,(ಇಂಡಿಯಾ- ಪಾಕ್ ಬಾರ್ಡರ್)
2018-2020 ಜಮ್ಮುಕಾಶ್ಮೀರದ ಸಿಯಾಚಿನ್(ಇಂಡಿಯಾ-ಚೈನಾ ಬಾರ್ಡರ್)
2020-2021ಪಂಜಾಬಿನ ಜಾನ್ಸಿ ಬಟಿಂಡದ(ಇಂಡಿಯಾ -ಪಾಕ್ ಬಾರ್ಡರ್)ನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೇಶದ ಒಳಿತಿಗಾಗಿ,ಪ್ರಜೆಗಳ ಉಳಿವಿಗಾಗಿ ತನ್ನ ಆಸೆ ಕನಸ್ಸುಗಳ ಧಾರೆ ಎರೆದು ಭಾರತಾಂಬೆಯ ಮಡಿಲಿಗಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟು ಸಾವು ಬದುಕಿನ ನಡುವೆ ಹೋರಾಟ ನಡೆಸಿ,ಸೇವೆಗೈಯುವ ಧೈರ್ಯವಂತಿಕೆ,ತ್ಯಾಗಮಯಿ ಜೀವನ ನಿಜಕ್ಕೂ ಪ್ರಶಂಸನೀಯ.

ನವೀನ್ ರವರ ಸಾರ್ಥಕ ದೇಶಸೇವೆಯನ್ನು ಗುರುತಿಸಿ ಪ್ರಸ್ತುತ ಒಟ್ಟಿಗೆ ಐದು ಸನ್ಮಾನ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ. ಮೊದಲನೇ ಸನ್ಮಾನ ಜೂನ್ 10ರಂದು 2006ರಲ್ಲಿ ಬಿಳಿಯೂರು ಶಾಲೆಯಲ್ಲಿ, 2018ರಲ್ಲಿ ಜೂನ್ 28ರಂದು ಕರ್ವೆಲುನಲ್ಲಿ, 2019ನೇ ಜನವರಿ 1 ರಂದು ಮಲ್ಲಡ್ಕ ಶಾಲೆಯಲ್ಲಿ, ಜುಲೈ 27 ರಂದು ಬಿಳಿಯೂರು ಭಜನಾ ಮಂದಿರದಲ್ಲಿ 2020ರಲ್ಲಿ ಪಡೆದಿರುತ್ತಾರೆ.

ದೇಶ ಕಾಯುವ ಸೈನಿಕ ನೊಂದಿಗೆ ಸಪ್ತಪದಿ ತುಳಿದು ಬಾಳಪಯಣದ ಹೆಜ್ಜೆಯಿಟ್ಟ ಮಾವು ಚಿಗುರುವ ಕಾಲ ಅಂದರೆ ವಸಂತಮಾಸ ನಳಿನಿ. ಎಂ. ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿ ಪ್ರಸ್ತುತ ಓರ್ವ ನವೀಶ್.ಎನ್ ಎಂಬ ಗಂಡು ಮಗನಿದ್ದು ಇವನು ತನ್ನ ವಿದ್ಯಾಭ್ಯಾಸವನ್ನು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಯಲ್ಲಿ ಪಡೆಯುತ್ತಿದ್ದಾನೆ.
ಇವರು ತನ್ನ ಮನೆಯವರ ಜೊತೆ ಅವಿನಾಭಾವ ಸಂಬಂಧವನ್ನು ಇಟ್ಟು ಕೊಳ್ಳುವುದರ ಜೊತೆಗೆ ಹಿರಿಯರನ್ನು ಸದಾ ಗೌರವಿಸುವ ಸ್ವಭಾವದವರು.ಇವರಿಗೆ ಕಬಡ್ಡಿ,ಗುಂಡೆಸತ,ವಾಲಿಬಾಲ್,ಕ್ರಿಕೆಟ್ ಆಡುವುದರಲ್ಲಿ ತುಂಬಾ ಆಸಕ್ತಿ.ಇನ್ನು ಇವರು ಕೇವಲ ಐದು ತಿಂಗಳ ಅವಧಿ ಮುಗಿದ ನಂತರ ಸೇವೆಯಿಂದ ನಿವೃತ್ತಿ ಹೊಂದಿ ನಿಸ್ವಾರ್ಥ ದೇಶ ಸೇವಕರೆನ್ನಿಸಿ ಕೊಳ್ಳುವುದರಲ್ಲಿ ಸಂಶಯವಿಲ್ಲ.

