4 ವರ್ಷಗಳನ್ನು ಪೂರೈಸಿ 5 ನೇ ವರ್ಷದ ಹೊಸ್ತಿಲಲ್ಲಿರುವ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ವಂದನ 58ನೇ ಸೇವಾ ಯೋಜನೆ
ಬಜಪೆ ಕಿನ್ನಿಪದವು ನಿವಾಸಿ ಶ್ರೀಮತಿ ದೇವಕಿ ಇವರ ಪತಿಗೆ ವೈದ್ಯಕೀಯ ನೆರವು
ದಿನಾಂಕ 13 ಮೇ 2021 ನೇ ಗುರುವಾರ ಶ್ರೀಮತಿ ದೇವಕಿ ಅವರ ಮನೆಗೆ ತೆರಳಿ ಅವರ ಪತಿಗೆ ವೈದ್ಯಕೀಯ ನೆರವು ನೀಡಲಾಯಿತು. ಇವರ ಪತಿ ಕೆಲವು ದಿನಗಳಿಂದ ಪ್ಯಾರಲಿಸಿಸ್ ಗೆ ತುತ್ತಾಗಿ ತಮ್ಮ ವೃತ್ತಿಯಾದ ಆಟೋರಿಕ್ಷಾ ಚಾಲನೆಯನ್ನು ಇದರ ಕಾರಣದಿಂದಬಿಡಬೇಕಾಯಿತು. ಕುಟುಂಬದ ಆಧಾರ ಸ್ತಂಭವಾಗಿದ್ದ ಇವರು ಈಗ ಮನೆಯಲ್ಲಿ ಇರುವ ಕಾರಣ ಇವರ ಮನೆಯ ಆರ್ಥಿಕ ಸ್ಥಿತಿತುಂಬಾ ಗಂಭೀರವಾಗಿದ್ದು ಇವರ ಪತ್ನಿ ದೇವಕಿ ಅವರು ನಮ್ಮ ಘಟಕಕ್ಕೆ ಮನವಿಯನ್ನು ಮಾಡಿದರು ಇದನ್ನು ಗಮನಿಸಿದ ಬಿರುವೆರ್ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸದಸ್ಯರು ಘಟಕಕ್ಕೆ ನಾಲ್ಕನೇ ವರ್ಷದ ದಿನವಾದ ಇಂದು ಅವರಿಗೆ ಸಹಾಯ ಹಸ್ತ ನೀಡಲುಮುಂದಾಗಿ ಅವರ ಮನೆಗೆ ತೆರಳಿ ಸಹಾಯ ಧನ ನೀಡಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಉಪಾಧ್ಯಕ್ಷರಾದ ಶ್ರೀ ದಿನೇಶ್ ಪೂಜಾರಿ ಹಾಗೂಶ್ರೀ ಚಂದ್ರಪೂಜಾರಿ ಪೇರಾರ, ಪ್ರಧಾನ ಕಾರ್ಯದರ್ಶಿಯಾದ ಸೂರಜ್ ಪೂಜಾರಿ ಎಕ್ಕಾರು, ಕೆಂಜಾರು ಕಾನಾ ಸಂಚಾಲಕರಾದಅಖಿಲೇಶ್ ಅಮೀನ್, ಸದಸ್ಯರಾದ ಮನೀಶ್ ಹಾಗೂ ಸ್ಥಳೀಯರಾದ ಶ್ರೀ ಲೋಕೇಶ್ ಉಪಸ್ಥಿತರಿದ್ದರು.