TOP STORIES:

ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ -ವಸಂತ್ ಗಿಳಿಯಾರ್


ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ
-ವಸಂತ್ ಗಿಳಿಯಾರ್

ಇವತ್ತು ಚಾಂಪ ಪೂಜಾರಿಯವರಿಲ್ಲ! ಆದರೆ ಅವರ ಹೆಸರು ಉಳಿದಿದೆ, ಧರ್ಮಸ್ಥಳ ಎಂದರೆ ನಮ್ಮ ಭಾಗದಲ್ಲಿ ಎಂದಿಗೂ ನೆನಪಾಗುವ ಹೆಸರದು. ಧರ್ಮಸ್ಥಳದ ಸತ್ಯ, ಧರ್ಮ,ನ್ಯಾಯ,ನೀತಿ ಎಂಬ ಆಶಯಗಳನ್ನೇ ಬದುಕಿ ತನ್ನ ಬದುಕನ್ನೇ ಸತ್ಯವೃತವಾಗಿಸಿಕೊಂಡು ಕಾಯವನ್ನ ಗಂದದ ಕೊರಡಿನಂತೆ ಸವೆಸಿದ ಕೀರ್ತಿಶೇಷರು ಚಾಂಪ ಪೂಜಾರಿ.

ಆ ಕಾಲದಲ್ಲಿ ಈ ಊರಿನಿಂದ ಧರ್ಮಸ್ಥಳಕ್ಕೆ ಹೋಗಬೇಕಿದ್ದರೆ, ಖಾವಂದರ ನ್ಯಾಯ ಛಾವಡಿಯಲ್ಲಿ ವಾಗ್ ಕಲಹ ಪರಿಹಾರವಾಗಬೇಕಿದ್ದರೆ, ಸಸೂತ್ರವಾಗಿ ಮಂಜುನಾಥ ಸ್ವಾಮಿಯ ದರ್ಶನವಾಗಬೇಕಿದ್ದರೆ, ಯಾವ ದಿನ ಬೇಕಿದ್ದರೂ ಧರ್ಮಸ್ಥಳಕ್ಕೆ ಹೋಗಿ ಸುರಕ್ಷಿತವಾಗಿ ಮರಳ ಬಲ್ಲೆ ಎಂಬ ವಿಶ್ವಾಸ ಆ ಕಾಲದ ಭಕ್ತ ಕುಟುಂಬಗಳಿಗೆ ಬಂದದ್ದಿದ್ದರೆ ಈ ಭಾಗದಲ್ಲಿ ಅದೆಲ್ಲದಕ್ಕೂ ಏಕೈಕ ಹೆಸರು ಬನ್ನಾಡಿ ಚಾಂಪ ಪೂಜಾರಿಯವರದ್ದು.

ಚಾಂಪ ಫುಜಾರಿ ಎಂದರೆ ತೆಂಕಣದ ಧರ್ಮದೊಡೆಯನ ಹೃದಯ ಮಂದಿರದಲ್ಲಿಟ್ಟು ಪೂಜಿಸಿದ ಪುಣ್ಯಾತ್ಮ. ಅವರಿಗೆ ಪೂಜ್ಯ ಖಾವಂದರೆಂದರೆ ರಾಮನ ಮುಂದೆ ಹನುಮ ಭಾಗಿದಂತಹ ನಿಷ್ಠೆ, ಅವರದ್ದು ನಿಷ್ಕಳಂಕ ಮನಸ್ಸು, ಪರಿಶುಭ್ರ ಚಾರಿತ್ರ್ಯ. ಬನ್ನಾಡಿ ಗರೋಡಿಯ ಪೂಜೆಯವರಾಗಿದ್ದ ಚಾಂಪ ಫೂಜಾರಿಯವರ ಪೂಜೆಗೆ, ಯಾವ ದೈವವೂ ನಲಿದು, ಒಲಿದು ಬರಬೇಕು, ಅಂಥಹ ತಾದಾತ್ಮ್ಯತೆ

ಚಾಂಪ ಪೂಜಾರಿ ತನ್ನ ವ್ಯಾನಿನ ಮೂಲಕ ಬನ್ನಾಡಿ, ಗಿಳಿಯಾರು,ಕಾವಡಿ, ವಡ್ಡರ್ಸೆ,ಕೋಟ, ಪಡುಕರೆ,ಉಪ್ಲಾಡಿ ಹೀಗೆ ಪುಟ್ಟ ಪುಟ್ಟ ಊರಿನ ದಾರಿಗಳೂ ಧರ್ಮಸ್ಥಳಕ್ಕೆ ಬೆಸೆಯುವ ಸೇತುವೆಯಾದವರು.ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಇಂದಿಗೂ ಚಾಂಪ ಪೂಜಾರಿಯವರ ಮೇಲೆ ಅಪಾರ ಪ್ರೀತಿ ನೆನೆಕೆ, ಖಾವಂದರ ಹೃದಯ ಗೆದ್ದವರು ಚಾಂಪ ಪೂಜಾರಿ. ಅವರ ನಗೆಯೇ ಒಂದು ಪ್ರೀತಿಯ ಕಡಲು ಈ ಪೋಟೋದಲ್ಲೆ ನೋಡಿ ಅವರ ಮುಖದಲ್ಲಿನ ತೇಜೋಪೂರ್ಣ ವರ್ಚಸ್ಸು.

ಚಾಂಪ ಪೂಜಾರಿ ಒಂದರ್ಥದಲ್ಲಿ ಅಕ್ಷರವಿಲ್ಲದ, ಜಗದ ಅರಿವಿಲ್ಲದ ಆ ಕಾಲದ ಮುಗ್ದ ಕುಟುಂಬದ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಮ್ಮ ಭಾಗದ ದ್ವಾರವೇ ಆಗಿದ್ದರು. ನಾಡಿದ್ದು ಅಭಿಮತ ಸಂಭ್ರಮಕ್ಕೆ ನೀವು ಬರುವುದಾದರೆ ’ಬನ್ನಾಡಿ ಚಾಂಪ ಪೂಜಾರಿ ಮಹಾದ್ವಾರದ ಮೂಲಕವೇ ಬರಬೇಕು. ಹೌದು, ಅಭಿಮತ ಸಂಭ್ರಮದ ಮಹಾದ್ವಾರಕ್ಕೆ ಚಾಂಪ ಪೂಜಾರಿಯವರ ಹೆಸರನ್ನ ಇರಿಸಲಿದ್ದೇವೆ. ಇದು ನಾವು ಅವರನ್ನ ಗೌರವದಿಂದ ನೆನೆಯುವ ಪರಿ. ಬರುತ್ತೀರಿ ತಾನೆ?

ಬನ್ನಿ ಗಿಳಿಯಾರಿಗೆ;ತೀರ ನಿಮ್ಮದೇ ಎನಿಸುವ ಊರಿಗೆ !

ಫೋಟೋ ಕೃಪೆ, ಅವರ ಮೊಮ್ಮಗ ಬಿಗ್ ಬಾಸ್ Dhanraj Cm ❤

Vasanth Giliyar


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »