ವಿಶ್ವ ಬಿಲ್ಲವರು ತಮ್ಮ ಸಮರ್ಪಣಾ ಭಾವದಿಂದ ