ಬಿರುವೆರ್ ಕುಡ್ಲ, ಚಿಕ್ಕಮಂಗಳೂರು ಘಟಕದ ನಿಯೋಜಿತ ಪ್ರಮುಖರು ಹಾಗೂ ಸದಸ್ಯರೆಲ್ಲರೂ ಸೇರಿ ಇಂದು *ಕರ್ನಾಟಕ ಸರ್ಕಾರದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ* ಇವರನ್ನು ಚಿಕ್ಕಮಂಗಳೂರಿನಲ್ಲಿ ಭೇಟಿಯಾಗಿ, ಮಂಗಳೂರು ಲೇಡಿಹಿಲ್ ವೃತ್ತದ ಬದಲು *ನಾರಾಯಣ ಗುರು ವೃತ್ತವನ್ನಾಗಿ ಮಾಡಬೇಕೆಂದು* ಮನವಿ ಸಲ್ಲಿಸಲಾಯಿತು.
ಭೇಟಿಯ ಸಂದರ್ಭದಲ್ಲಿ ಸಂತೋಷ್ ಕೋಟ್ಯಾನ್, ಶೇಖರ್ ಮಲ್ಲಂದೂರ್, ಪ್ರವೀಣ್, ಮಿಥುನ್ ಪೂಜಾರಿ, ಲಕ್ಷ್ಮಣ್, ಪ್ರದೀಪ್, ಶಯನ್, ಯೋಗೀಶ್, ಸಂತೋಷ್ ಮತ್ತಿತರರು ಭಾಗಿಯಾಗಿದ್ದರು.