TOP STORIES:

ಪ್ರತಿಭೆಗಳ ಆನಾವರಣದಲ್ಲಿ ಯುವ ಕಲಾ ಪ್ರತಿಭೆ ಸಂತೋಷ್ ಪೂಜಾರಿ


ಪ್ರತಿಭೆಗಳ ಆನಾವರಣದಲ್ಲಿ ಯುವ ಕಲಾ ಪ್ರತಿಭೆ ಸಂತೋಷ್ ಪೂಜಾರಿ

ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ ಹಾಗೆಯೇ ಬದುಕ ಪಯಣದಲ್ಲಿ ಹಿಂತಿರುಗಿ ನೋಡಿದಾಗ ಸಾರ್ಥಕತೆಯ ನಿಟ್ಟುಸಿರು ಬರಬೇಕಂತೆ” ಇಂತಹ ಸಾರ್ಥಕತೆಯತ್ತ ಕಲಾ ಜೇವನದೊಂದಿಗೆ ಪಯಣಿಸುತ್ತಿರುವ ನಗುಮೊಗದ ಚೆಲುವ, ಶಾರದೆಯೇ ಮೈದೋರಿದಂತಿರುವ ಮಾತಿನ ಮಲ್ಲ, ಪಾದರಸವೇ ನಾಚುವಂತಹ ಚಾಕಚಕ್ಯತೆಯ ಕಲಾಪ್ರತಿಭೆ
ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅಸಮಾನ್ಯ ವ್ಯಕ್ತಿತ್ವವಿರುವ ಈತ ಹಲವಾರು ನಾಟಕ ತಂಡದೊಂದಿಗೆ ತನ್ನನ್ನು ತೊಡಗಿಸಿಕೊಂಡವನು.

*ರಮಾನಂದ ಪೂಜಾರಿ* ಮತ್ತು *ಪುಷ್ಪ* ದಂಪತಿಯ ಮಗನಾಗಿ ಜನಿಸಿದ ಸಂತೋಷ್ ಬಾಲ್ಯದಿಂದಲೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಪ್ರತಿಭಾನ್ವಿತ. ಹಾಗಂತ ಪಠ್ಯದ ವಿಚಾರಕ್ಕೆ ಎಂದೂ ಅದು ಅಡ್ಡಿಯಾಗಿರಲಿಲ್ಲ. ಅದಕ್ಕೆ ದ್ಯೋತಕ ಎಂಬಂತೆ ಪಿಯುಸಿ ದಿನಗಳಲ್ಲಿ ಉತ್ತಮ ಅಂಕ ಪಡೆದು ಹಿಂದುಳಿದ ವಿದ್ಯಾರ್ಥಿಗಳ ನಿಲಯದ ಪಟ್ಟಿಯಲ್ಲಿ ಜಿಲ್ಲೆಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ ಖ್ಯಾತಿ ಇವರದು. ಹಾಗೂ ಸ್ನಾತಕೋತ್ತರ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪದವಿಪೂರ್ವ ಮತ್ತು ಪದವಿ ಹಂತದಲ್ಲಿ ಕಾಲೇಜಿನ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಅವಾರ್ಡ್ ಪಡೆದವರು.

