TOP STORIES:

ಪ್ರತಿಭೆಗಳ ಪರಿಚಯದಲ್ಲಿಂದು ಹೇಳ ಹೊರಟಿರುವುದು ಒಂದೇ ಕುಟುಂಬದ ಇಬ್ಬರು ಕಲಾ ಪ್ರತಿಭೆಗಳ ಕುರಿತು.


ನೆಟ್ಟಣಿಗೆ ,ಮುಳ್ಳೇರಿಯಾದ ರತ್ನಾಕರ್ , ನಿಶಾ ದಂಪತಿಗಳ ಮಕ್ಕಳಾದಂತಹಪ್ರತೀತಿ ಹಾಗೂ ಈಕೆಯ ಅಣ್ಣ ಪ್ರಥಮ್ ಇಬ್ಬರು ಕೂಡ ಬಹುಮುಖ ಪ್ರತಿಭೆಗಳಾಗಿದ್ದು ಕೊಂಡು ಹಲವಾರು ಸಂಘ-ಸಂಸ್ಧೆಗಳಲ್ಲಿ ತಮ್ಮ‌ಕಲಾ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾರೆ.

ಹೆಸರು: ಪ್ರತೀತಿ ಪೂಜಾರಿ ನೆಟ್ಟಣಿಗೆ ಇವಳು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಳ , ಇಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ..
ಮೊದಲೇ ಹೇಳಿದಂತೆ ಇವಳು ಬಹುಮುಖ ಪ್ರತಿಭೆಯಾಗಿದ್ದುಕೊಂಡು ತಮ್ಮ ಸಣ್ಣ ವಯಸ್ಸಿನಲ್ಲಿಯೇ ನೃತ್ಯ , ಭರತನಾಟ್ಯ , ಯಕ್ಷಗಾನ , ಸಂಗೀತ ದಲ್ಲಿ ಆಸಕ್ತಿ ವಹಿಸಿಕೊಂಡು ಹಲವಾರು ವೇದಿಕೆಯಲ್ಲಿ , ನೃತ್ಯ ಪ್ರದರ್ಶನ ಮಾಡಿದ್ದಾಳೆ.

ಭರತನಾಟ್ಯ ವನ್ನು ವಿದುಷಿ ವಿದ್ಯಾಲಕ್ಷ್ಮಿ ಕುಂಬ್ಲೆ ಇವರಿಂದ ಕಲಿಯುತ್ತಿದ್ದಾಳೆ. ಯಕ್ಷಗಾನವನ್ನು ಗುರುಗಳಾದ ಶಶಿಧರ ಬಜಾಕೆರೆ ಇವರಿಂದ ಅಭ್ಯಾಸಿಸುತ್ತಿದ್ದಾಳೆ. ಈಗಾಗಲೇ “ಗಿರಿಜಾ ಕಲಾಣ್ಯ” ಯಕ್ಷಗಾನದಲ್ಲಿ ಷಣ್ಮುಖ ನಾಗಿಯೂ, “ಮೆದಿನಿ ನಿರ್ಮಾಣ ಮಹಿಷಮರ್ದಿನೀ” ಯಕ್ಷಗಾನದಲ್ಲಿ ಯಕ್ಷನಾಗಿಯೂ ಅದ್ಬುತ ಪ್ರದರ್ಶನವನ್ನು ನೀಡಿರುವುದರ ಮುಖೇನವಾಗಿ ಇವಳ ಈ ಪಾತ್ರವನ್ನು ಮೆಚ್ಚಿ ಸಂಘಸಂಸ್ಥೆಯವರು ಅಭನಂದಿಸಿದ್ದಾರೆ.

ಇದಿಷ್ಟೇ ಅಲ್ಲದೇ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಸ್ಬರ್ಧೆಯಲ್ಲಿ ಸ್ವರ್ಧಿಸಿ , ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಳ್ಳುತ್ತಾಳೆ. ಅಲ್ಲದೇ ಕಲಿಕೆಯಲ್ಲಿಯೂ ಮುಂದಿರುವ ಇವಳು ಆಟೋಟ ದಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ. Lock down ಸಮಯದಲ್ಲಿ ಒಂದು ವರ್ಷದಿಂದ online ನ ಸ್ಬರ್ಧೆಯಲ್ಲಿಯೂ ಭಾಗವಹಿಸಿರುತ್ತಾಳೆ. ಹೀಗೆ ಗಡಿನಾಡಿನ ಪ್ರತಿಭೆ ಪ್ರತೀತಿಯೂ ಇನ್ನು ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುವಂತಾಗಲಿ ಶುಭವಾಗಲಿ.

ಹೆಸರು:ಪ್ರಥಮ್ ಪೂಜಾರಿ ನೆಟ್ಟಣಿಗೆ ಇವನು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇವನಿಗೆ ದೊಡ್ಡವನಾದ ಮೇಲೆ ಸೇನೆಗೆ ಸೇರಬೇಕೆಂಬ ಕನಸಿದೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಪ್ರಥಮ್ ಹಲವಾರು ವೇದಿಕೆಗಳಲ್ಲಿ, ನೃತ್ಯ, ಯಕ್ಷಗಾನ, ಕರಾಟೆ ಕಾರ್ಯಕ್ರಮ ಕೊಟ್ಟಿದ್ದಾನೆ.

ಆಟೋಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು.. ತಾಲೂಕು ಮಟ್ಟದಲ್ಲಿ ಭಾಗವಹಿಸಿದ್ದಾನೆ..7ನೇ ತರಗತಿಯಲ್ಲಿ ಶಾಲೆಯಲ್ಲಿ ಚಾಂಪಿಯನ್ ಶಿಪ್ ಪಡೆದು ಕೊಂಡಿದ್ದಾನೆ.. ಇನ್ನೂ ಹಲವಾರು ಚಟುವಟಿಕೆ ಯಲ್ಲೂ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾನೆ. Online ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದಾನೆ. ಇನ್ನು ಮುಂದೆಯು ಕೂಡ ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುವಂತಾಗಲಿ.

ಕಲೆಯನ್ನು ಯಾರು ಪ್ರೀತಿಸುವರೋ , ಕಲೆ ಅವರಿಗೆ ತಾನಾಗಿಯೇ ‌ಒಲಿದು ಬರುತ್ತದೆ.. ಅಂತೆಯೇ ಇಂದು ಈ ಇಬ್ಬರು ಕಲಾ ಪ್ರತಿಭೆಗಳನ್ನು ಪರಿಚಯಿಸುದರ ಜೊತೆಗೆ ಈ ಲೇಖನದ ಮೂಲಕ ಇವರ ಪ್ರತಿಭೆಗೆ ಪ್ರೋತ್ಸಾಹದ ಬೆಳಕಾಗುವ ಉದ್ದೇಶ ವಾಗಿದೆ.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »