ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇ ಗುರುಜಯಂತಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿಕುಶಾಲ್ ಕರ್ಕೇರ ಅವರು ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಶೀಬಾ ಸುಧೀರ್ ಉಳ್ಳಾಲ್, ಕೋರ್ ಸಮಿತಿ ಸದಸ್ಯರಾದಭಾಸ್ಕರ್ ಕೊಟ್ಯಾನ್, ಲೀಲಾದರ್ ಗುಜರನ್, ಸತೀಶ್ ಕುಮಾರ್ ಬಜಾಲ್, ಭಾಸ್ಕರ್ ಪೂಜಾರಿ, ಪ್ರಕಾಶ್ ಅಮೀನ್, ಸುಂದರ್ದಾಸ್ ಪೂಜಾರಿ, ಸತೀಶ್ ಅಮೀನ್ ,ಚಂದ್ರಶೇಕರ್ ಪೂಜಾರಿ , ಚೇತನ ಸದಾಶಿವ ಪೂಜಾರಿ,ರಕ್ಷಿತಾ ಜಗದೀಶ್, ಸುಮಿತ್ರಾ ಭಾಸ್ಕರ್ಇವರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಯುತ ಸದಾಶಿವ ಪೂಜಾರಿ, ಶೇಖರ್ ಕೋಟ್ಯಾನ್, ಉದಯ ಸನಿಲ್, ಚಂದ್ರಕಾಂತ್ಅಮೀನ್, ವಿಶ್ವನಾಥ್ ಸುವರ್ಣ , ಇವರುಗಳನ್ನು ವೇದಿಕೆಗೆ ಆಹ್ವಾನಿಸಿದರು.
ಅತಿಥಿಗಳು ದೀಪ ಬೆಳಗಿಸುವ ಮೂಲಕ ಹಾಗೂ ರಂಜಿತ್ ಕಕ್ಕಿಂಜಿ (ರಂಜು ತುಳು ರಂಗ ಪ್ರೇಮಿ) ವಿಘ್ನವಿನಾಶಕ ಶ್ಲೋಕದೂಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದಾನಂತರ ದಮ್ಮಾಮ್–ಅಲ್ಖೋಬರ್ , ಜುಬೈಲ್ , ರಿಯಾದ್, ಅಭಾ. ಕಲಾವಿದರಿಂದ ನೃತ್ಯ, ಹಾಡುಗಳಲ್ಲದೆ. ವಿಭಿನ್ನ ರೀತಿಯ ಮನೋರಂಜನಾ
ಕಾರ್ಯಕ್ರಮಗಳು ಪ್ರೇಕ್ಷಕರಮನಸೂರೆಗೊಂಡವು. ಹಾಗೂ
2021-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ದಮ್ಮಾಮ್(MASA) ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ಪ್ರಕಟಿಸಿದರು.ಅಧ್ಯಕ್ಷರು ಶ್ರೀಯುತಲೀಲಾದರ್ ಗುಜರನ್ , ಹಾಗೂ ಗೌರವ ಅಧ್ಯಕ್ಷರು , ಕೆ.ಸಿ.ಭಾಸ್ಕರ್ , ಉಪಾಧ್ಯಕ್ಷರುಗಳು– ಚೇತನಾ ಸದಾಶಿವ ಪೂಜಾರಿ, ರಕ್ಷಿತಾಜಗದೀಶ್, ಪ್ರಧಾನ ಕಾರ್ಯದರ್ಶೀ ಪ್ರಕಾಶ್ ಅಮೀನ್ , ಜೊತೆ ಸಹಕಾರ್ಯ ದರ್ಶಿ ಸುಂದರ್ ದಾಸ್ ಪೂಜಾರಿ, ಖಜಾಂಚಿ : ಚಂದ್ರಶೇಖರ್ ಹಾಗೂ ಉಪ ಖಜಾಂಚಿ ಸುಮಿತ್ರ ಭಾಸ್ಕರ್ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾದರು.
ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ, ಅಶಕ್ತರಿಗೆ ಸಹಾಯಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತ ದೇಹವನ್ನು ಎಲ್ಲಾಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಾಲ್ವರುಮಹಾನೀಯರಾದ ಶ್ರೀ ಸತೀಶ್ ಕುಮಾರ್ ಬಜಾಲ್ , ಸತೀಶ್ ಅಮೀನ್ , ಸುಂದರ್ ದಾಸ್ ಪೂಜಾರಿ, ಸುದೀರ್ ಕೊಟ್ಯಾನ್ , ಇವರೆಲ್ಲರಿಗೆ “ಆಪತ್ಭಾಂದವರು “ ಎಂಬ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಮೀನ್ , ಅವರನ್ನುರೀಯಾದ್ ಬಿಲ್ಲವಾಸ್ ನಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿಸನ್ಮಾನಿಸಲಾಯಿತು ಮತ್ತು 60 ವರ್ಷ ಸಂಪೂರ್ಣ ಗೊಂಡ ಸಂಘದ ಕ್ರೀಯಾಶೀಲಾ ಹಿರಿಯರಾದ ಶ್ರೀಕಾಂತ್ ಅಮೀನ್, ಹೆಜಮಾಡಿರರಿಗೆ
ಇವರಿಗೂ. ಸಂಘದ ವತಿಯಿದ ಸನ್ಮಾನಿಸಿ ಗೌರವಿಸಲಾಯಿತು.ಸಂಪೂರ್ಣ ಕಾರ್ಯಕ್ರಮವನ್ನು ಪ್ರವೀಣ್ ಪೂಜಾರಿ, ಕುಂಜತಬೈಲ್ಅವರು ನಿರ್ವಹಿಸಿದರು.