TOP STORIES:

FOLLOW US

ಪ್ರೋಕಬಡ್ಡಿ ರಣರಂಗದಲ್ಲಿ ಹುಲಿಯಂತೆ ಘರ್ಜಿಸಿದ ತುಳನಾಡ ಹೆಮ್ಮೆಯ ಸಾಧಕ ಸಚಿನ್ ಸುವರ್ಣ


ಪ್ರೋಕಬಡ್ಡಿ ರಣರಂಗದಲ್ಲಿ ಹುಲಿಯಂತೆ ಘರ್ಜಿಸಿದ ಕರಾವಳಿಯ ಹೆಮ್ಮೆಯ ಸಾಧಕ ಸಚಿನ್ ಸುವರ್ಣ

ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು
ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲದ ಕಿಚ್ಚಿನ ಮನಸ್ಥಿತಿಗೆ ಯಾವುದೇ ಸೋಲು ಹಿಮ್ಮೆಟಿಸಿಲಾರದು,
ಯಶಸ್ಸನ್ನು ಅನುಭವಿಸ ಬೇಕಿದ್ದರೇ ಅಲ್ಲಿ ಕಷ್ಟಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ,ಆ ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು.

ಕಬಡ್ಡಿ..ಕಬಡ್ಡಿ..ಕಬಡ್ಡಿ.. ಎಂಬ ಮಂತ್ರನಾಮ ಘೋಷದೊಂದಿಗೆ, ಎದುರುಸಿರು ಬಿಡುತ್ತಾ ಎದುರಾಳಿಯ ಎದೆಯಲ್ಲಿ ಭಯವನ್ನು ಹುಟ್ಟಿಸುತ್ತಾ ಎದೆಯೊಡ್ಡಿ,ತೊಡೆತಟ್ಟಿ‌ ಅಖಾಡಕ್ಕೆ ಇಳಿಯುವ ಎದುರಾಳಿಯನ್ನು ಎದುರಿಸುತ್ತಾ ಒಗ್ಗಟ್ಟಿನಲ್ಲಿ ಸಮಬಲ ಇದೆ ಎಂದು ಆಟಗಾರರ ಜಟಾಪಟಿಯ ಸೊಬಗನ್ನು ಸವಿಯುವುದೇ ಕಬಡ್ಡಿ. ಕಬಡ್ಡಿ ಪಂದ್ಯದಲ್ಲಿ ಆಟಗಾರರಿಗೆ ಕಬಡ್ಡಿ ..ಕಬಡ್ಡಿ ಎಂಬ ಪದವೇ ಜೀವನಾಡಿ.ಕಬಡ್ಡಿ ಭಾರತದ ಅಪ್ಪಟ ಮಣ್ಣಿನ ಗ್ರಾಮೀಣ-ಕ್ರೀಡೆಯಾಗಿ ಜೀವ ತಳೆದು ಪ್ರಸ್ತುತ ಹಲವು ಗುಣಮಟ್ಟದ ಮಾರ್ಪಾಡಿನೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವುದು ಭಾರತದ ಎಲ್ಲರಿಗೂ ಹೆಮ್ಮೆ ಹಾಗೂ ಸ್ವಾರಸ್ಯದ ಸಂಗತಿ. ಪುಟಾಣಿಗಳಿಂದ ಹಿಡಿದು ಹಿರಿಯರವರೆಗೂ ವಯಸ್ಸಿನ ಅಂತರವಿಲ್ಲದೆ ಬಲು ಮೆಚ್ಚುಗೆಗೆ ಪಾತ್ರವಾದ ಕ್ರೀಡೆ ಎಂದರೆ ಅದೇ ಕಬಡ್ಡಿ.
ಭಾರತ ಇಂದು ಪ್ರೋ ಕಬಡ್ಡಿ ಲೀಗ್ ಅನ್ನು ಆಯೋಜಿಸುವುದರ
ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿ, ಆಕರ್ಷಿಸಿ ಜನಮನ್ನಣೆ ಗಳಿಸಿದೆ.ಇದೀಗ ಕಬಡ್ಡಿ ಆಟ ಅಪಾರ ಪ್ರಮಾಣದ ವೀಕ್ಷಕರನ್ನು ಒಳಗೊಂಡು ದೇಶದಿಂದ -ವಿದೇಶದವರೆಗೆ, ಕಿರಿಯರಿಂದ -ವಯಸ್ಕರವರೆಗೆ ನವ ಹುಚ್ಚು ಅಭಿಮಾನವನ್ನು ಹುಟ್ಟಿಸಿ,
ಹೊಸ ಕ್ರಾಂತಿಯ ಅಲೆಯನ್ನು ವಿಸ್ತರಿಸಿದ ಹೆಮ್ಮೆಯ “ಪ್ರೋ ಕಬಡ್ಡಿ” ಆಟಗಾರರ ಜೀವನಧಾರವಾಗಿದೆ.ಒಂದು ಕಾಲಘಟ್ಟದಲ್ಲಿ ಕಬಡ್ಡಿಯನ್ನು ಮಣ್ಣಿನ ಕ್ರೀಡೆ ಎಂದೇ ಕಡೆಗಣಿಸಿ,ಕ್ರಿಕೆಟ್ ಗೆ ಹೆಚ್ಚಿನ ಪ್ರಾಶಸ್ತವಿತ್ತರಾದರೂ ಇಂದು ಪ್ರೋ ಕಬಡ್ಡಿ ಲೀಗ್ ಒಂದನ್ನು ಸ್ಥಾಪಿಸಿ ಕಬಡ್ಡಿಗೆ ವಿಶ್ವದಾದ್ಯಂತ ನವ ಚಾಲನೆಯೊಂದನ್ನು ಕೊಟ್ಟು ಹಲವಾರು ಸಮಗ್ರ ಯುವ ಆಟಗಾರರ ಜೀವನೋಪಾಯಕ್ಕೆ ದಾರಿದೀಪವಾಗಿದೆ.

