TOP STORIES:

FOLLOW US

ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ -ವಸಂತ್ ಗಿಳಿಯಾರ್


ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ
-ವಸಂತ್ ಗಿಳಿಯಾರ್

ಇವತ್ತು ಚಾಂಪ ಪೂಜಾರಿಯವರಿಲ್ಲ! ಆದರೆ ಅವರ ಹೆಸರು ಉಳಿದಿದೆ, ಧರ್ಮಸ್ಥಳ ಎಂದರೆ ನಮ್ಮ ಭಾಗದಲ್ಲಿ ಎಂದಿಗೂ ನೆನಪಾಗುವ ಹೆಸರದು. ಧರ್ಮಸ್ಥಳದ ಸತ್ಯ, ಧರ್ಮ,ನ್ಯಾಯ,ನೀತಿ ಎಂಬ ಆಶಯಗಳನ್ನೇ ಬದುಕಿ ತನ್ನ ಬದುಕನ್ನೇ ಸತ್ಯವೃತವಾಗಿಸಿಕೊಂಡು ಕಾಯವನ್ನ ಗಂದದ ಕೊರಡಿನಂತೆ ಸವೆಸಿದ ಕೀರ್ತಿಶೇಷರು ಚಾಂಪ ಪೂಜಾರಿ.

ಆ ಕಾಲದಲ್ಲಿ ಈ ಊರಿನಿಂದ ಧರ್ಮಸ್ಥಳಕ್ಕೆ ಹೋಗಬೇಕಿದ್ದರೆ, ಖಾವಂದರ ನ್ಯಾಯ ಛಾವಡಿಯಲ್ಲಿ ವಾಗ್ ಕಲಹ ಪರಿಹಾರವಾಗಬೇಕಿದ್ದರೆ, ಸಸೂತ್ರವಾಗಿ ಮಂಜುನಾಥ ಸ್ವಾಮಿಯ ದರ್ಶನವಾಗಬೇಕಿದ್ದರೆ, ಯಾವ ದಿನ ಬೇಕಿದ್ದರೂ ಧರ್ಮಸ್ಥಳಕ್ಕೆ ಹೋಗಿ ಸುರಕ್ಷಿತವಾಗಿ ಮರಳ ಬಲ್ಲೆ ಎಂಬ ವಿಶ್ವಾಸ ಆ ಕಾಲದ ಭಕ್ತ ಕುಟುಂಬಗಳಿಗೆ ಬಂದದ್ದಿದ್ದರೆ ಈ ಭಾಗದಲ್ಲಿ ಅದೆಲ್ಲದಕ್ಕೂ ಏಕೈಕ ಹೆಸರು ಬನ್ನಾಡಿ ಚಾಂಪ ಪೂಜಾರಿಯವರದ್ದು.

ಚಾಂಪ ಫುಜಾರಿ ಎಂದರೆ ತೆಂಕಣದ ಧರ್ಮದೊಡೆಯನ ಹೃದಯ ಮಂದಿರದಲ್ಲಿಟ್ಟು ಪೂಜಿಸಿದ ಪುಣ್ಯಾತ್ಮ. ಅವರಿಗೆ ಪೂಜ್ಯ ಖಾವಂದರೆಂದರೆ ರಾಮನ ಮುಂದೆ ಹನುಮ ಭಾಗಿದಂತಹ ನಿಷ್ಠೆ, ಅವರದ್ದು ನಿಷ್ಕಳಂಕ ಮನಸ್ಸು, ಪರಿಶುಭ್ರ ಚಾರಿತ್ರ್ಯ. ಬನ್ನಾಡಿ ಗರೋಡಿಯ ಪೂಜೆಯವರಾಗಿದ್ದ ಚಾಂಪ ಫೂಜಾರಿಯವರ ಪೂಜೆಗೆ, ಯಾವ ದೈವವೂ ನಲಿದು, ಒಲಿದು ಬರಬೇಕು, ಅಂಥಹ ತಾದಾತ್ಮ್ಯತೆ

ಚಾಂಪ ಪೂಜಾರಿ ತನ್ನ ವ್ಯಾನಿನ ಮೂಲಕ ಬನ್ನಾಡಿ, ಗಿಳಿಯಾರು,ಕಾವಡಿ, ವಡ್ಡರ್ಸೆ,ಕೋಟ, ಪಡುಕರೆ,ಉಪ್ಲಾಡಿ ಹೀಗೆ ಪುಟ್ಟ ಪುಟ್ಟ ಊರಿನ ದಾರಿಗಳೂ ಧರ್ಮಸ್ಥಳಕ್ಕೆ ಬೆಸೆಯುವ ಸೇತುವೆಯಾದವರು.ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಇಂದಿಗೂ ಚಾಂಪ ಪೂಜಾರಿಯವರ ಮೇಲೆ ಅಪಾರ ಪ್ರೀತಿ ನೆನೆಕೆ, ಖಾವಂದರ ಹೃದಯ ಗೆದ್ದವರು ಚಾಂಪ ಪೂಜಾರಿ. ಅವರ ನಗೆಯೇ ಒಂದು ಪ್ರೀತಿಯ ಕಡಲು ಈ ಪೋಟೋದಲ್ಲೆ ನೋಡಿ ಅವರ ಮುಖದಲ್ಲಿನ ತೇಜೋಪೂರ್ಣ ವರ್ಚಸ್ಸು.

ಚಾಂಪ ಪೂಜಾರಿ ಒಂದರ್ಥದಲ್ಲಿ ಅಕ್ಷರವಿಲ್ಲದ, ಜಗದ ಅರಿವಿಲ್ಲದ ಆ ಕಾಲದ ಮುಗ್ದ ಕುಟುಂಬದ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಮ್ಮ ಭಾಗದ ದ್ವಾರವೇ ಆಗಿದ್ದರು. ನಾಡಿದ್ದು ಅಭಿಮತ ಸಂಭ್ರಮಕ್ಕೆ ನೀವು ಬರುವುದಾದರೆ ’ಬನ್ನಾಡಿ ಚಾಂಪ ಪೂಜಾರಿ ಮಹಾದ್ವಾರದ ಮೂಲಕವೇ ಬರಬೇಕು. ಹೌದು, ಅಭಿಮತ ಸಂಭ್ರಮದ ಮಹಾದ್ವಾರಕ್ಕೆ ಚಾಂಪ ಪೂಜಾರಿಯವರ ಹೆಸರನ್ನ ಇರಿಸಲಿದ್ದೇವೆ. ಇದು ನಾವು ಅವರನ್ನ ಗೌರವದಿಂದ ನೆನೆಯುವ ಪರಿ. ಬರುತ್ತೀರಿ ತಾನೆ?

ಬನ್ನಿ ಗಿಳಿಯಾರಿಗೆ;ತೀರ ನಿಮ್ಮದೇ ಎನಿಸುವ ಊರಿಗೆ !

ಫೋಟೋ ಕೃಪೆ, ಅವರ ಮೊಮ್ಮಗ ಬಿಗ್ ಬಾಸ್ Dhanraj Cm ❤

Vasanth Giliyar


Share:

More Posts

Category

Send Us A Message

Related Posts

ನಿಜವಾದ ಸತ್ಯ ಮತ್ತು ಧರ್ಮದ ಮೇಲೆ ನಿಂತಿರುವ ಪವಿತ್ರ ನಾಡು ನಮ್ಮ ತುಳುನಾಡು….!!! ಇದು ಶ್ರೀ ಬೆಮ್ಮೆರೆ ಸತ್ಯ.


Share       ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ- ‘‘ನಮ್ಮದು ಪರಶುರಾಮ ಸೃಷ್ಟಿ’’ ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ


Read More »

ಬೆಳ್ತಂಗಡಿ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ


Share       ಬೆಳ್ತಂಗಡಿ: ವಿಜಯವಾಣಿ, ಕರಾವಳಿ ಅಲೆ ,ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ. ಪುಡುವೆಟ್ಟು ನಿವಾಸಿ ನಾರಾಯಣ ರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ


Read More »

ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಹಾಗೂ ತಂಡದ ಬಲೆಗೆ ಬಿದ್ದ ಉಡುಪಿ ಖಜಾನೆಯ ಉಪನಿರ್ದೇಶಕ ಹಾಗೂ ಸಹಾಯಕ


Share       ಉಡುಪಿ: ನಿವೃತ್ತ ಶಿಕ್ಷಕರೊಬ್ಬರಿಗೆ ಪೆನ್ಶನ್ ಹಣವನ್ನು ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಉಡುಪಿ ಖಜಾನೆಯ ಉಪನಿರ್ದೇಶಕರು ಹಾಗೂ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ. ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ


Read More »

ಮಂಗಳೂರು: ಮೈಸೂರಿನ ಮೂವರು ಯುವತಿಯರು ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಸಾವು


Share       ಮಂಗಳೂರು, ನ.17: ಮೈಸೂರಿನ ಸೋಮೇಶ್ವರ ಉಚ್ಚಿಲದ ವಾ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಆಟವಾಡುತ್ತಿದ್ದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಮೈಸೂರಿನ ಕುರುಬರಹಳ್ಳಿ ನಾಲ್ಕನೇ


Read More »

ಹೋಟೆಲಿನಲ್ಲಿ ಇಂಗ್ಲಿಷ್ ಮಾತನಾಡುವವರನ್ನು ಕಂಡು ಮೂಕನಂತೆ ನೋಡುತ್ತಿದ್ದ ಯುವಕ ಈಗ ಸಾವಿರಾರು ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ ಶಿಕ್ಷಣ ದಿಗ್ಗಜ ಪ್ರಕಾಶ್ ಅಂಚನ್


Share       ಬಡತನದ ಬೇಗೆಯಿಂದ ಬಳಲುತ್ತಿದ್ದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. 7ನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕಾಗಿ ಮುಂಬೈಗೆ ಹೊರಟು ಅಲ್ಲಿನ ಹೋಟೆಲುಗಳಲ್ಲಿ ಗ್ಲಾಸ್ ತೊಳೆದು ಸಂಪಾದನೆ ಮಾಡುತ್ತಿದ್ದ ಸಂದರ್ಭವದು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಜನರನ್ನು


Read More »

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಬಿಲ್ಲವರು: ಸಾಹಿತಿ ಸಂಶೋಧಕ ಬಾಬು ಶಿವ ಪೂಜಾರಿ


Share       ”ವಿಜಯನಗರ ಸ್ಥಾಪನೆಯಲ್ಲಿ ಬಿಲ್ಲವರಿದ್ದಾರೆ ಎಂಬುದಕ್ಕೆ ಎರಡು ವೀರಗಲ್ಲುಗಳು ಸಾಕ್ಷಿಯಾಗಿವೆ. ಮೇಲ್ವರ್ಗದವರು ಇತಿಹಾಸವನ್ನು ಹೇಗೆ ತಮಗೆ ತಕ್ಕಂತೆ ಬದಲಾವಣೆ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಾನು ನನ್ನ ಮುಂಬರುವ ಪುಸ್ತಕದಲ್ಲಿ ದಾಖಲೆಗಳನ್ನು ಪ್ರಸ್ತುತಪಡಿಸಲಿದ್ದೇನೆ” ಎಂದು ಹಿರಿಯ


Read More »