ಶಕ್ತಿನಗರ: ಖ್ಯಾತ ಕನ್ನಡ ಚಲನ ಚಿತ್ರ ನಟ, ಡಿ ಬಾಸ್ ಖ್ಯಾತಿಯ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿಬಾಸ್ ಅವರ ಆತ್ಮೀಯ ಗೆಳೆಯ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಥಾಪಕ ಅಧ್ಯಕ್ಷ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಬಿರುವೆರ್ ಕುಡ್ಲದ ಸದಸ್ಯರು ಒಟ್ಟಾಗಿ ಶಕ್ತಿ ನಗರದಲ್ಲಿರುವ ಸಾನಿಧ್ಯ ವಸತಿ ಶಾಲೆಯ ವಿಶೇಷ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆ, ಕೇಕ್ ಕಟ್ಟಿಂಗ್ ಮದ್ಯಾಹ್ನ
ಉಟದ ವಿತರಣೆ ಮಾಡಲಾಯಿತು.
ಸ್ವತಃ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಹಾಗೂ ಸದಸ್ಯರು ವಿಶೇಷ ಚೇತನ ಮಕ್ಕಳಿಗೆ ಊಟವನ್ನು ಬಡಿಸಿದರು. ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಸ್ವಲ್ಪ ಸಮಯ ಕಳೆದರು. ಮಕ್ಕಳಿಗೆಂದೇ ವಿಶೇಷ ಅಡುಗೆಯನ್ನು ತಯಾರು ಮಾಡಿಸಲಾಗಿತ್ತು. ಬಿರಿಯಾನಿ, ಪಾಯಸ, ಮಾಂಸಹಾರದ ಊಟದ ಜತೆಗೆ ಸಸ್ಯಹಾರದ ಊಟವನ್ನೂ ಮಕ್ಕಳ ಇಚ್ಚೆಗೆ ತಕ್ಕಂತೆ ಬಡಿಸಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ವಸಂತ್ ಕುಮಾರ್ ಶೆಟ್ಟಿ ಅವರು ಫ್ರೆಂಡ್ಸ್ ಬಳ್ಳಾಲ್‍ಬಾಗ್ ತಂಡವು ದರ್ಶನ್ ಅವರ ಹುಟ್ಟು ಹಬ್ಬವನ್ನು ನಮ್ಮ ಸಂಸ್ಥೆಯಲ್ಲಿ ಆಚರಿಸಿಕೊಂಡಿರುವುದು ಸಂತಸ ತಂದಿದೆ ಎಂದರು. ಮಕ್ಕಳು ತಯಾರಿಸಿದ ವಿಶೇಷ ಹೂವಿನ ಗುಚ್ಚವನ್ನು ಉದಯ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಕಾಪೆರ್Çರೇಟರ್ ಜಗದೀಶ್ ಶೆಟ್ಟಿ ಶುಭ ಹಾರೈಸಿದರು.
ರಾಕೇಶ್ ಪೂಜಾರಿ ಬಳ್ಳಾಲ್‍ಬಾಗ್, ರಾಕೇಶ್ ಸಾಲ್ಯಾನ ಚಿಲಿಂಬಿ,ಕಿಶೋರ್ ಬಾಬು,ಲೋಹಿತ್ ಗಟ್ಟಿ,ರಾಮ್ ಪ್ರಸಾದ್,ರೋಶನ್ ಮಿನೇಜಸ್,ಪ್ರಾಣೇಶ್ ಬಂಗೇರ,ಮನೋಜ್ ಕುಮಾರ್ ಶೆಟ್ಟಿ,ಚೇತನ್ ರಾಜ್,ರೋಶನ್ ಬಳ್ಳಾಲ್ ಬಾಗ್,ಮಹೇಶ್,ರಾಜೇಶ್ ಉರ್ವ,ವಿನೀತ್ ಬಳ್ಳಾಲ್‍ಬಾಗ್,ವಿಘ್ನೆಶ್ ಚಿಲಿಂಬಿ,ಲಕ್ಷ್ಮೀಶ್ ಸುವರ್ಣ,ಸಾಗರ್ ಪೂಜಾರಿ,ಓಝಿ ಪದವಿನಂಗಡಿ,ಯಶ್ವಿನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.