TOP STORIES:

FOLLOW US

ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣ ಕನಸಿಗೆ ಬೆನ್ನೆಲುಬಾದವರು ಜಯ ಸಿ.ಸುವರ್ಣ


ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ.

ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಮುಂಬೈ ಬಿಲ್ಲವ ಭವನದ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹತ್ತು ಹಲವಾರು ಕೊಡುಗೆಗಳನ್ನು ನೀಡಿದವರು. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣದ ಕನಸ್ಸಿಗೆ ಬೆಂಬಲವಾಗಿ ನಿಂತವರು.

ಮುಂಬೈ ಗುಜರಾತ್ ಸೇರಿದಂತೆ ದೇಶ ವಿದೇಶಗಳ ಬಿಲ್ಲವರನ್ನು ಸಂಪರ್ಕಿಸಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ಜನಾರ್ದನ ಪೂಜಾರಿಯವರ ಕನಸ್ಸಿನ ಯೋಜನೆ ಶ್ರೀ ಕ್ಷೇತ್ರದ ನವೀಕರಣ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ ಬಿಲ್ಲವರ ಅಸೋಸಿಯೇಶನ್ ಹಿರಿಯರಿಂದ ಸ್ಪಾಪಿತವಾದ ಭಾರತ್ ಕೋ- ಅಪರೇಟಿವ್ ಬ್ಯಾಂಕಿನ ಚುಕ್ಕಾಣಿ ಹಿಡಿದು ಆಗ ಕೇವಲ 5 ಶಾಖೆಗಳಿದ್ದ ಅದನ್ನು ಜನಾರ್ದನ ಪೂಜಾರಿಯವರ ಬೆಂಬಲದೊಂದಿಗೆ ಇಂದು 100ಕ್ಕೂ ಅಧಿಕ ಶಾಖೆಗಳ ವಿಸ್ತರಣೆಯೊಂದಿಗೆ ಸಮಾಜದ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ಸಾಲದ ಮೂಲಕ ಆರ್ಥಕ ಶಕ್ತಿ ನೀಡಿ ಅವರ ವ್ಯವಹಾರಕ್ಕೆ ನೆರವಾದ ಜಯ ಸಿ ಸುವರ್ಣರ ಇಚ್ಛಾಶಕ್ತಿಯಿಂದಾಗಿ ಇಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದೆ.

ತಿಳಿದು ಬರೋದು ಜನನ.ತಿಳಿಯದೆ ಬರೋದು ಮರಣ.ತಿಳಿದು ಬದುಕುವುದೇ ಜೀವನ..ಇವರೇ ಸಾರ್ಥಕ ಬದುಕಿನ ನಮ್ಮ ಜಯ ಸಿ ಸುವರ್ಣ. ಬದುಕಿನುದ್ದಕ್ಕೂ ಜಗತ್ತಿನಲ್ಲಿ ಸ್ರಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುತ್ತಾ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶ ಗಳನ್ನು ಪಾಲಿಸುತ್ತಾ, ಕೂಡಿ ಬಾಳಿ, ದಾನ ಮಾಡಿ ಮಾಡಿ, ಕೊಟ್ಟು ಕೊಟ್ಟು ಹಿಗ್ಗದೇ ಸರ್ವ ಸಮಾಜದ ಒಬ್ಬ ಮಹಾನ್ ಜನನಾಯಕರಾಗಿದ್ದರು.

ಗೋರೆಗಾವ್‌‌ನ ಜಯಪ್ರಕಾಶ್ ಹೋಟೆಲ್ ಮಾಲೀಕ, ಭಾರತ್ ಬ್ಯಾಂಕ್ ನ ಅಭಿವೃದ್ಧಿ ರೂವಾರಿ, ಮಾಜಿ ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮಾಜಿ ಅಧ್ಯಕ್ಷರು, ಮಾರ್ಗ ದರ್ಶಕರು,ಬಿಲ್ಲವರ ಮಹಾ ಮಂಡಲದ ಮಾಜಿ ಅಧ್ಯಕ್ಷರು, ಕುದ್ರೋಳಿ ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೇನೇ ಸಾಯಿ ವೆಜ್ ಹೋಟೆಲ್ ಗ್ರೂಪ್ನ ಸ್ಥಾಪಕರು ಆದ ಸಂಘಟಕರಾಗಿದ್ದ ಅವರು ನಮ್ಮ ನಿಮ್ಮ ಜನನಾಯಕರಾಗಿದ್ದರು. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುವ.


Share:

More Posts

Category

Send Us A Message

Related Posts

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »

ಆಷಾಢ ಮಾಸಕ್ಕೆ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ ಯಾಕೆ?


Share       ಆಷಾಢ ಮಾಸವನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಅದಲ್ಲದೇ, ಹೊಸದಾಗಿ ಮದುವೆಯಾದ ದಂಪತಿಗಳಿಬ್ಬರೂ ಪರಸ್ಪರ ದೂರವಿರಬೇಕಾದ ಕಾರಣ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ತೆರಳುತ್ತಾರೆ.


Read More »

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಅಕ್ಷತಾ ಪೂಜಾರಿ ಬೋಳ


Share       ದಕ್ಷಿಣ ಆಫ್ರಿಕಾದ ಪೊಟ್‌ಚೆಫ್ಸ್‌ಟ್ರೂಮ್‌ ನಲ್ಲಿ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೀನಿಯರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ


Read More »

ಲಯನ್ಲ್ ಕ್ಲಬ್ ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ


Share       ಲಯನ್ಲ್ ಕ್ಲಬ್  ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ ಆರ್ಶಿತಾ ನಿವಾಸ ಹಳೆಸಂವೆರಿ ಸಕಲೇಶಪುರ ಸೋಮಯ್ಯ ಪೂಜಾರಿ ತಾಯಿ ಕೃಷ್ಣಮ್ಮ ಅವರ ನಾಲ್ಕನೇ ಪುತ್ರ ಕೃಷ್ಣಪ್ಪ


Read More »