TOP STORIES:

ಬಹುಮುಖ ಪ್ರತಿಭೆಯ ಪರಿಚಯ ಶ್ರೀಮತಿ ರಶ್ಮಿ ಸನಿಲ್


“ಪ್ರತಿಭೆ “ಎನ್ನುವುದು ಪ್ರತಿಯೊಂದು ಮನುಷ್ಯನಲ್ಲಿಯೂ ಅಡಕಗೊಂಡಿರುತ್ತದೆ. ಆದರೆ ಅದನ್ನು ಬೆಳೆಸುವ ಪ್ರಯತ್ನ ಕೆಲವರಲ್ಲಿ ಮಾತ್ರ ಇರುತ್ತದೆ.

ದೀಪದಿಂದ ಜ್ಯೋತಿಯು ಪಸರಿಸಿ ಎಲ್ಲೆಡೆ ಬೆಳಕನ್ನು ಬೀರುವಂತೆ ಒಬ್ಬ ವ್ಯಕ್ತಿಯು ತನ್ನ “ಪ್ರತಿಭೆ “ಎಂಬ ಬೆಳಕನ್ನು ಎಲ್ಲಾ ಕಡೆ ಪಸರಿಸಿದಾಗ ಮಾತ್ರ ಅವನೊಬ್ಬ “ಸಾಧನೆ “ಎಂಬ ಪಥದ ಕಡೆ ಮುನ್ನುಗ್ಗಲು ಸಾಧ್ಯ. ಏನಾದರೊಂದು ಸಾಧಿಸುವ ಛಲ ಇದ್ದವನಿಗೆ ಮೊದಲು ಗುರಿ ಇರಬೇಕು. ಆ ಗುರಿಯ ಕಡೆ ನಾವು ಕಣ್ಣಾಯಿಸಿದಾಗ ಮಾತ್ರ ಸಾಧಿಸುವ ಹಾದಿ ತಾನಾಗಿಯೇ ಗೋಚರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ತೆರೆಮರೆಯ ಹಿಂದೆ ತನ್ನೋಳಗೆಯೇ ಅಡಕಗೊಂಡಂತಹ “ಪ್ರತಿಭೆ “ಯನ್ನು ಒಂದೊಂದಾಗಿಯೇ ಹೊರ ಜಗತ್ತಿಗೆ ಪಸರಿಸಿ ತನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ತನ್ನ ಹೆಸರಿಗೆ ತಕ್ಕಂತೆ ಪ್ರಕಾಶಮಾನವಾಗಿ ಗುರುತಿಸಿಕೊಳ್ಳುತ್ತಿರುವ ಬಹುಮುಖ ಪ್ರತಿಭೆಯೇ ಇಂದು ನಾನು ಪರಿಚಯ ಮಾಡುತ್ತಿರುವ ದಿ. ಕೃಷ್ಣ ಕೋಟ್ಯಾನ್ ಮತ್ತು ನವೀನ ಕುಮಾರಿ ದಂಪತಿಗಳ ಮುದ್ದಿನ ಮಗಳು, ನಿತೇಶ್ ಉರ್ವ ಇವರ ಪತ್ನಿ ಬರಹಗಾರ್ತಿ ಶ್ರೀಮತಿ ರಶ್ಮಿ ಸನಿಲ್(ರಶ್ಮಿತಾ ಮಂಗಳೂರು).

ಸ್ಟೆಲ್ಲಾ ಮಾರಿಸ್ ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅನ್ನರ ಶಿಕ್ಷಣ ಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣ, ಪದವಿ ಶಿಕ್ಷಣವನ್ನು ಆಗ್ನೇಸ್ ಮತ್ತು ಎಮ್. ಕಾಮ್ ವಿಧ್ಯಾಭ್ಯಾಸವನ್ನು ಯೂನಿವರ್ಸಿಟಿ ಕೊಣಾಜೆಯಲ್ಲಿ ಮುಗಿಸಿದ ಇವರು ಪ್ರಸ್ತುತ ಇನ್ಫೋಸಿಸ್ ನಲ್ಲಿ ಸಹಾಯಕ ಲೆಕ್ಕ ಪರಿಶೋಧಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮತ್ತೆ ಶುರು ಆಯಿತು ಇವರ ಬಿಡುವಿಲ್ಲದ ಜೀವನ ಆದರೂ ಬರವಣಿಗೆಯಲ್ಲಿ ಆಸಕ್ತಿ ಕಡಿಮೆ ಆಗಲಿಲ್ಲ, ಇವರ ಬರವಣಿಗೆ ನೋಡಿ ಮೆಚ್ಚುಗೆ ಪಟ್ಟವರಿಗಿಂತ ಅಸೂಯೆ ಪಟ್ಟವರೇ ಜಾಸ್ತಿ ಆದರೂ ತನ್ನ ಹಠ ಬಿಡಲಿಲ್ಲ. ಟೀಕೆ ಮಾಡುವವರ ಎದುರು ಸಾಧಿಸಿ ತೋರಿಸುವ ನಿರ್ಧಾರ ತೆಗೆದುಕೊಂಡರು.

ಹೀಗೆ ತನ್ನಲ್ಲಿ ಅನೇಕ ಪ್ರತಿಭೆಗಳಿದ್ದರೂ ಅದನ್ನು ಹೊರ ಜಗತ್ತಿಗೆ ತೋರಿಸಲು ಮೊದಲು ಅವಕಾಶ ಪ್ರೋತ್ಸಾಹ ಬೆಂಬಲ ಯಾವುದೂ ಇರಲಿಲ್ಲ. ನಂತರದ ದಿನಗಳಲ್ಲಿ ತಾಯಿ, ಅಣ್ಣ, ಅತ್ತಿಗೆ ಪ್ರೋತ್ಸಾಹ ಬಿಟ್ಟರೆ ಇವರಿಗೆ ಬೆನ್ನೆಲುಬಾಗಿ ನಿಂತವರು ನವೀಶ್ ಅಣ್ಣ. ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಪೇಜ್ ನಲ್ಲಿ ಫಸ್ಟ್ ಆರ್ಟಿಕಲ್ ನವೀಶ್ ಎರ್ಮಾಳ್ ಇವರ ಸಹಾಯದಿಂದ ಪ್ರಕಟ ಆಯಿತು. ತದ ನಂತರ ಶುರುವಾದ ಇವರ ಬರಹಕ್ಕೆ ಇವರು ವಿರಾಮ ಕೊಡದೆ ಇಂದು ಸಾಧನೆ ಎಂಬ ಹಾದಿಯಲ್ಲಿ ಅಂಬೆಗಾಲನ್ನಿಟ್ಟು ಈ ಮಟ್ಟಕ್ಕೆ ಬರಹಗಾರ್ತಿಯಾಗಿ ಬೆಳೆದು ನಿಂತರು.