ಕಬ್ಬಿಣ ಕುಲುಮೆಯ ಬೆಂಕಿಯಲ್ಲಿ ಕಾದಾಗಲೇ ಹರಿತವಾದ ಆಯುಧದ ರೂಪು ರೇಷೆಗಳನ್ನಾಗಿ ಮಾರ್ಪಡಿಸಲು ಸಾಧ್ಯವೆಂಬಂತೆ, ಗುರಿಯೆಂಬ ಪರದೆ ಮೇಲೆ ಪರಿಶ್ರಮದ ಬೆಳಕನ್ನರಿಸಿ,ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಸಾಧನೆಯ ಚಿತ್ತಾರ ಮೂಡಿಸಿ,ಪಿಕೆಎಲ್ ನಲ್ಲಿ ಸ್ಥಾನ ಪಡೆಯುವುದು ಎಂದರೆ ಅಸಾಮಾನ್ಯವಾದ ವಿಷಯ.ಪ್ರೋ ಕಬಡ್ಡಿಯಂತಹ ವಿಶೇಷ ಕ್ಷೇತ್ರದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ಮಿನುಗುತ್ತಿರುವ ಅದೃಷ್ಟವಂತ-ಮಿಂಚಿನ ಆಟಗಾರ,ತುಳುನಾಡಿನ ಕಡಲತಡಿಯ ಹೆಮ್ಮೆಯ ನಕ್ಷತ್ರ,ಕಬಡ್ಡಿ ರಂಗದ ಕಿಲಾಡಿ,ಸುಧೃಡ ಆಕರ್ಷಕ ನೀಳ ಮೈಕಟ್ಟಿನ ಸುಂದರ ತರುಣ,ಸೃಜನ ಶೀಲಾ ಸದ್ಗುಣ,ಎಂಟೆದೆ ಎದೆಗಾರಿಕೆ ಛಲಗಾರ, ಗುಣಸಂಪನ್ನ, ವಿಧೇಯ-ವಿನಯತೆಯ ಆದರ್ಶ ವ್ಯಕ್ತಿತ್ವದ ಹರಿಕಾರ, ಗೃಹಸ್ಥ,ಸುಶೀಲ,ನಮ್ಮೂರಿನ ಹೆಮ್ಮೆಯ ಪ್ರತಿಭೆ,ಪ್ರೋ ಕಬಡ್ಡಿ ರಣರಂಗದಲ್ಲಿ ಹುಲಿಯಂತೆ ಘರ್ಜಿಸಿ ಎದುರಿನ ಅಂಕಣಕ್ಕೆ ನುಸುಳಿ ಎದುರಾಳಿಯನ್ನು ಬಿಗಿಹಿಡಿತದಿಂದ ಬಂಧಿಸುವ ಅಮೋಘ ವಿಜಯಿಪಟು
ಕರಾವಳಿ ಪ್ರದೇಶದ ಅಪರೂಪದ ಕ್ರೀಡಾಪಟು ಅನರ್ಘ್ಯರತ್ನ ಶ್ರೀ ಸಚಿನ್ ಸುವರ್ಣ

ಸಚಿನ್ ಸುವರ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ನಿವಾಸಿ
ದಿ.ವಿಠಲ್ ಪೂಜಾರಿ ಮತ್ತು ಇಂದಿರಾ ದಂಪತಿಯ ಮೂವರು ಮಕ್ಕಳಲ್ಲಿ ಎರಡನೇಯ ಸುಪುತ್ರ.
ಬಡತನದ ಬೇಗೆಯಲ್ಲಿ ಬೆಂದು ಏನಾದರೂ ವಿಶಿಷ್ಟವಾಗಿ ಸಾಧಿಸಬೇಕೆಂದು ಅಚಲ ನಿರ್ಧಾರದೀ ಅಮೋಘ ಸಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಬಡ್ಡಿಯಲ್ಲಿ ವಿಭಿನ್ನವಾಗಿ ಪಳಗಿ, ಕಬಡ್ಡಿ ರಣರಂಗದಲ್ಲಿ
ಮುನ್ನುಗಿ ನವಶೈಲಿ ಪರಾಕ್ರಮದ ಛಾಪನ್ನು ಮೂಡಿಸಿ,ವೀಕ್ಷಕರ ಗಮನ ಸೆಳೆದು ಪ್ರೋ ಕಬಡ್ಡಿ ಲೀಗ್ ಗೆ ಕರ್ನಾಟಕದಿಂದ ಆಯ್ಕೆಯಾದ ಆಟಗಾರರಲ್ಲಿ ಇವರೂ ಒರ್ವರು.ಪ್ರೋ ಕಬಡ್ಡಿಯ ಹಿಂದಿನ ಎರಡು ಸೀಸನ್ ನಲ್ಲಿ ಪುಣೇರಿ ಪಲ್ವಾನ್ ತಂಡವನ್ನು ಪ್ರತಿನಿಧಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.ಪ್ರಸ್ತುತ ಎಂಟು ವರ್ಷಗಳಿಂದ ಬೆಂಗಳೂರಿನ ವಿಜಯಬ್ಯಾಂಕ್ ಈಗಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಅಸ್ಟಿಸ್ಟೆಂಟ್ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಚಿನ್ ಏಳವೆಯ ವಯಸ್ಸಿನಲ್ಲೇ ಕ್ರಿಕೆಟ್,ಕಬಡ್ಡಿ ಆಟ ಆಡುವುದರಲ್ಲಿ ಒಲವು ಇದ್ದರೂ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಸಿಗದೆ ಅವಕಾಶ ವಂಚಿತರಾಗಿದ್ದರು.ಪ್ರೌಢ ಶಿಕ್ಷಣದ ಆನಂದಾಶ್ರಮ ಹೈಸ್ಕೂಲ್ ಸೋಮೇಶ್ವರದ ದೈಹಿಕ ಶಿಕ್ಷಕರಾದ ತಾರಾನಾಥ್ ರೈ ಉಚ್ಚಿಲ ಇವರು ಕಬಡ್ಡಿ ಆಟದ ಕಡೆ ಹೆಚ್ಚಿನ ಗಮನ ನೀಡುವಂತೆ ಸಲಹೆವಿತ್ತರು. ಪದವಿಪೂರ್ವ ಕಾಲೇಜು ಶಿಕ್ಷಣವನ್ನು ಗೋಕರ್ಣನಾಥ ಕಾಲೇಜು ಮಂಗಳೂರುನಲ್ಲಿ ಅಭ್ಯಾಸಿಸುತ್ತಿರುವಾಗ
