ಸಮಾಜ ಸೇವಕರು, ಕೊಡುಗೈ ಧಾನಿಗಳೂ, ಬಿಲ್ಲವಾಸ್ ದುಬೈ ಯ ಮಾಜಿ ಅಧ್ಯಕ್ಷರು, ಗೆಜ್ಜೆಗಿರಿ ಕ್ಷೇತ್ರದ ಪೋಷಕರೂ ಆದಶ್ರೀಯುತ ಸತೀಶ್ ಪೂಜಾರಿ ಬೆಳಪು, ದುಬೈ ಅವರು ಇಂದು ಕುಟುಂಬಸಮೇತರಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ ಕ್ಷೇತ್ರದಶಕ್ತಿಗಳ ದರ್ಶನ ಪಡೆದು ಅನ್ನ ಪ್ರಸಾದವನ್ನು ಸ್ವೀಕರಿಸಿದರು.ಸತ್ಯಧರ್ಮ ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಯುತರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ನಂತರ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ನೂತನ ಯಕ್ಷಗಾನ ಮೇಳದಕರಪತ್ರವನ್ನು ಕ್ಷೇತ್ರಾಡಳಿತ ಸಮಿತಿಯ ಪದಾಧಿಕಾರಿಗಳು ಶ್ರೀಯುತರಿಗೆ ಹಸ್ತಾಂತರಿಸಿದರು.
ಕ್ಷೇತ್ರದ ಭಕ್ತಿಯ ಶ್ರದ್ಧಾ ಕೇಂದ್ರ ನಿರ್ಮಾಣದ ಬಗ್ಗೆ ಹಾಗು ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಅಭಿವೃದ್ಧಿಯ ಕೆಲಸ ಕಾರ್ಯಗಳುಮತ್ತು ಕ್ಷೇತ್ರದ ನೂತನ ಯಕ್ಷಗಾನ ಮೇಳದ ಬಗ್ಗೆ, ಕ್ಷೇತ್ರವನ್ನು ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಕ್ಷೇತ್ರದ ಸಾನಿಧ್ಯ ಶಕ್ತಿಗಳ ಕಾರಣೀಕದ ಮಹತ್ವವನ್ನು ತಾನು ಕೊಂಡಾಡಿ ಭಕ್ತಿ ಪರಮಷರಾಗಿ ಕ್ಷೇತ್ರದ ಮುಂದಿನ ಅಭಿವೃದ್ಧಿ ಕೆಲಸಕಾರ್ಯಗಳಿಗೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ತನ್ನವರನ್ನು ಪ್ರೇರೇಪಿಸುವುದರ ಜೊತೆಗೆ ಇದು ಸಮಾಜದಒಂದು ಪ್ರಬಲ ಶಕ್ತಿ ಕೇಂದ್ರವಾಗಬೇಕು ಎಂದು ಇಂಗಿತ ವ್ಯಕ್ತಪಡಿಸಿದ ಶ್ರೀಯುತರು ಎಲ್ಲರನ್ನು ಒಗ್ಗೂಡಿಸುವ ಭರವಸೆಯನ್ನುನೀಡಿದರು.
ಶ್ರೀ ಗೆಜ್ಜೆಗಿರಿ ನೂತನ ಯಕ್ಷಗಾನ ಮೇಳದ ರಂಗಸ್ಥಳದ ವೆಚ್ಚವನ್ನು ಮಾತೆಯ ಗೆಜ್ಜೆ ಸೇವೆಗೆ ಸೇವಾ ರೂಪದಲ್ಲಿ ಸಮರ್ಪಿಸಿದರು. ದುಬೈಯ ತಮ್ಮ ಮಿತ್ರರು ಮತ್ತು ಸಮಾಜ ಭಾಂಧವರನ್ನು ಪ್ರೇರೇಪಿಸಿ ಇನ್ನಷ್ಟು ಹೆಚ್ಚಿನ ಮೊತ್ತವನ್ನು ಗೆಜ್ಜೆಗಿರಿಯ ನೂತನ ಯಕ್ಷಗಾನಮೇಳಕ್ಕೆ ಮತ್ತು ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕರಿಸುವುದಾಗಿ ಭರವಸೆಯನ್ನು ನೀಡಿದರು.
ಈ ಹಿಂದೆಯೂ ಕ್ಷೇತ್ರದ ಪುನರುತ್ಥಾನದ ಯೋಜನೆಗೆ ಬಿಲ್ಲವಾಸ್ ದುಬೈ ಕೂಟದ ವತಿಯಿಂದ ದೊಡ್ಡ ಮೊತ್ತವನ್ನು ಸೇವಾರೂಪದಲ್ಲಿ ನೀಡಿ ಸಹಕರಿಸಿರುವ ಸೇವೆಯನ್ನು ಸ್ಮರಿಸುತ್ತ ಶ್ರೀಯುತರ ಜೀವನದ ಮುಂದಿನ ದಿನಗಳು ಸಂತೋಷದಾಯಕವಾಗಿರಲಿ, ವ್ಯಾಪಾರ–ವ್ಯವಹಾರದಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯಲಿ ಇವರಿಗೆ ಮತ್ತು ಇವರ ಕುಟುಂಬಕ್ಕೆ ಕ್ಷೇತ್ರದ ಸರ್ವ ಶಕ್ತಿಗಳುನೆಮ್ಮದಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕ್ಷೇತ್ರದ ವತಿಯಿಂದ ನಮ್ಮ ಹಾರೈಕೆಗಳು.
ಶ್ರೀ ದೇಯಿಬೈದೆತಿ ಕೋಟಿ–ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿ.