ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾರ ಮಹತ್ವದ ಕ್ರಮ ನಿರ್ಧಾರ ಕೈಗೊಂಡಿದೆ.
ದೀಪಾವಳಿಯ ಮುನ್ನಾದಿನದಂದು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಘೋಷಿಸಿದೆ.
ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 5 ರೂ. ಮತ್ತು 10 ರೂಪಾಯಿ ಇಳಿಕೆಯಾಗಲಿದೆ.