ದೈಹಿಕ ನಿರ್ದೇಶಕರಾದ ಪುರುಷೋತ್ತಮ ಪೂಜಾರಿಯವರು ಇವರ ವಿಭಿನ್ನ ಪ್ರತಿಭೆಯನ್ನು ಗಮನಿಸಿ ಕಬಡ್ಡಿಗೆ ಬಹುಕೇಂದ್ರಿಕರಿಸಿ ವಿಶೇಷ ಮಾರ್ಗದರ್ಶನವಿತ್ತರು.ಪಿಯು ಮುಗಿದ ನಂತರ ಗೋಕರ್ಣ ಪದವಿ ಕಾಲೇಜಿನ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವಾಗ ಆಕಸ್ಮಾತ್ ಆಗಿ ದುರಾದೃಷ್ಟವತ್ ತನ್ನ ಮನೆಯ ಬಡತನದ ಆರ್ಥಿಕತೆಯ ಕುಸಿತದ ಕಾರಣದಿಂದ ಕಾಲೇಜಿಗೆ ಹೋಗಲಾಗದೆ ಮತ್ತು ಅಣ್ಣನಿಗೆ ಶಸ್ತ್ರಚಿಕಿತ್ಸೆ ಆದ್ದುದ್ದರಿಂದ ಮನೆಯಲ್ಲಿ ದುಡಿಯುವವರು ಯಾರು ಇಲ್ಲದ ಕಾರಣ ಕಾಲೇಜು ಮುಂದುವರಿಸಲಾಗಲಿಲ್ಲ. ತದನಂತರ ಅನಿವಾರ್ಯವಾಗಿ ಲಾರಿ ಕೆಲಸ ಮಾಡುತ್ತ ಒಂದು ವರ್ಷ ಪದವಿ ಶಿಕ್ಷಣಕ್ಕೆ ತಡೆಯಾಯಿತು.ಈ ಕಾರಣವನ್ನರಿತ್ತ ಮರುವರ್ಷ ಆಳ್ವಾಸ್ ಶಿಕ್ಷಣ ಸ್ಥಾಪಕರಾದ ಡಾ.ಶ್ರೀ ಮೋಹನ್ ಆಳ್ವ ರವರು ಸಚಿನ್ ಅವರಂತಹ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಹುರಿದುಂಬಿಸಿ ಸ್ಪೋಟ್ಸ್ ಕೋಟಾದಲ್ಲಿ ಮೇರಿಟ್ ಸೀಟ್ ಕೊಡಿಸಿ ಉಚಿತವಾಗಿ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಸಿ ಹಾಗೇ ಆಳ್ವಾಸ್ ದೈಹಿಕ ನಿರ್ದೇಶಕರಾದ ಕರುಣಾಕರ್ ಶೆಟ್ಟಿ ಪೂರ್ಣ ಪ್ರಮಾಣದ ಬೆಂಬಲ ನೀಡಿದ ಫಲವಾಗಿ ಪ್ರಸ್ತುತ ಇಂದು ಉತ್ತಮ ಶ್ರೇಣಿಯ ಕ್ರೀಡಾ ಪ್ರತಿಭೆಯಾಗಿ ಹೊರಹೊಮ್ಮಿ ದೇಶದಲ್ಲೆಡೆ ಹೆಸರುವಾಸಿ ಆಗಿದ್ದಾರೆ.
ಆಳ್ವಾಸ್ ಕಾಲೇಜು ಮೂಡಬಿದಿರೆಯಲ್ಲಿ ಬಿ.ಕಾಂ ಪದವಿ ವಿದ್ಯಾರ್ಥಿ ಆಗಿರುವಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಆಡುತ್ತಿದ್ದ ಸಚಿನ್ ಮುಂದೆ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುವರೆಗೆ ಮುಂದುವರಿದರು. ಮತ್ತೆ ಮಾಸ್ಟರ್ ಆಫ್ ಡಿಗ್ರಿ ಹ್ಯೂಮನ್ ರಿಸೋರ್ಸ್ ಡಿವಲೆಪೆಮೆಂಟ್ ಶಿಕ್ಷಣ ಪೊರೈಸಿ ಸದಾವಕಾಶದಂತೆ 2012 ರಲ್ಲಿ ಸ್ಪೋಟ್ಸ್ ಕೋಟಾದಲ್ಲಿ ಬೆಂಗಳೂರು ವಿಜಯಬ್ಯಾಂಕ್ ನಲ್ಲಿ ಉದ್ಯೋಗ ಲಭಿಸುತ್ತದೆ. 2015 ರಲ್ಲಿ ವಿಜಯಬ್ಯಾಂಕ್ ನ ಉದ್ಯೋಗ ನಿಮಿತ್ತದ ಆಡಳಿತ ಮಂಡಳಿ ವ್ಯವಸ್ಥೆಯಂತೆ ಕೋಚ್ ರಾಜೀವ್ ಶೆಟ್ಟಿ ಅವರ ಪ್ರಬಲ ಕಠಿಣ ತರಬೇತಿ ಹಾಗೂ ಮಾರ್ಗದರ್ಶನದ ಮುಖೇನ ಪ್ರೋ ಕಬಡ್ಡಿ ಕರ್ನಾಟಕ ತಂಡಕ್ಕೆ ಆಯ್ಕೆ ಆಗುತ್ತಾರೆ ತದನಂತರ ಪ್ರೋಕಬಡ್ಡಿ ಲೀಗ್ ಗೆ ಆಯ್ಕೆಯ ಪ್ರಕ್ರಿಯೆ ಎರಡನೇ, ಮೂರನೇ ಪುನೇರಿ ಪಲ್ಟಣ್ ತಂಡದ (ನಾಯಕತ್ವ .ವಜ್ಹಿರ್ ಸಿಂಗ್) 2018 ರಲ್ಲಿ ಗುಜರಾತ್ ಟೀಮ್ ಗೆ ಪಾರ್ಚೂನ್ ಗೈನ್ಟ್ (ನಾಯಕತ್ವ .ಸುನೀಲ್) ಪಂದ್ಯಾವಳಿ ಆಟವಾಡಿದ ಅಮೋಘ ಆಟಗಾರ. ತದನಂತರ 2016ರಲ್ಲಿ ವಿಜಯಬ್ಯಾಂಕ್ ನ ಮೇನೆಜರ್ ಆಗಿ ಭಡ್ತಿ ಹೊಂದುತ್ತಾರೆ.
ಗುಜರಾತ್ ಟೀಮ್ ನಲ್ಲಿ ಬೆಸ್ಟ್ ಕ್ಯಾಚರ್ ಆವರ್ಡ್ ಐವತ್ತು ಸಾವಿರ ಕ್ಯಾಸ್ ಪ್ರೈಸ್ ಹಾಗೇ ತಂಡಕ್ಕೆ ದ್ವಿತೀಯ ಸ್ಥಾನ, ಪುನೇರಿ ಪಲ್ಟಣ್ ಎರಡನೇ ಸೀಸನ್ 2015 ರಲ್ಲಿ ಬೈಕ್ ಉಡುಗೊರೆಯಾಗಿ ಸಿಕ್ಕಿರುತ್ತದೆ.
ಎರಡು,ಮೂರು ಬಾರಿ ಕರ್ನಾಟಕ ಟೀಮ್ ಸೆಲೆಕ್ಟ್ ಆಗಿ ನಂತರ 2019 ರಲ್ಲಿ ಭಾರತೀಯ ಕಬಡ್ಡಿ ತಂಡ ಶಿಬಿರ ದಿಲ್ಲಿಗೆ ಆಯ್ಕೆಆಗಿರುವುದು ನಿಜಕ್ಕೂ ಪ್ರಶಂಸನೀಯ.ಭಾರತೀಯ ತಂಡದ ಮೂವತ್ತು ಆಟಗಾರರಲ್ಲಿ ಸಚಿನ್ ಒರ್ವರಾಗಿದ್ದು,ಅಕ್ಷರಶ ತುಳುನಾಡಿಗೆ ಹೆಮ್ಮೆ ತರುವಂತಹ ವಿಷಯ.

ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿರುವ ಇವರು 2016 -2017ರಲ್ಲಿ ವಿಶಾಖ ಪಟ್ಟಣದಲ್ಲಿ ನಡೆದ ಬೀಚ್ ಕಬಡ್ಡಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು ,2017- 2018ರಲ್ಲಿ ತೆಲಂಗಾಣದಲ್ಲಿ ನಡೆದ 65ನೇ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಕಂಚಿನ ಪದಕ ಹಾಗೇ 2018ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಕೈಗಾರಿಕಾ ವಿಭಾಗದ ಕಬಡ್ಡಿ ಟೂರ್ನಿಯಲ್ಲಿ ವಿಜಯಬ್ಯಾಂಕ್ ತಂಡವನ್ನು ಪ್ರತಿನಿಧಿಸುವುದರ ಮೂಲಕ ಹಲವಾರು ಪ್ರಶಸ್ತಿ,ಅಸಂಖ್ಯಾತ ಸನ್ಮಾನವನ್ನು ಪ್ರತಿಷ್ಠಿತ ಸಭೆ,
ಸಮಾರಂಭದಲ್ಲಿ ಮುಡಿಗೇರಿಸಿಕೊಂಡ ಮಾಣಿಕ್ಯ.
ಪ್ರೋ ಕಬಡ್ಡಿ ಎರಡನೇ ಸೀಸನ್ ನ ಬೆಸ್ಟ್ ರೈಡರ್ ಮೂರನೇ ಸೀಸನ್ ನಲ್ಲಿ ಗುಜರಾತ್ ಟೀಮ್ ಗೆ ಕ್ಯಾಚರ್ಹಾಗೇ ಅಲ್ ರೌಂಡರ್ ಆಗಿ ಮುನ್ನುಗಿ ಅಮೋಘ ಸಾಧನೆದೀ,
ವಿಜಯದ ರೋಚಕತೆಯಲ್ಲಿ ಮುಂಚೂಣಿಯಲ್ಲಿದ್ದು ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು 6.1 ಎತ್ತರವಿದ್ದು ,85 ಕೆ.ಜಿ ತೂಕದ ಕಬಡ್ಡಿ ಪಂದ್ಯದಲ್ಲಿ ಆಡುವ ಆಟಗಾರರಾಗಿದ್ದಾರೆ.ನಿತ್ಯ ನಿರಂತರ ಕಬಡ್ಡಿಗಾಗಿ ದಿನಕ್ಕೆ ನಾಲ್ಕು,ಐದು ಘಂಟೆಗಳ ಸತತ ಕಠಿಣ ಪರಿಶ್ರಮದ ತರಬೇತಿ,ವ್ಯಾಯಾಮ,ಜಿಮ್ ಹಾಗೇ ನಿಯಮಿತ ಆಹಾರ ಪದ್ದತಿ,ದುಶ್ಚಟದ ಅಭ್ಯಾಸವಿಲ್ಲದ ಪರಿಣಾಮವಾಗಿ ಸಮರ್ಥ ಆಟಗಾರನಾಗಿ ಹೊರಹೊಮ್ಮಲು
ಬಿಗಿಹಿಡಿತದಿಂದ ಎದುರಾಳಿಯನ್ನು ಬಂಧಿಸುವ ಹೆಮ್ಮೆಯ ಅಲ್ ರೌಂಡರ್ ಅತ್ಯುತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿ ತನ್ನ ಕಠಿಣ ಪರಿಶ್ರಮ ಆಸಕ್ತಿಯಿಂದ ಕಬಡ್ಡಿ ಕ್ಷೇತ್ರದಲ್ಲಿ ಉತ್ತುಂಗದ ಹಾದಿ ಹಿಡಿಯುತ್ತಿರುವ ವಿಜಯಿಶಾಲಿ ಸಚಿನ್ ಸುವರ್ಣ.
