ಪ್ರವೀಣ್ ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ
ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ರಾದ ಚಿತ್ತರಂಜನ್ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿ ದರು. ಪ್ರವೀಣ್ ಕುಟುಂಬ ಕ್ಕೆ ನಾವೆಲ್ಲರೂ ಸಹಾಯ ಹಸ್ತ ಮಾಡುವ ಇದನ್ನು ಕಂಕನಾಡಿ ಗರಡಿಯಲ್ಲಿ ಒಟ್ಟು ಸೇರಿಸಿ ನಾವು ಕುಟುಂಬ ಕ್ಕೆ ಕೊಟ್ಟು ಸಹಕಾರ ಮಾಡುವ ಎಂದರು. ಸಹಾಯ ಹಸ್ತ ಸಂಗ್ರಹ ಕಂಕನಾಡಿ ಗರಡಿ ಆಫೀಸ್ ಅಥವ ಡಬ್ಬಿಯಲ್ಲಿ ಹಾಕಿ ಒಟ್ಟು ಸೇರಿಸಿ ಕೊಡುವ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ ಪ್ರವೀಣ್ ಪೂಜಾರಿ ಯಾರಿಗೂ ತೊಂದರೆ ಮಾಡದ ಎಲ್ಲರೊಂದಿಗೆ ಮೃದು ಮಾತಿನಲ್ಲಿ ಮಾತನಾಡುವ ಗೆಜ್ಜೆಗಿರಿ, ಯುವವಾಹಿನಿ, ಗುರುಬೆಳದಿಂಗಳು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮುಂತಾದ ವಿವಿಧ ಸಂಸ್ಥೆಗಳು ಮತ್ತು ಧಾರ್ಮಿಕ ಕ್ಷೇತ್ರ ಗಳಲ್ಲಿ ಕೆಲಸ ಮಾಡುವ ಪ್ರವೀಣ್ ಅಗಲಿಕೆ ಸಮಾಜಕ್ಕೆ ನಷ್ಟ ಎಂದರು.
ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮತ್ತು ಅವರ ಸಮಾಜದ ಪರ ಸೇವೆಯ ಬಗ್ಗೆ ಮಾತನಾಡಿದರು.
ದಿಲ್ ರಾಜ್ ಆಳ್ವ , ಕಾರ್ಪೊರೇಟರ್ ಅನಿಲ್ ಪೂಜಾರಿ, ಕಾರ್ಪೊರೇಟರ್ ಸಂದೀಪ್ ಗರೋಡಿ, ಶೈಲೇಂದ್ರ ಸುವರ್ಣ, ರಕ್ಷಿತ್ ಕೆ ಎ ಪೂಜಾರಿ, ಪ್ರಕಾಶ್ ಗರೋಡಿ,ರಾಜೇಂದ್ರ ಚಿಲಿಂಬಿ, ಸಚಿನ್ ಮೊರೆ, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.