ಬ್ರಹ್ಮ ಶ್ರೀ ನಾರಾಯಣ ಗುರುಗಳ 168 ಜಯಂತಿ ಪ್ರಯುಕ್ತ ಗುರು ಪೂಜೆಯನ್ನು ದಿನಾಂಕ 9-9-2022 ರಂದು ಮಂಗಳಾದೇವಿ ಪ್ರಾಂಗಣ ದಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಕಾರ್ಯಕ್ರಮವು ಭಜನೆಯೊಂದಿಗೆ ಪ್ರಾರಂಭಗೊಂಡು, ಸಭಾ ಕಾರ್ಯಕ್ರಮ ಮತ್ತು ಮಹಾಪೂಜೇಯೊಂದಿಗೆ ಸಂಪನ್ನಗೊಳ್ಳಲಿದೆ.
ನಮ್ಮ ಸಂಘವು ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ಬಿಲ್ಲವ ಸಮಾಜದಲ್ಲಿ, ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ನೀಡುವ ಸನ್ಮಾನದ ಪ್ರಶಸ್ತಿಯೇ “ಗುರು ಶ್ರೀ ‘.. ಪ್ರಸಕ್ತ ಸಾಲಿನಲ್ಲಿ ಐದು ಕ್ಷೇತ್ರವನ್ನು ಆಯ್ಕೆ ಮಾಡಿದ್ದೇವೆ. 1) ಸಹಕಾರ ಕ್ಷೇತ್ರ,2) ಆಧ್ಯಾತ್ಮಿಕ ಕ್ಷೇತ್ರ 3)ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರ 4) ಯುವಜನ ಮತ್ತು ಕ್ರೀಡಾ ಕ್ಷೇತ್ರ,5)ವೈದ್ಯಕೀಯ ಕ್ಷೇತ್ರ (ಮಹಿಳೆ ).
“ ಗುರು ಶ್ರೀ “ ಪ್ರಶಸ್ತಿ ಗೆ ಆಯ್ಕೆ ಯಾದ ಗಣ್ಯರು.
1) ಸಹಕಾರ ಕ್ಷೇತ್ರ : ಶ್ರೀಯುತ ಚಿತ್ತರಂಜನ್ ಬೋಳಾರ್.. ಸ್ಥಾಪಕರು ಆತ್ಮಶಕ್ತಿ ವಿವಿದೊದ್ದೇಶ ಸಹಕಾರಿ ಸಂಘ.
2) ಆಧ್ಯಾತ್ಮಿಕ ಕ್ಷೇತ್ರ: ಶ್ರೀಯುತ ಎ ವಿದ್ಯಾಧರ್..ಅನುವಂಶಿಕ ಆಡಳಿತ ಮೊಕ್ತೆಸರರು, ಶ್ರೀ ಅರಸುಮುಂಡಿತ್ತಾಯ ದೈವಸ್ಥಾನ ಅತ್ತಾವರ.
3) ಕಲೆ ಮತ್ತು ಸಂಸ್ಕೃತಿಕ ಕ್ಷೇತ್ರ.. ಶ್ರೀಯುತ ಅರವಿಂದ್ ಬೋಳಾರ್.. ಭಾರತೀಯ ಚಲನಚಿತ್ರ ನಟ.
4) ಯುವಜನ ಮತ್ತು ಕ್ರೀಡಾ ಕ್ಷೇತ್ರ.ಶ್ರೀಯುತ ದೀಪಕ್ ಅಂಚನ್.. ರಾಜ್ಯ ಮಟ್ಟದ ಕುಸ್ತಿ ಪಟು.
5) ವೈದ್ಯಕೀಯ ಕ್ಷೇತ್ರ…ಡಾ. ಮನಿಷಾ. ಏನ್. ಅಸೋಸಿಯೇಟ್ ಪ್ರೊಫೆಸರ್ ENT ಡಿಪಾರ್ಟ್ಮೆಂಟ್ ಕೆಎಂಸಿ ಮಂಗಳೂರು.
ಈ ಐವರು ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ ವಿಧಾನ ಸಭಾ, ಶ್ರೀ ಉಮಾನಾಥ್ ಕೋಟ್ಯಾನ್ ಶಾಸಕರು ಮೂಲ್ಕಿ ಮೂಡಬಿದ್ರಿ,ಶ್ರೀ ಪ್ರೇಮಾನಂದ ಶೆಟ್ಟಿ, ಮೇಯರ್ ಮಂಗಳೂರು ಮಹಾನಗರ ಪಾಲಿಕೆ.ಶ್ರೀ ಪಿ. ರಮಾನಾಥ್ ಹೆಗ್ಡೆ ಆಡಳಿತ ಮೊಕ್ತೇಸರರು ಶ್ರೀ ಮಹೋತೋಭಾರ ಮಂಗಾದೇವಿ.ಶ್ರೀ ಬಿ ಅಶೋಕ್ ಕುಮಾರ್ ಮೊಕ್ತೇಸರರು ಬೋಳಾರ ಮಾರಿಗುಡಿ, ಶ್ರೀ ಆರ್ ಪದ್ಮರಾಜ್ ಕೋಶಾಧಿಕಾರಿ ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೋಳಿ ಮಂಗಳೂರು ಇವರು ಭಾಗಾವಹಿಸಲಿದ್ದಾರೆ.ಬಿಲ್ಲವ ಸಂಘ ಮಂಗಳಾದೇವಿ ವತಿಯಿಂದ ಇದೇ ಕಾರ್ಯಕ್ರಮ ದಲ್ಲಿ ಅಶಕ್ತರಿಗೆ ಸಹಾಯಧನವನ್ನು ನೀಡಲಿದ್ದೇವೆ ಎಂದು ಕಾರ್ಯಕ್ರಮ ಸಂಚಾಲಕರಾದ ಶ್ರೀ ರಾಜರತ್ನ ಸನಿಲ್ ತಿಳಿಸಿದರು. ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ಶ್ರೀ ರಮಾನಂದ ಪೂಜಾರಿ, ಸದಸ್ಯರಾದ ಶ್ರೀ ಕೀರ್ತಿರಾಜ್, ಶ್ರೀ ಮೋನಪ್ಪ ಹಾಜರಿದ್ದರು. ಕಾರ್ಯದರ್ಶಿ ಶ್ರೀ ರಮಾನಂದ ಪೂಜಾರಿ ಸ್ವಾಗತಿಸಿದರು.