ಸಚಿನ್ ಸುವರ್ಣ ಅವರು ರಾಜ್ಯ,ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಅಪಾರ ಅಭಿಮಾನಿ,ಸ್ನೇಹಿತ ಬಳಗ ಸಂಪಾದಿಸಿರುವ ನಿಷ್ಕ್ಮಲಶ ಮನಸ್ಸಿನ ಕಬಡ್ಡಿ ರತ್ನ,ಹೆಮ್ಮೆಯ ಶ್ರೇಷ್ಠ ಸಾಧಕ.ಮುಂದಿನ ಭವಿಷ್ಯ ದಿನಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟು ಪ್ರೋ ಕಬಡ್ಡಿಯಲ್ಲಿ ಅವಕಾಶವಂಚಿತರಾಗದೆ ನಿರಂತರ ಆಡುವಂತಾಗಲಿ ಎಂಬ ಆಶಯದೊಂದಿಗೆ ಪ್ರೊಕಬಡ್ಡಿಆಡಳಿತ ಮಂಡಳಿಗೊಂದು ಮನವಿ.ಜೀವನವೆಂಬ ಹೂಬನದಲ್ಲಿ ಅವಕಾಶಗಳ ಅಂಕಣದೊಂದಿಗೆ,ಪ್ರಶಸ್ತಿ ಸರಮಾಲೆಯಲ್ಲಿ ಜಯಶೀಲರಾಗಿ ತುಳುನಾಡಿಗೆ,ರಾಜ್ಯ,ದೇಶ,
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಯಶಸ್ವಿಯಾಗಿ ವಿಜಯಶಾಲಿಯಾಗಲೆಂದು ಶುಭಹಾರೈಕೆ.ಅಂತರಾಷ್ಟ್ರೀಯ ಮಟ್ಟದಲ್ಲೂ ಕಬಡ್ಡಿ ಕ್ಷೇತ್ರದಲ್ಲಿ ಪ್ರತಿನಿಧಿಸಿ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದಾದಂತ್ಯ ಗಿರಿಶಿಖರದಲ್ಲಿ ಏರಿಸಿ, ತುಳುನಾಡಿಗೆ,ದೇಶಕ್ಕೆ ಸಿರಿಮುಡಿಯ ಹೊನ್ನ ಕಲಶವಾಗಲಿ ಹಾಗೇ ಶ್ರೀದೈವ ದೇವರ ಕೃಪಾಕಟಾಕ್ಷ ಸದಾ ಇರಲಿ. ಅಂತರಾಷ್ಟೀಯ ಕಬಡ್ಡಿಮಟ್ಟದಲ್ಲಿ ಸಾಧನೆ ಸೃಷ್ಟಿಸಿ,ನವಇತಿಹಾಸದ ಅನಾವರಣಗೊಳಿಸಲಿ ಹಾಗೇ ಇವರ ಅಸಾಮಾನ್ಯ ಕ್ರೀಡಾಸಾಧನೆಯ ಬದುಕಿನ ಹೊಂಗಿರಣ ಸಮಾಜಕ್ಕೆ ಪ್ರೇರಣಾಶಕ್ತಿಯ ಸೆಳೆಯಾಗಿ ಪರಿವರ್ತಿಸುತ್ತ ದೇಶದ ಯುವಜನತೆಗೆ ಮಾದರಿಯಾಗಲಿ ಎಂಬ ಸದಾಶಯದೊಂದಿಗೆ,ದೇಶದ ಹೆಮ್ಮೆಯ ತುಳುನಾಡ ಕ್ರೀಡಾರತ್ನ ಸಾಧಕನಿಗೆ ಗೌರವ-
ಅಭಿಮಾನವ ಪದಪುಂಜದೀ ಪೋಣಿಸಿ,ಚಿತ್ತಾರದೀ ಸಿಂಚನಗೈದ ಶುಭಾಂಶನದ ನುಡಿಮಾಲೆ.

✒️ಶ್ರೀಮತಿ ಅರ್ಚನ.ಎಂ.ಬಂಗೇರ
ಕುಂಪಲ

 


Share:

More Posts

Category

Send Us A Message

Related Posts

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು


Share       ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಉಡುಪಿ ಜಿಲ್ಲೆಯ ಅಂಬಲಪಾಡಿ ವಿಠೋಬ ರುಕುಮಾಯಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಪೂಜಾರಿಯವರ ನೇತೃತ್ವದಲ್ಲಿ ಫೆಬ್ರವರಿ


Read More »

ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್


Share       ಯುವವಾಹಿನಿ( ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಾಟಕ ಪ್ರದರ್ಶನ ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್ ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ಸಂಘಟನೆಯ ವತಿಯಿಂದ 7ನೇ ವರ್ಷದ ಸಂಭ್ರಮಾಚರಣೆ


Share       ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ದೇಯವಾಕ್ಯದೊಂದಿಗೆ ಹುಟ್ಟಿಕೊಂಡ ಸಂಸ್ಥೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೆರಳಾಗಿ ಸಾಮಾಜಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರವಾದ


Read More »

ಸೌದಿ ಅರೇಬಿಯಾದಲ್ಲಿ ನಡೆದ 17ನೇ ಸಂಸ್ಕೃತಿ ಸಮ್ಮೇಳನದಲ್ಲಿ ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ


Share       ಶಿವಾನಂದ ಕೋಟ್ಯಾನ್ ರಿಗೆ  “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ ಕಟಪಾಡಿ  ಶಿವಾನಂದ ಕೋಟ್ಯನ್ ಎರಡು ದಶಕಗಳ ಕಾಲ ಅನಿವಾಸಿ ಭಾರತೀಯನಾಗಿ ಸಮಾಜಿಕ ಸ್ಪಂದನ ಕಾರ್ಯ, ಹಾಗೂ ನಾಡಿನ ಸಾಂಸ್ಕೃತಿಕ, ಸಾಹಿತ್ಯ ,ನಾಟಕ, ಸಿನೆಮಾ ಅಯೂಜನೆ ಹೀಗೆ


Read More »

ವಿಶ್ವ ಮಾನ್ಯ” ಪ್ರಶಸ್ತಿ 2024 ಭಾಜನರಾದ ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್


Share       ಸೌದಿ ಅರಬಿಯಾ: ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ವಿಶ್ವ ಮಾನ್ಯ” ಪ್ರಶಸ್ತಿ 2024 ನೀಡಿ  ಗೌರವಿಸಲಾಯಿತು. 17 ನೇ ವಿಶ್ವ ಕನ್ನಡ ಸಮ್ಮೇಳನವು ಫೆಬ್ರವರಿ 8 ರಂದು ಸೌದಿ


Read More »

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ


Share       ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ. ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ


Read More »