ಇವರ ಮೊದಲ ಕವನ ಯುವವಾಹಿನಿ ಸಮಾವೇಶದ ಬಗ್ಗೆ ಸಿಂಚನ ಪುಸ್ತಕದಲ್ಲಿ ಪ್ರಕಟವಾಯಿತು. ಆಗ ಯುವವಾಹಿನಿ ಕೊಲ್ಯ ಘಟಕದ ಆಗಿನ ಉಪಾಧ್ಯಕ್ಷ , ಖ್ಯಾತ ಬರಹಗಾರ ಲತಿಷ್ ಸಂಕೋಳಿಗೆಯವರು ಇವರ ಬರಹ ಕಂಡು ಉತ್ತಮ ಕವಯಿತ್ರಿ ಆಗುವ ಎಲ್ಲ ಲಕ್ಷಣಗಳು ಇವೆ ಎಂದು ಹೇಳಿದ್ದರು. ಹೀಗೆ ಇವರ ಬರಹಕ್ಕೆ ಹಾಗೂ ಇತರ ಪ್ರತಿಭೆಗಳಿಗೆ ಯುವವಾಹಿನಿ ಒಂದು ವೇದಿಕೆಯಾಯಿತು. ಹಾಗೆಯೇ ಇವರ ಬರಹಕ್ಕೆ ಸ್ಫೂರ್ತಿ ಎಂದರೆ ಅವರ ಅಣ್ಣ ರಕ್ಷಿತ್ ಕೃಷ್ಣ ಸನಿಲ್ ಅವರು. ಇವರೂ ಉತ್ತಮ ಬರಹಗಾರರು. ಹಾಗೆಯೇ ಅವರ ಅಮ್ಮ ಹಾಗೂ ಅತ್ತಿಗೆಯೂ ಇವರ ಬರಹ ನೋಡಿ ಪ್ರೋತ್ಸಾಹ ನೀಡಿದರು. ಜೀವನ್ ತೊಕ್ಕೊಟ್ಟು, ಪ್ರಶಾಂತ್ ಅಂಚನ್, ಆಶಿಕ್ ಗೋಪಾಲಕೃಷ್ಣ, ಸಂದೀಪ್, ಕೀರ್ತನ ಸನಿಲ್ ಹೀಗೆ ಇನ್ನೂ ಅನೇಕರು ಅವರ ಬರಹ ಕಂಡು ಬರವಣಿಗೆಗೆ ಪೂರ್ಣವಿರಾಮ ಕೊಡದಿರಿ ಅದು ಸದಾ ಹರಿಯುವ ನೀರಾಗಲಿ ಅಂತಹ ಅದ್ಭುತ ಬರಹಗಾರರು ನೀವು ಎಂದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು. ಹೀಗೆ ಅವರ ಬರಹ ನೋಡಿ ಇನ್ನೂ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಇತ್ತೀಚೆಗೆ ಬರೆಯಲು ಶುರು ಮಾಡಿದರೂ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಇವರ ಪಾಲಿಗೆ ದೊರಕಿದೆ. ಕಥಾಗುಚ್ಚದಲ್ಲಿ ಅಪೂರ್ಣ ಕಥೆ ಅತ್ಯುತ್ತಮವಾಗಿ ಪೂರ್ಣಗೊಳಿಸಿದ ಪ್ರಶಸ್ತಿ ಪತ್ರ, ಸಾಹಿತ್ಯ ದೀವಿಗೆ ಪ್ರಶಸ್ತಿ, ಸಾಹಿತ್ಯ ಕಣಜ ಪ್ರಶಸ್ತಿ, ಸಾಹಿತ್ಯ ಕಿರಣ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಕನ್ನಡದ ಚಿನ್ನ ಪ್ರಶಸ್ತಿ, ಕನ್ನಡ ಕಲಿ ಪ್ರಶಸ್ತಿ, ಸಾಹಿತ್ಯ ಸಂಪದ ಕರ್ನಾಟಕ, ಸಾಹಿತ್ಯ ಕುಸುಮ ವೇದಿಕೆಯ ಅಭಿನಂದನ ಪತ್ರ, ಯುಗಾದಿ ಬಳಗದ ಪ್ರಶಸ್ತಿ ಪತ್ರ, ಭಾವ ತರಂಗ ವೇದಿಕೆಯ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ, ಗಾಂಧಿ ಜಯಂತಿ ಪ್ರಯುಕ್ತ ನಡೆದ ಚಿತ್ರ ಕಾವ್ಯ ಸ್ಪರ್ಧೆಯಲ್ಲಿ ಅಭಿನಂದನ ಪತ್ರ, ಖಿದ್ಮಾ ಫೌಂಡೇಶನ್ ಕರ್ನಾಟಕದಿಂದ ಅಭಿನಂದನ ಪತ್ರ, ಸಿಹಿ ಕವನಗಳು ಮೃದು ಮನಸ್ಸುಗಳು ಇವರ ವತಿಯಿಂದ ಕನ್ನಡ ಕಸ್ತೂರಿ ಪ್ರಶಸ್ತಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ )ಕೇಂದ್ರ ಘಟಕ ಬೆಳ್ತಂಗಡಿ ಅಭಿನಂದನ ಪತ್ರ, ಕವಿ ಸಾಹಿತ್ಯ ಜೀವಾಳದಿಂದ ಅಭಿನಂದನ ಪತ್ರ, ಸಾಹಿತ್ಯ ಸಾರಥಿ, ಸಾಹಿತ್ಯ ಸಾಮ್ರಾಟ, ಗುರುಕುಲ ಪ್ರತಿಷ್ಠಾನದಲ್ಲಿ ಅಭಿನಂದನ ಪತ್ರ, ಕನ್ನಡ ಕವಿ ಗುಚ್ಛದಲ್ಲಿ ಅಭಿನಂದನ ಪತ್ರ, ಕವನಗಳ ತೊಟ್ಟಿಲು ವಿಭಾಗದಲ್ಲಿ ಅಭಿನಂದನ ಪತ್ರ, ಯುವ ವಾಹಿನಿ ಕೊಲ್ಯ ಘಟಕದಿಂದ ಅಭಿನಂದನ ಪತ್ರ, ಕರುನಾಡಿನ ಕಾಮಧೇನು ಪ್ರಶಸ್ತಿ, ಹೀಗೆ ಇನ್ನಿತರ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೇರಿವೆ. ಹೇಳಿದರೆ ಮುಗಿಯದು ಅಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಬಾಚಿಕೊಂಡ ಹೆಗ್ಗಳಿಕೆ ಇವರದ್ದು. ಮೂರು ಬಳಗದಲ್ಲಿ ನಿರ್ವಹಣೆ ವಹಿಸಿಕೊಂಡು ಉತ್ತಮ ತೀರ್ಪುಗಾರರಾಗಿ ಹಾಗೂ ವಿಮರ್ಶಕರಾಗಿ ಮಿಂಚಿ ತನ್ನ ಛಾಪನ್ನು ಮೂಡಿಸಿದ ಖ್ಯಾತಿ ಕೂಡ ಇವರದ್ದು.

