ಉಡುಪಿಯ ಕಟಪಾಡಿಯ ಬಿಲ್ಲವರ ಶಕ್ತಿ ಕೇಂದ್ರ ಶ್ರೀ ವಿಶ್ವನಾಥ ಕ್ಷೇತ್ರದಿಂದಲೇ ಇವತ್ತು ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ರಣಕಹಳೆ ಮೊಳಗಿತು. ಇದೇ ಮೊದಲ ಬಾರಿಗೆ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದೇ ಕಡೆ ಪ್ರತಿಭಟನೆ ದಾಖಲಿಸಿದ್ದು ವಿಶೇಷವಾಗಿತ್ತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭಾರೀ ಸಂಖ್ಯೆಯ ಬಿಲ್ಲವ ಬಾಂಧವರು ಪಕ್ಷಬೇಧ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ವೇಳೆ ಪ್ರೆತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲೆಯ ಬಿಲ್ಲವ ಮುಖಂಡರು ರಾಜಕೀಯ ಮುಖಂಡರು ಈ ತಪ್ಪನ್ಬು ಸರಿಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ನಾರಾಯಣ ಗುರುಗಳು ಅಸ್ಪೃಶ್ಯ ಸಮಾಜಕ್ಕೆ ಬೆಳಕು ನೀಡಿದವರು. ಅವರ ಪಠ್ಯವನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ. ಈ ತಪ್ಪನ್ನು ಸರಕಾರ ಸರಿಪಡಿಸಬೇಕು.
ಪಠ್ಯಪುಸ್ತಕ ಸಮಿತಿಗೆ ಪರಿಶೀಲನೆಗೆ ಹೇಳಿದರೆ ಅವರು ಪರಿಷ್ಕರಣೆ ಮಾಡಿದ್ದಾರೆ.
ಇದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪ್ರತಿಭಟನೆ ಮೂಲಕ ರವಾನಿಸಲಾಯಿತು.
ಈ ಸಂದರ್ಭ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಮಂಗಳೂರು, ಕಟಪಾಡಿ ಶಂಕರ್ ಪೂಜಾರಿ, ರಮೇಶ್ ಕಾಂಚನ್ ,ವಿಶ್ವನಾಥ ಕ್ಷೇತ್ರದ ಪದಾಧಿಕಾರಿಗಳು ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.