ಇಂದಿನ ಯುವ ಪೀಳಿಗೆ ಫೋಕಸ್ ಮಾಡುವುದು ಜಿಮ್ ಬಗ್ಗೆ. ಕಟ್ಟು ಮಸ್ತಾದ ಬಾಡಿಗಾಗಿ ಅದೆಷ್ಟೋ ಕಸರತ್ತು ಮಾಡುತ್ತಾರೆ. ಹೀಗೆ ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ ನಮ್ಮ ಸಂದೀಪ್ ಪೂಜಾರಿ
ಬಜ್ಪೆ ಯ ಕರಂಬರ್ ಗ್ರಾಮದ ರಮೇಶ್ ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಮಗ ಸಂದೀಪ್ ಪೂಜಾರಿ, ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾ ಭ್ಯಾಸ ವನ್ನು ಹಿರಿಯ ಪ್ರಾಥಮಿಕ ಸಂತ ಜೋಸೆಫ್ ಪಿ.ಯು. ಕಾಲೇಜು ಬಜ್ಪೆ ಇಲ್ಲಿ ಮಾಡಿ ನಂತರ ಪದವಿಯನ್ನು ಶ್ರೀ ದುರ್ಗಾ ಪರಮೇಶ್ವರಿ ಫಸ್ಟ್ ಗ್ರೇಡ್ ಕಾಲೇಜ್ ಕಟೀಲ್ ಇಲ್ಲಿ ಮಾಡಿ ಮುಗಿಸಿದರು. ಬಾಡಿ ಬಿಲ್ಡಿಂಗ್ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವ ಇವರು ಪರ್ಸನಲ್ ಟ್ರೈನರ್ ಆಗಿ ಹೊರದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರಿಗೆ ತರಬೇತಿಯನ್ನು ರವಿ ದೇವಾಡಿಗ ಮುಕ್ಕ ನೀಡುತ್ತಿದ್ದರು
ಬಡತನದಲ್ಲಿಯೇ ಬೆಳೆದು ಮೇಲೆ ಬಂದ ಇವರಿಗೆ ತಂದೆ ತಾಯಿ ಇಬ್ಬರು ಸಹೋದರಿಯರು ಅಲ್ಲದೆ ಬೇರೆ ಯಾರ ಪ್ರೋತ್ಸಾಹ ಬೆಂಬಲ ಸಿಗಲಿಲ್ಲಿ.ಸಾಧಿಸುವ ಛಲ ಒಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುದಕ್ಕೆ ಇವರೇ ಸಾಕ್ಷಿ.
“ಜಿಮ್” ಕಸ್ಟಮರ್ ಗೆ ಟೀಚ್ ಮಾಡಿ ಕಾಂಫಿಟೇಷನ್ಗೆ ಪ್ರಿಪೇರ್ ಮಾಡುವುದು ಇವರ ಕನಸು. ಎರಡು ಮೂರು ಕಾಂಫಿಟೇಷನಲ್ಲಿ ಭಾಗವಹಿಸಿದ ಇವರಿಗೆ ಜಾಸ್ತಿ ಯಾಗಿ ಸರ್ಟಿಫೈ ಡ್ ಪರ್ಸನಲ್ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸುವ ಆಸೆ . ಸರ್ಟಿಫಿಕೇಟೆಡ್ ಪರ್ಸನಲ್ ಟ್ರೈನಿಂಗ್ ಮುಗಿಸಿದ ಇವರು ಇಲ್ಲಿಗಿಂತ ಹೊರದೇಶ( ಅಬ್ರಾಡ್) ದಲ್ಲಿಯೇ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ
ಇಷ್ಟು ಮಾತ್ರ ಅಲ್ಲದೆ ಇವರು ಒಬ್ಬ ನಿಸ್ವಾರ್ಥ ಸಮಾಜ ಸೇವಕ ಬಡ ಜನರಿಗೆ, ಆಶ್ರಮ ಹೀಗೆ ಅನೇಕ ಕಡೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಅಲ್ಲದೆ 32ನೇ ಬಾರಿ ರಕ್ತ ದಾನ ಮಾಡಿದ ಯುವ ಸಮಾಜ ಸೇವಕರು ಹೌದು.
ತನ್ನದೇ ಆದ ತರಬೇತಿ ಸೆಂಟರ್ ನ್ನು ಇಟ್ಟು ಇಂದಿನ ಯುವ ಪೀಳಿಗೆಗೆ ಉತ್ತಮ ರೀತಿಯ ತರಬೇತಿ ಕೊಟ್ಟು ಸ್ಪರ್ಧೆ ಗೆ ತಯಾರಿ ಮಾಡುವ ಇವರ ಬಹು ದೊಡ್ಡ ಕನಸು ನನಸಾಗಲಿ ಹಾಗೆಯೇ ಇವರು ನಂಬಿರುವ ದೈವದೇವರುಗಳ ಅನುಗ್ರಹ ಹಾಗೂ ಕಟೀಲು ಅಮ್ಮನ ಅನುಗ್ರಹ ಸದಾ ಇವರ ಮತ್ತು ಇವರ ಕುಟುಂಬದ ಮೇಲಿರಲಿ ಇನ್ನಷ್ಟು ಸೇವೆ ಮಾಡಲು ಶಕ್ತಿ ಕೊಡಲಿ ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುವ
✍️ ನಮ್ಮ ಬಿರ್ವೆರ್ ಉಡುಪಿ