ಇವರಿಗೆ ಕೇವಲ ಬರವಣಿಗೆ ಮಾತ್ರ ಆಸಕ್ತಿ ಅಲ್ಲ ಡ್ಯಾನ್ಸ್, ಸಿಂಗಿಂಗ್, ನಿರೂಪಣೆಯಲ್ಲಿಯೂ ತುಂಬಾನೇ ಆಸಕ್ತಿ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಇವರ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ವೃತ್ತಿ ರಂಗದಲ್ಲಿಯೂ ಹಲವಾರು ನೃತ್ಯ ಕಾರ್ಯಕ್ರಮ ಹಾಗೂ ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ. ಯುವವಾಹಿನಿಯಲ್ಲಿ ಸಕ್ರೀಯ ಸದಸ್ಯೆಯಾಗಿರುವ ಇವರು ಇತರರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಅವರನ್ನು ಹುರಿದುಂಬಿಸಿ ತಾನು ಬೆಳೆದು ಇತರರು ಬೆಳೆಯಲು ಸದಾ ಕ್ರಿಯಾಶೀಲರಾಗಿ ಬಳಗವನ್ನು ಒಗ್ಗೂಡಿಸಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಯುವವಾಹಿನಿ ಆಯೋಜಿಸಿದ ಯೂತ್ ಫೆಸ್ಟ್, ಡೆನ್ನಾನ ಡೆನ್ನಾನ, ಕ್ವಿಜ್ ಕಾಂಪಿಟೇಷನ್, ಕುಳೂರ್ ಯೂಥ್ ಫೆಸ್ಟ್ ಕಾಂಪಿಟೇಷನ್, ಬಿಲ್ಲವ ವೇದಿಕೆಯವರ ಸ್ಪರ್ಧೆಯಲ್ಲಿಯೂ ಭಾಗವಹಿಸಿದ ಹೆಗ್ಗಳಿಕೆ ಇವರದು.

ನಿರೂಪಣೆಯಲ್ಲಿಯೂ ಸೈ ಎನಿಸಿಕೊಂಡ ಇವರು ಸಣ್ಣ ಸಣ್ಣ ಕ್ಲಬ್ ಮತ್ತು ಫ್ಯಾಮಿಲಿ ಪ್ರೋಗ್ರಾಮ್ನಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೀಗೆಯೇ ಬಿಡುವಿಲ್ಲದ ಜೀವನದಲ್ಲಿ ಇವರ ಕಲೆಗೆ ಒಳ್ಳೆಯ ಪ್ರೋತ್ಸಾಹ ಸಿಗಲಿ ಇವರ ಕನಸುಗಳೆಲ್ಲಾ ನನಸಾಗಲಿ ತುಳುನಾಡಿನ ಒಬ್ಬ ಉತ್ತಮ ಬರಹಗಾರ್ತಿಯಾಗಿ ಬೆಳೆಯಲಿ ಎಂದು ಹಾರೈಸುವ……..

 

✍ ಪ್ರಶಾಂತ್ ಅಂಚನ್ ಮಸ್ಕತ್ತ್


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »