ನೀವು ಮಾಂಸಾಹಾರಿಯಾಗಿರಬಹುದು. ಅದರಲ್ಲೂ ಚಿಕನ್ ಹೆಚ್ಚು ತಿನ್ನಬಹುದು. ಕೋಳಿ ಬೆಳೆಯಲು ಇಂತಿಷ್ಟು ಕಾಲ ಬೇಕು. ಆದರೆ ಈಗಂತೂ ಕಡಿಮೆ ಸಮಯದಲ್ಲಿ ಕೋಳಿಯನ್ನ ಕೆಮಿಕಲ್ ನ ಸಹಾಯದಿಂದ ಬೆಳೆಸಲಾಗುತ್ತದೆ. ಈ ವೇಳೆ ಕೋಳಿಗೆ ಇಂಜೆಕ್ಷನ್ ಕೂಡಾ ಕೊಡಲಾಗುತ್ತದೆ.
ಹೀಗಾಗಿ ಸಾಕು ಕೋಳಿಗೂ ಫಾರಂ ಕೋಳಿಗೂ ವ್ಯತ್ಯಾಸ ಇರುತ್ತದೆ. ಆದರೂ ಈಗಂತೂ ಮೊದಲಿಗಿಂತ ಫಾರಂನಲ್ಲಿ ಬೆಳೆಸಿದ ಕೋಳಿಗಳನ್ನು ಹೆಚ್ಚು ಪದಾರ್ಥಕ್ಕೆ ಬಳಸಲಾಗುತ್ತದೆ.
ಆದರೆ ಇದನ್ನ ತಿಂದಾಗ ನಂತರ ಅದರ ಪರಿಣಾಮ ಗೊತ್ತಾಗುತ್ತದೆ.ಕೋಳಿ ಭಾರವಾಗುವುದಕ್ಕೆ ಕತ್ತಿನ ಮೇಲೆ ಹಾಗೂ ರೆಕ್ಕೆಯ ಮೇಲೆ ಮಾತ್ರ ಇಂಜೆಕ್ಷನ್ ಕೊಡಲಾಗುತ್ತದೆ. ನೀವು ಕೋಳಿಯ ಬೇರೆ ಭಾಗ ತಿಂದರೆ ಅಷ್ಟೇನೂ ವ್ಯತಿರಿಕ್ತ ಪರಿಣಾಮ ಬೀರಲ್ಲ. ಆದರೆ ಈ ಎರಡು ಭಾಗಗಳು ಮಾತ್ರ ಪ್ರಭಾವ ಬೀಳುತ್ತದೆ. ಇವುಗಳನ್ನ ತಿಂದರೆ ಶರೀರದ ಮೂಳೆಗಳಲ್ಲಿ ವ್ಯತ್ಯಾಸವಾಗುತ್ತದೆ. ಅಲ್ಲದೇ ಹೊಟ್ಟೆಯಲ್ಲಿ ಕಲ್ಲು ಬೆಳೆಯುತ್ತದೆ. ಇದು ಕ್ಯಾನ್ಸರ್ ಕಾರಣ ಆಗಬಹುದು. ಹಾಗೆಯೇ ಮಹಿಳೆಯರಲ್ಲಿ ಗರ್ಭದ ಸಮಸ್ಯೆ ಕಾಣಿಸಬಹುದು. ಇಂಜೆಕ್ಷನ್ ಮಾಡಿರುವ ಕೋಳಿಯ ಕತ್ತು ಮತ್ತು ರೆಕ್ಕೆಯ ಭಾಗವನ್ನು ತಿನ್ನುವವರಿಗೆ ಮುಂದೆ ಈ ಸಮಸ್ಯೆ ಎದುರಾಗಬಹುದು.