ಮಂಗಳೂರು : ನಮ್ಮ ಕುಡ್ಲ ವಾಹಿನಿಯ ವತಿಯಿಂದ ದಿನಾಂಕ 16.11.2020 ರಂದು ನಡೆದ ನಮ್ಮ ದೀಪಾವಳಿ ಕಾರ್ಯಕ್ರಮದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ, ಪದ್ಮರಾಜ್ ರವರಿಗೆ ನಮ್ಮ ಕುಡ್ಲ ಪ್ರಶಸ್ತಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಎನ್.ಎಂ.ಪಿ.ಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಹ್ಯಾಂಗೋ ಐಸ್ ಕ್ರೀಂ ಪ್ರೈವೇಟ್.ಲಿ. ಆಡಳಿತ ಪಾಲುದಾರ ಪ್ರದೀಪ್ ಜಿ.ಪೈ, ಐ.ಸಿ.ಎ.ಐ ಮಂಗಳೂರು ಘಟಕದ ಅಧ್ಯಕ್ಷ ಸಿ.ಎ.ಎಸ್.ಎಸ್ ನಾಯಕ್, ಯಜಮಾನ ಇಂಡಸ್ಟ್ರೀಸ್ ಮಾಲಕ ವರದರಾಜ್ ಪೈ, ಎಮ್.ಸಿ.ಎಸ್ ಬ್ಯಾಂಕ್ ಚೀಫ್ ಎಕ್ಸಿಕ್ಯುಟಿವ್ ಚಂದ್ರಶೇಖರ್ ಎಮ್, ಉದ್ಯಾವರ ಜಯಲಕ್ಷ್ಮಿ ಸಿಲ್ಕ್ ಮ್ಯಾನೆಜಿಂಗ್ ಪಾರ್ಟನರ್ ಅಪರ್ಣಾ ಆರ್ ಹೆಗ್ಡೆ, ಎಸ್.ಎಲ್.ಶೇಟ್ ಮಾಲಕ ಪ್ರಶಾಂತ್ ಶೇಟ್, ಗಿರೀಜಾ ಹೆಲ್ತ್ ಕೇರ್ & ಸರ್ಜಿಕಲ್ ಪಾಲುದಾರ ರವೀಂದ್ರ ಕೆ.ಶೆಟ್ಟಿ. ನಮ್ಮ ಕುಡ್ಲ ವಾಹಿನಿಯ ಆಡಳಿತ ಪಾಲುದಾರ ಲೀಲಾಕ್ಷ ಕರ್ಕೇರಾ, ಮತ್ತಿತರರು ಉಪಸ್ಥಿತರಿದ್ದರು.