ಕಲೆಯ ಮೇಲೆ ಹೆಚ್ಚಿನ ಒಲವು, ಪ್ರೀತಿ ತೋರಿದ ಇವರು ಜನಪದ ನೃತ್ಯ ಪಟುವಾಗಿ, ಜನಪದ ನೃತ್ಯ ತರಬೇತುದಾರನಾಗಿ ಹಾಗೂ ರಂಗಭೂಮಿ ಕಲಾವಿದನಾಗಿ ಹಲವರು ನಾಟಕಗಳಲ್ಲಿ ಅಭಿನಯಸಿ ಕೀರ್ತಿಗೆ ಪಾತ್ರರದರು. ಬಂಟ್ವಾಳದಲ್ಲಿ ನಡೆಯುವ ಕಲಾಸಿಂಚನದಲ್ಲಿ ಎರಡು ವರ್ಷ ಇವರ ಮುಂದಾಳತ್ವದ ತಂಡ ಜನಪದ ನೃತ್ಯವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರ ಮಟ್ಟದ ಶಿಬಿರದಲ್ಲಿ ಭಾಗವಹಿಸಿ ಜನಪದ ನೃತ್ಯದ ಸಿಂಚನವನ್ನು ಹೊರರಾಜ್ಯಕ್ಕೂ ಪರಿಚಯಿಸಿದ ಕೀರ್ತಿ ಇವರದ್ದು. ‘ಕರ್ನಾಟಕ ವೈಭವ ‘ಎಂಬ ಹೆಸರಿನ ಮೂಲಕ ಕರ್ನಾಟಕದ ನೃತ್ಯ ಪ್ರಕಾರ, ಜನಪದ ಕಲೆ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಒಂದು ತಂಡ ಕಟ್ಟಿ ತರಬೇತಿ ನೀಡಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.ಇವರು ರಚಿಸಿ ನಿರ್ದೇಶಿಸಿ ಅಭಿನಯಿಸಿದ ಪ್ರಹಸನ ಹಲವಾರು ಕಡೆ ಪ್ರಥಮ ಸ್ಥಾನ ಗಳಿಸಿರುತ್ತದೆ. ಹಲವು ಬೀದಿ ನಾಟಕಗಳ ಮೂಲಕವೂ ನಿರಂತರವಾಗಿ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.

ರಾಜ್ಯ, ರಾಷ್ಟ್ರಮಟ್ಟದ ಜಾನಪದ, ಸಂಗೀತ ಹಾಗು ಕಲೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯುತ ಮುನ್ನೆಡೆಯುತಿರುವ, ಈ ಯುವ ಪ್ರತಿಭೆಯ ಸಾಧನೆಯನ್ನು ಗುರುತಿಸಿ. ರಾಷ್ಟ್ರ ಮಟ್ಟದ ಪ್ರತಿಭಾ ಪ್ರಶಸ್ತಿ ಪುರಸ್ಕಾರ “ಸಿರಿಗನ್ನಡ ರಾಷ್ಟ್ರೀಯ ಕಲಾ ರತ್ನ” ರಾಷ್ಟ್ರಮಟ್ಟದ ಶ್ರೇಷ್ಟ ಪ್ರಶಸ್ತಿ ನೀಡಿ ಗೌರವಿಸಿದೆ
ಕಲಾಕ್ಷೇತ್ರ ಇವರನ್ನು ಕನ್ನಡ ನಾಡು,ನುಡಿ,ಸೇವೆ,ಶಿಕ್ಷಣ/ಭರತನಾಟ್ಯ,ಸಾಹಿತ್ಯ,ಕಲಾವಿದರ ಮತ್ತು ಸಾಹಿತ್ಯ ಶಿಕ್ಷಣ ಸೇವಾ ಹಾಗೂ ಬಾಲ್ಯದ ಕಲಾ ಚಿಂತನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ
ಪ್ರಸ್ತುತ ಇವರು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಶಿಸುತಿದ್ದಾರೆ,
ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಂಗಳೂರು ಯುವವಾಹಿನಿ ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಎನ್ನುದಕ್ಕೆ ಹೆಮ್ಮೆಯಾಗುತಿದೆ.
ಈ ಅಪೂರ್ವ ಕಲಾವಿದನಿಗೆ ಸಹೃದಯಿ ಕಲಾಭಿಮಾನಿಗಳ ಆಶೀರ್ವಾದ ಪ್ರೀತಿ ಸದಾ ಇರಲಿ…ಕಲಾ ಮಾತೆ ಶಾರದೆ ಈತನ ಪ್ರತಿಭೆಯನ್ನು ದಿಗಂತಕ್ಕೇರಿಸಲಿ ಇವರು ಕಲಾ ಕ್ಷೇತ್ರದಲ್ಲಿ ಇನ್ನಷ್ಟ್ಟು ಸಾಧನೆಗಳನ್ನು ಮಾಡಲಿ ಎಂದು ಯುವವಾಹಿನಿ ಬೆಂಗಳೂರು ಘಟಕವು ಹಾರೈಸುತ್ತದೆ.

ಪ್ರಚಾರ ನಿರ್ದೇಶಕರು
ಯುವವಾಹಿನಿ (ರಿ) ಬೆಂಗಳೂರು


Related Posts

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »