ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುತ್ತಿದ್ದೀರಾ? ನೆಲದ ಮೇಲೆ ಕುಳಿತು ಆಹಾರ ಸೇವಿಸುವುದರ ಪ್ರಯೋಜನ ತಿಳಿಯಿರಿ
ಈಗ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದೇ ಪರಿಸ್ಥಿತಿ ಈಗ ಹೆಚ್ಚಿನ ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಗಿದ್ದರೆ ಅದ್ಯಾವುದು ಎಂದು ತಿಳಿದುಕೊಳ್ಳೊಣ.
ಬದಲಾದ ಕಾಲಕ್ಕೆ ತಕ್ಕಂತೆ ಮನುಷ್ಯನ ಜೀವನಶೈಲಿಯಲ್ಲಿಯೂ ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಹೆಚ್ಚು ದೈಹಿಕ ಚಟುವಟಿಕೆ, ಕಡಿಮೆ ಮಾನಸಿಕ ಚಟುವಟಿಕೆ ಇತ್ತು. ಆದರೆ ಈಗ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿವೆ. ಜೀವನಶೈಲಿಯಲ್ಲಿನ ಬದಲಾವಣೆಗಳು ಮಾನವನ ಆಹಾರ ಪದ್ಧತಿ ಮತ್ತು ಆಹಾರ ಸೇವನೆಯಲ್ಲಿಯೂ ಕೂಡ ಬದಲಾವಣೆಗಳನ್ನು ತಂದಿದೆ. ಹಿಂದೆ ನೆಲದ ಮೇಲೆ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು. ಆದರೆ ಈಗ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದೇ ಪರಿಸ್ಥಿತಿ ಈಗ ಹೆಚ್ಚಿನ ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಗಿದ್ದರೆ ಅದ್ಯಾವುದು ಎಂದು ತಿಳಿದುಕೊಳ್ಳೊಣ.
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳು
ಸುಲಭವಾಗಿ ಜೀರ್ಣವಾಗುತ್ತದೆ
ನೆಲದ ಮೇಲೆ ಕುಳಿತು ಆಹಾರವನ್ನು ಸೇವಿಸುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ತಟ್ಟೆ ಕೆಳಗೆ ಇರುವುದರಿಂದ ಪ್ರತಿ ಬಾರಿಯೂ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವಂತೆ ಮಾಡುತ್ತದೆ. ಹೀಗೆ ಮಾಡುವುದರಿಂದ ಹೊಟ್ಟೆಯ ಸ್ನಾಯುಗಳು ಕ್ರಿಯಾಶೀಲವಾಗುತ್ತವೆ. ಇದರೊಂದಿಗೆ ತೆಗೆದುಕೊಂಡ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ತೂಕ ನಷ್ಟ
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಕಶೇರುಖಂಡಗಳು ನೆಟ್ಟಗಾಗುತ್ತವೆ. ಅಲ್ಲದೇ ಮಾಹಿತಿಯು ಮೆದುಳಿಗೆ ಸುಲಭವಾಗಿ ತಲುಪುತ್ತದೆ. ಇದರೊಂದಿಗೆ, ಮೆದುಳು ಹೊಟ್ಟೆ ತುಂಬಿದೆ ಎಂದು ತ್ವರಿತವಾಗಿ ಗುರುತಿಸುತ್ತದೆ ಮತ್ತು ಅದು ಎಂದು ಹೇಳುತ್ತದೆ. ಆ ಮೂಲಕ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಸ್ನಾಯು ನೋವು ಕಡಿಮೆಯಾಗುತ್ತದೆ
ಇತ್ತೀಚಿನ ದಿನಗಳಲ್ಲಿ ಚಕ್ಕರಮಟ್ಟೆ ಹಾಕಿ ನೆಲದ ಮೇಲೆ ಕುಳಿತುಕೊಳ್ಳುವುದು ಸಂಪೂರ್ಣವಾಗಿ ಕಡಿಮೆಯಾಗಿದೆ. ಹೆಚ್ಚುತ್ತಿರುವ ಕುರ್ಚಿ, ಸೋಫಾಗಳ ಬಳಕೆಯಿಂದ ಎಲ್ಲರೂ ಮೇಲೆ ಕುಳಿತುಕೊಳ್ಳುವಂತಾಗಿದೆ. ಆದರೆ ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಬೆನ್ನು ನೋವು ಮತ್ತು ಇನ್ನಿತರ ಸ್ನಾಯು ಸಮಸ್ಯೆ ದೂರವಾಗುತ್ತದೆ.
ರಕ್ತ ಸಂಚಾರ ಉತ್ತಮಗೊಳ್ಳುತ್ತದೆ
ನೆಲದ ಮೇಲೆ ಕುಳಿತುಕೊಳ್ಳುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗುವುದಿಲ್ಲ. ಅಂದರೆ ರಕ್ತ ಸಂಚಾರವನ್ನು ಇದು ತಡೆಯುತ್ತದೆ. ಹಾಗಾಗಿ ಊಟ ಮಾಡುವಾಗ ನೆಲದ ಮೇಲೆ ಕುಳಿತು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.