TOP STORIES:

” ಬಿರುವೆರ್ ಕುಡ್ಲ ” ಸಂಘಟನೆ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ: ಶಾಸಕ ವೇದವ್ಯಾಸ್ ಕಾಮತ್


ಮಂಗಳೂರು ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ” ಸ್ಪಂದನ ಯೋಜನೆ” ವತಿಯಿಂದ ಅಶಕ್ತ ಮೂರು ಕುಟುಂಬಗಳಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಹಾಯ ಧನ ವಿತರಣಾ ಕಾರ್ಯಕ್ರಮ ಮಂಗಳೂರಿನ ಕುದ್ರೋಳಿ ಗೋಕರ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು. ಜಿಲ್ಲೆಯ ಜನತೆಗೆ ಬಿರವೆರ್ ಕುಡ್ಲ ಸಂಘಟನೆಯ ಸೇವೆ ಬಹು ದೊಡ್ಡ ಕೊಡುಗೆ. ಈ ಸಂಘಟನೆಯ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಈ ಸಂಘ ಕಳೆದ ಹಲವು ವರ್ಷದ ಅವಧಿಯಲ್ಲಿ ಒಂದುವರೆ ಕೋಟಿಗೂ ಅಧಿಕ ಮೊತ್ತದ ಸಹಾಯ ಅಸ್ತ ನೀಡುತ್ತಿದ್ದು ಶ್ಲಾಘನೀಯ ಕಾರ್ಯ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಘಟನೆಯಿಂದಾಗಲಿ ಎಂದವರು ಹೇಳಿದರು.

ಕಳೆದ 6 ವರ್ಷಗಳಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷಕ್ಕೂ ಮಿಕ್ಕಿ ಧನ ಸಹಾಯ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಹಸ್ತಾಂತರಗೊಂಡಿದೆ. ನಾಗುರಿ ಮಜಾಲ್ ನಿವಾಸಿ ಲೋಕೇಶ್ ಅವರಿಗೆ ಸೊಂಟದ ಮೂಳೆ ಮುರಿತ ಹಾಗೂ ಒಂದು ಕಾಲು ಕಳೆದುಕೊಂಡವರಿಗೆ 50 ಸಾವಿರ ಸಹಾಯ ಹಸ್ತ.

ಬಜಾಲ್ ನಿವಾಸಿ ಪುರಂದರ ಅವರು ಕಿಡ್ನಿ ಮೂತ್ರ ಪಿಂಡ ವೈಫಲ್ಯ ಎರಡೂ ಕಾಲು ಕಳೆದುಕೊಂಡಿರುತ್ತಾರೆ ಇವರಿಗೆ 50 ಸಾವಿರದ ಸಹಾಯ ಹಸ್ತ.

ಪಿಲಿಕುಳ ಎದುರು ಪದವು ನಿವಾಸಿ ಬದ್ರುದ್ದೀನ್ ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ 50 ಸಾವಿರ ಧನ ಸಹಾಯ.

ಈ ಸಂದರ್ಭದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ .ವೈ ಭರತ್ ಶೆಟ್ಟಿ, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿ ರಾಮ್,ಮೂಡ ಅಧ್ಯಕ್ಷ ರವಿ ಶಂಕರ್ ಮಿಜಾರ್,ರವೀಂದ್ರ ನಿಕಮ್,ಲತೀಶ್ ಬಲ್ಲಾಳ್ ಭಾಗ್,ಬಾಬಾ ಅಲಂಕಾರ್,ಸೂರಜ್ ಕಲ್ಯ,ಲಿಖಿತ್ ಕೋಟ್ಯಾನ್,ಲೋಹಿತ್ ಗಟ್ಟಿ,ರೆನಿತ್ ರಾಜ್ ಅಶೋಕ್ ನಗರ,ಮನೋಜ್ ಶೆಟ್ಟಿ,ರಾಕೇಶ್ ಸಾಲಿಯಾನ್,ಅಮಿತ್ ರಾಜ್,ರಾಮ್ ಎಕ್ಕೂರು,ವಾಝಿ ಪದವಿನಂಗಡಿ,ಅಶ್ರಫ್ ಆಲಿ ಕಾರ್ಕಳ,ದಿನಿಲ್ ಬಲ್ಲಾಳ್ ಭಾಗ್,ಸುರೇಶ್ ಬಲ್ಲಾಳ್ ಭಾಗ್,ರೋಷನ್ ಬಲ್ಲಾಳ್ ಭಾಗ್,ಕಿಶೋರ್ ಬಾಬು ಕೋಡಿಕಲ್,ಪ್ರಾಣೇಶ್ ಬಂಗೇರ,ಕಿರಣ್ ಉರ್ವ,ಯಶ್ವಿನ್ ಪೂಜಾರಿ,ರಕ್ಷಿತ್ ಮೂಲ್ಕಿ, ಮುಂತಾದ ಪ್ರಾಮುಖ ಸದಸ್ಯರು ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »