TOP STORIES:

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..


ಸಂಘಟನೆ ಯಿಂದ ಬಲಿಷ್ಠರಾಗಿ ಎಂಬುದರ ನಿಜವಾದ ಅರ್ಥ

ವಾರಕ್ಕೊಮ್ಮೆ ನಮ್ಮವರ ಪರಿಚಯ..

ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ ಕುಡ್ಲದಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..

ಒಂದೇ ಜಾತಿ ಒಂದೇ ಮತ ಒಂದೇ ದೇವರುಎಂಬನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರುಬ್ರಹ್ಮಶ್ರೀನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರುಣೆಮತಯದೀವಿಗೆಯಾಗಿ ಸಮಾಜಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಪರರ ನೋವು ನಲಿವುಗಳಿಗೆ ಧ್ವನಿಯಾಗಿ ಕಷ್ಟ ಎಂದು ಕಂಬನಿಮಿಡಿಯುವ ಮನಗಳಿಗೆ ಅವರ ಕಣ್ಣೀರೋರೆಸಿ ಮನ  ಮನೆಯಲ್ಲಿನಂದಾದೀಪ ಬೆಳಗಿಸಿದವೇ ನಮ್ಮ ಪ್ರೀತಿಯ ಬಿರುವೆರ್ಕುಡ್ಲಸಂಘಟನೆಯ ರೂವಾರಿ ಉದಯ ಪೂಜಾರಿ ಬಲ್ಲಾಳ್ ಬಾಗ್..

ಆಡದಲೆ ಮಾಡುವವನು ರೂಢಿಯೊಳಗುತ್ತಮಎನ್ನುವ ಸರ್ವಜ್ಞನ ಸಾರದಂತೆ ಯಾವುದೇ ಸದ್ದುಗದ್ದಲವಿಲ್ಲದೆಸಮಾಜದಸೇವೆಗಾಗಿ ತನ್ನಜೀವನವನ್ನು ಮುಡಿಪಾಗಿಟ್ಟವರು. ಮಾತ್ರವಲ್ಲದೆ ಸಮಾಜ ಒದಗಿಸಿರೋ ಅವಕಾಶವನ್ನು ಸಮಾಜದಸೇವೆಗಾಗಿ ಮೀಸಲಾಗಿಟ್ಟವರು.

ಬಿರುವೆರ್ ಕುಡ್ಲ ಸ್ಥಾಪನೆಯಾಗಿ 7ವರ್ಷ ಕಳೆದಿಲ್ಲ ಆದರೆ ಕಡಿಮೆ ಅವಧಿಯಲ್ಲಿ ಮಹತ್ತರವಾದ ಸೇವೆಯ ಮುಖೇನ ಸುಮಾರು20 ಘಟಕಗಳನ್ನು ಸ್ಥಾಪಿಸಿ. 2 ಕೋಟಿ ಗಿಂತಲು ಹೆಚ್ಚು ಮೊತ್ತದ ಸಹಾಯ ಹಸ್ತವನ್ನು ಸಮಾಜದ ಬಡ ಜನರಿಗಾಗಿ ನೀಡಿರುವುದುಮಾತ್ರವಲ್ಲದೆಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸುತ್ತಿರುವ ಸಂಧರ್ಭದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಆಂಬುಲೆನ್ಸ್  ಜನರ ಸೇವೆಗಾಗಿ ನೀಡಿದ್ದು ಒಂದು ದಾಖಲೆಯೇ ಸರಿ. ಇಂತಹ ಸಮಾಜಮುಖಿ ಚಿಂತನೆಯ ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ಕುಡ್ಲ ಸಂಘಟನೆಯ  ಕೀರ್ತಿ,  ಶ್ರೇಯಸ್ಸು ನಮ್ಮ ಉದಯ್ ಪೂಜಾರಿ ಯವರಿಗೆ ಸಲ್ಲುತ್ತದೆ..

ದೇವರು ಇವರಿಗೆ ಐಶ್ವರ್ಯ ಆರೋಗ್ಯ ಕೊಟ್ಟು ಕಾಪಾಡಲಿ..

Team.. World Ediga Network Gouds Cummunity


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »