TOP STORIES:

ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣ ಕನಸಿಗೆ ಬೆನ್ನೆಲುಬಾದವರು ಜಯ ಸಿ.ಸುವರ್ಣ


ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ.

ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಮುಂಬೈ ಬಿಲ್ಲವ ಭವನದ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹತ್ತು ಹಲವಾರು ಕೊಡುಗೆಗಳನ್ನು ನೀಡಿದವರು. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣದ ಕನಸ್ಸಿಗೆ ಬೆಂಬಲವಾಗಿ ನಿಂತವರು.

ಮುಂಬೈ ಗುಜರಾತ್ ಸೇರಿದಂತೆ ದೇಶ ವಿದೇಶಗಳ ಬಿಲ್ಲವರನ್ನು ಸಂಪರ್ಕಿಸಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ಜನಾರ್ದನ ಪೂಜಾರಿಯವರ ಕನಸ್ಸಿನ ಯೋಜನೆ ಶ್ರೀ ಕ್ಷೇತ್ರದ ನವೀಕರಣ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ ಬಿಲ್ಲವರ ಅಸೋಸಿಯೇಶನ್ ಹಿರಿಯರಿಂದ ಸ್ಪಾಪಿತವಾದ ಭಾರತ್ ಕೋ- ಅಪರೇಟಿವ್ ಬ್ಯಾಂಕಿನ ಚುಕ್ಕಾಣಿ ಹಿಡಿದು ಆಗ ಕೇವಲ 5 ಶಾಖೆಗಳಿದ್ದ ಅದನ್ನು ಜನಾರ್ದನ ಪೂಜಾರಿಯವರ ಬೆಂಬಲದೊಂದಿಗೆ ಇಂದು 100ಕ್ಕೂ ಅಧಿಕ ಶಾಖೆಗಳ ವಿಸ್ತರಣೆಯೊಂದಿಗೆ ಸಮಾಜದ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ಸಾಲದ ಮೂಲಕ ಆರ್ಥಕ ಶಕ್ತಿ ನೀಡಿ ಅವರ ವ್ಯವಹಾರಕ್ಕೆ ನೆರವಾದ ಜಯ ಸಿ ಸುವರ್ಣರ ಇಚ್ಛಾಶಕ್ತಿಯಿಂದಾಗಿ ಇಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದೆ.

ತಿಳಿದು ಬರೋದು ಜನನ.ತಿಳಿಯದೆ ಬರೋದು ಮರಣ.ತಿಳಿದು ಬದುಕುವುದೇ ಜೀವನ..ಇವರೇ ಸಾರ್ಥಕ ಬದುಕಿನ ನಮ್ಮ ಜಯ ಸಿ ಸುವರ್ಣ. ಬದುಕಿನುದ್ದಕ್ಕೂ ಜಗತ್ತಿನಲ್ಲಿ ಸ್ರಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುತ್ತಾ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶ ಗಳನ್ನು ಪಾಲಿಸುತ್ತಾ, ಕೂಡಿ ಬಾಳಿ, ದಾನ ಮಾಡಿ ಮಾಡಿ, ಕೊಟ್ಟು ಕೊಟ್ಟು ಹಿಗ್ಗದೇ ಸರ್ವ ಸಮಾಜದ ಒಬ್ಬ ಮಹಾನ್ ಜನನಾಯಕರಾಗಿದ್ದರು.

ಗೋರೆಗಾವ್‌‌ನ ಜಯಪ್ರಕಾಶ್ ಹೋಟೆಲ್ ಮಾಲೀಕ, ಭಾರತ್ ಬ್ಯಾಂಕ್ ನ ಅಭಿವೃದ್ಧಿ ರೂವಾರಿ, ಮಾಜಿ ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮಾಜಿ ಅಧ್ಯಕ್ಷರು, ಮಾರ್ಗ ದರ್ಶಕರು,ಬಿಲ್ಲವರ ಮಹಾ ಮಂಡಲದ ಮಾಜಿ ಅಧ್ಯಕ್ಷರು, ಕುದ್ರೋಳಿ ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೇನೇ ಸಾಯಿ ವೆಜ್ ಹೋಟೆಲ್ ಗ್ರೂಪ್ನ ಸ್ಥಾಪಕರು ಆದ ಸಂಘಟಕರಾಗಿದ್ದ ಅವರು ನಮ್ಮ ನಿಮ್ಮ ಜನನಾಯಕರಾಗಿದ್ದರು. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುವ.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »