ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಮೂಲಕ ಅಸಹಾಯಕರ ಹಸಿವನ್ನು ನೀಗಿಸುವ ಸಲುವಾಗಿ ಮರೋಡಿಯ ಹೊಸಮನೆ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು ಈ ಗದ್ದೆಯ ವೀಕ್ಷಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಇವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಇವರು, ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿ ರೈತನೆ ದೇಶದ ಬೆನ್ನೆಲುಬು. ಕೊರೊನದ ಮಹಾಮಾರಿಯ ನಡುವೆಯೂ ಬೆದ್ರ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಕಠಿಣ ಪರಿಶ್ರಮದಿಂದ ಸುಮಾರು 4 ಎಕ್ರೆ ಹಡಿಲು ಇದ್ದ ಗದ್ದೆಯನ್ನು ಗೇಣಿಗೆ ಪಡೆದು ಯುವಕರಲ್ಲೂ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದು ನಿಜಕ್ಕೂ ಸ್ಲಾಘನೀಯ.ಈ ಕಾರ್ಯದ ಉದ್ದೇಶ ಅಸಹಾಯಕ ಕುಟುಂಬಗಳ ಹಸಿವನ್ನು ನೀಗಿಸುವ ಸಲುವಾಗಿ ಅಕ್ಕಿ ಯನ್ನು ದಾನ ರೂಪದಲ್ಲಿ ನೀಡುವುದರ ಜೊತೆಗೆ ಬೈ ಹುಲ್ಲನ್ನು ಗೋಶಾಲೆಗಳಿಗೆ ನೀಡುವುದಾಗಿರುತ್ತದೆ, ಇಂತಹ ಉದ್ದೇಶವನ್ನಿಟ್ಟುಕೊಂಡು ಮಾಡಿದಂತ ಕಾರ್ಯಕ್ಕೆ ಯಶಸ್ಸು ಸಿಗಲಿ ಮತ್ತು ಜಿಲ್ಲೆಯ ಅನೇಕ ಯುವ ಸಂಘಟನೆಗಳು ಇಂತಹ ಕೃಷಿ ಕಾರ್ಯಗಳ ಕಡೆಗೆ ವಿಶೇಷವಾಗಿ ಗಮನ ಹರಿಸಿ ಕಾರ್ಯನಿರ್ವಹಿಸುವಂತಾಗಲಿ, ಹಾಗೂ ಬೆದ್ರ ಘಟಕದ ಈ ಕಾರ್ಯಕ್ಕೆ ಭೂಮಿತಾಯಿಯ ಅನುಗ್ರಹದಿಂದ ನಿರೀಕ್ಷೆಗಿಂತಲೂ ಹೆಚ್ಚಿನ ಫಲವನ್ನು ನೀಡಲಿ ಎಂದು ಹರಸಿದರು.
ಈ ಸಂಧರ್ಭದಲ್ಲಿ ಗದ್ದೆಯ ಯಜಮಾನರಾದ ಚಂದಪ್ಪ ಪೂಜಾರಿ, ಬಿರುವೆರ್ ಕುಡ್ಲ ಬೆದ್ರ ಘಟಕದ ಅಧ್ಯಕ್ಷ ರಾಜ್ ಪವಿ ಬಿಲ್ಲವ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಜೊತೆಗಿದ್ದರು.