ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು …
ಪದ್ಮರಾಜ್ ರಾಜಕೀಯಕ್ಕೆ ಬರುತ್ತಾರಾ…? ಬಂದರೂ ಯಾವ ಪಕ್ಷ..? ಈ ಕೊಳಕು ರಾಜಕಾರಣಕ್ಕೆ ಪದ್ಮರಾಜ್ ರಂತಹ ವ್ಯಕ್ತಿತ್ವಸರಿಹೊಂದುತ್ತದೆಯೋ..? ಹೀಗೆ ಹತ್ತು ಹಲವಾರು ಪ್ರಶ್ನೆಗಳು…
ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು, ಜನ ಮೆಚ್ಚಿದ ನಾಯಕನಾಗಿ, ಸಮಾಜಸೇವೆಯನ್ನೇ ಉಸಿರಾಗಿ ಇರಿಸಿಕೊಂಡಪದ್ಮರಾಜ್ ದೀನರ ಕಷ್ಟಕ್ಕೆ ಸ್ಪಂದಿಸುವ ದಾನಿಯಾಗಿ, ದಮನಿತರ ದನಿಯಾಗಿ, ಪದ್ಮರಾಜ್ ಎಂದರೆ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಎಂಬ ಮಟ್ಟಕ್ಕೆ ಬೆಳೆದದ್ದು ಗುರುತತ್ವದಲ್ಲಿ ಅವರಿರಿಸಿದ ನಿಷ್ಠೆಯಿಂದಲೇ ಎಂದರೆ ತಪ್ಪಾಗಲಾರದು…
ಸಮಾಜದ ಎಲ್ಲಾ ಸಮಸ್ಯೆ ಬಗೆಹರಿಸಲು ಜನಬಲ ಹಾಗೂ ಧನಬಲ ಇದ್ದರೆ ಸಾಲದು, ರಾಜಕೀಯ ಶಕ್ತಿಯೂ ಬೇಕೆಂಬ ಹಿರಿಯರಸಲಹೆಯ ಅನುಸಾರ, ರಾಜಕೀಯ ಪ್ರವೇಶಕ್ಕೂ ಸಿದ್ಧ ಎಂಬ ನಿರ್ಧಾರ ತಳೆದಾಗ, ತನ್ನ ಜನಪ್ರಿಯ ವ್ಯಕ್ತಿತ್ವ, ಇದುವರೆಗೆ ಸವೆಸಿದಹೋರಾಟದ ಹಾದಿ, ನಂಬಿಕೊಂಡು ಬಂದ ಜಾತ್ಯಾತೀತ ಸಿದ್ಧಾಂತಗಳ ಪ್ರಕಾರ ಪದ್ಮರಾಜ್ ಹೆಸರು ಚುನಾವಣಾ ಅಭ್ಯರ್ಥಿಯಾಗಿರಾಷ್ಟ್ರೀಯ ಪಕ್ಷಗಳ ಅಂಗಣಕ್ಕೆ ತಲುಪಿದ್ದು ದೇಶದಲ್ಲಿ ಪ್ರಬುದ್ಧ ರಾಜಕೀಯ ವ್ಯವಸ್ಥೆ ಬಯಸಿದ್ದ ಜನರಿಗೆ ಸಂತಸ ತಂದವಿಚಾರವಾಗಿತ್ತು.
ಜಿಲ್ಲೆಯಾದ್ಯಂತ ಜನಪ್ರಿಯತೆ ಹೊಂದಿದ್ದ ಪದ್ಮರಾಜ್ ಹೆಸರು ಲೋಕಸಭೆ ಅಥವಾ ರಾಜ್ಯಸಭೆಗೋ ಎಂಬ ಚರ್ಚೆಯಲ್ಲಿದ್ದಾಗಲೇ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾರಮ್ಯ ಪಡೆಯಲು ಪ್ರಯತ್ನಿಸುತ್ತಿದ್ದ ಪಕ್ಷಗಳಿಗೆ ಪದ್ಮರಾಜ್ ಹೆಸರು ಟ್ರಂಪ್ ಕಾರ್ಡ್ ಆಗಿಕಾಣಿಸಿದ್ದು ಕೋಮು ದಳ್ಳುರಿಯಿಂದ ಬೇಸತ್ತಿದ್ದ ಕರಾವಳಿಗೆ ಆಶಾಕಿರಣವಾಗಿ ಕಂಡಿದೆ.
ಟಿಕೆಟ್ ಸಿಗುತ್ತದೆಯೋ ಇಲ್ಲವೋ ಪದ್ಮರಾಜ್ ಅವರನ್ನು ತಮ್ಮ ನಾಯಕರೆಂದು ಜನ ಒಪ್ಪಿಯಾಗಿದೆ. ಅಪಪ್ರಚಾರವನ್ನೆ ನಂಬಿರುವಇಂದಿನ ರಾಜಕೀಯ ಯುಗದಲ್ಲಿ ಪದ್ಮರಾಜ್ ವ್ಯಕ್ತಿತ್ವದ ಬೆಲೆ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿ, ಅವರ ಸಮಾಜಸೇವಾ ಕೈಂಕರ್ಯಗಳುಸಾಂಗವಾಗಿ ಮುಂದುವರಿಯುವುದಂತೂ ಖಂಡಿತ…
ಪದ್ಮರಾಜ್ ಗೆ ರಾಜಕೀಯ ಅವಕಾಶ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ರಾಜಕೀಯಕ್ಕೆ ಪದ್ಮರಾಜ್ ಅಂತಹ ವ್ಯಕಿಗಳಅಗತ್ಯವಿರಿವುದು ಅಕ್ಷರಶಃ ಸತ್ಯ.