ಮಂಗಳೂರು: ಮಂಗಳೂರಿನ ಕುಲಶೇಖರದ ವಾಮಯ್ಯ ಪೂಜಾರಿ ಮತ್ತು ಚಂದ್ರಾವತಿ ದಂಪತಿ ಸುಪುತ್ರರಾದ ಗೋಪಾಲಕೃಷ್ಣ .ಕೆ ಬಜೆ ಇವರು ಈ ಭುವಿಯ ಬೆಳಕನ್ನು ಕಂಡ ಇವರು ಸುಸಂಸ್ಕೃತ ವಾತಾವರಣದೊಂದಿಗೆ ಸಂಪದ್ಭರಿತ ಸ್ನಾತಕೋತ್ತರ ಪದವಿ ಶಿಕ್ಷಣ ದೊಂದಿಗೆ ಒಟ್ಟು ಸಮೃದ್ಧಿಯನ್ನು ಸಂಪಾದಿಸಿದವರು.1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಪ್ರಥಮವಾಗಿ ವಿಟ್ಲ ಠಾಣಾ ಬಳಿಕ ಬಜ್ಪೆ ,ನಂತರ ಪದೋನ್ನತಿ ಹೊಂದಿ ಕಾವೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಾ ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಇಲಾಖಾ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು MBA ಟೂರಿಸಂ ಮಾಡುತ್ತಾ ಇದ್ದಾರೆ. ಇದರ ಪೂರ್ವದಲ್ಲಿ ಹೆದ್ದಾರಿ ಗಸ್ತು ಪಡೆಯಲ್ಲಿ ಕಾರ್ಯನಿರ್ವಹಿಸಿ ಕಠಿಣ ಅಪರಾಧ ಪ್ರಕರಣಗಳನ್ನು ಬೇಧಿಸಿದ ಹೆಚ್ಚುಗಾರಿಕೆ ಇವರದ್ದು.
ಜನಸ್ನೇಹಿ ಪೊಲೀಸ್ ಎಂದೇ ಗುರುತಿಸಲ್ಪಡುವ ಇವರು ಅಪರಾಧ ಮುಕ್ತ ಸಮಾಜ ನಿರ್ಮಾಣದ ಪ್ರಯತ್ನದಲ್ಲಿ ಬಹಳಷ್ಟು ದೂರ ಸಾಗಿ ಬಂದವರು.
ಈ ನೆಲೆಯಲ್ಲಿ ಸೀಮಾತೀತವಾಗಿ ಶಿಕ್ಷಣ ಸಂಸ್ಥೆಗಳ ಸದಸ್ಯರುಗಳಿಗೆ ಮಾಹಿತಿ ಕಾರ್ಯಕ್ರಮಗಳನ್ನು ವ್ಯಕ್ತಿತ್ವ ವಿಕಸನ ಚಟುವಟಿಕೆಗಳನ್ನು ಸದಾ ನಡೆಸಿಕೊಂಡು ಬಂದವರು.
ಶಿಸ್ತಿ ಜೀವನ ಮೌಲ್ಯ ವ್ಯಕ್ತಿ ವಿಕಸನ,ವ್ಯಕ್ತಿತ್ವ ನಿರ್ಮಾಣ ಪರಿಸರ ಪ್ರೇಮ ವನಮಹೋತ್ಸವ ,ಸ್ವಚ್ಛತಾಅಭಿಯಾನ.ಸಾವಯವ ,ಎರೆಹುಳು ಗೊಬ್ಬರ ತಯಾರಿ ತರಬೇತಿ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ ,ಅಸಹಾಯಕರಿಗೆ ಸಹಾಯ,ಉಚಿತ ಆರೋಗ್ಯ ಶಿಬಿರ,ಕಣ್ಣಿನ ಉಚಿತ ತಪಾಸಣೆ ಮತ್ತು ಕನ್ನಡಕ ವಿತರಣೆ,ಇಲಾಖಾ ಪ್ರಶಿಕ್ಷಾಣಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಪರಿಚಯಿಸಿಕೊಂಡವರು ಗೋಪಾಲಕೃಷ್ಣ .ಕೆ ಬಜ್ಪೆ.