ನವೀನ್ ಅವರ ದೇಶಸೇವೆ ಇಂದಿನ ಯುವಜನತೆಗೆ ಪ್ರೇರಣೆಯಾಗಲಿ, ಮಾದರಿಯಾಗಲಿ.ಇವರನ್ನು ಮಾದರಿಯಾನ್ನಾಗಿಸಿ ಇನ್ನಷ್ಟು ಯುವಜನತೆ ಭಾರತೀಯ ಸೇನೆಯನ್ನು ಸೇರುವಂತಾಗಲಿ.
ಇವರಿಗೆ ಶ್ರೀ ಭೂನಾಡ ದೇವಿಯ ಶ್ರೀರಕ್ಷೆ, ಆಶೀರ್ವಾದ,ಆಯುರ್ ಆರೋಗ್ಯ,ಅಷ್ಟಶ್ವರ್ಯ,
ನೆಮ್ಮದಿ ಸದಾ ಕರುಣಿಸಲಿ, ಅಂತೆಯೇ ಇವರ ಉಜ್ವಲ ಭವಿಷ್ಯ ಸೂರ್ಯನಷ್ಟೇ ಪ್ರಕಾಶಿಸಲಿ,ಬಾಳಪಯಣದ ಮುಂದಿನ ಹಾದಿ ಸುಮದ ತೇರಿನಂತಿರಲಿ,ಆಸೆ ಕನಸುಗಳು ನನಸಾಗಲಿ ಎಂದು ಆಶಿಸುತ್ತಾ ತಮ್ಮ ನಿಸ್ವಾರ್ಥ ದೇಶ ಭಕ್ತಿ,ಪ್ರೇಮಕ್ಕಿದೋ ಆಧರನೀಯ ಗೌರವದ ಪ್ರಣಾಮಗಳು.

ಜೈ ಭಾರತ್ ಮಾತಾ ಕೀ ಜೈ

ಶ್ರೀಮತಿ ಅರ್ಚನ ಎಂ ಬಂಗೇರ ಕುಂಪಲ


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಬೆಸ್ಟ್ ಚೇರ್ಮನ್ ಅವಾರ್ಡ್


Share       ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕ್ ಗಳಲ್ಲಿ  ಒಂದಾದ ಮುಂಬೈಯ ಪ್ರತಿಷ್ಠಿತ *ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರ ದಕ್ಷ  *ಬೆಸ್ಟ್ ಚೇರ್ಮನ್* ಪ್ರಶಸ್ತಿಯನ್ನು *ಭಾರತ ಸರಕಾರದ ಜನರಲ್ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್


Read More »

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


Share       ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು


Read More »

ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರಿಡಲು ಮನವಿ


Share       ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು ಹಾಗೂ


Read More »

ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ


Share       ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ ನೇರ ನಡೆನುಡಿಯ, ದಿಟ್ಟ ಹೋರಾಟಗಾರ, ಭ್ರಷ್ಟಾಚಾರಿಗಳಿಗೆ ದುಃಸ್ವಪ್ನರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು


Read More »

ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ


Share       ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್‍ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ


Read More »

ಕಿನ್ನಿಗೋಳಿ: ಬುಡಸಹಿತ ಧರೆಗುರುಳಿದ ಅವಳಿ ವೀರರನ್ನು ತೊಟ್ಟಿಲು ಕಟ್ಟಿ ತೂಗಿದ್ದ ತಾಕೊಡೆ ಮರ ಇನ್ನು ನೆನಪು ಮಾತ್ರ


Share       ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ


Read More »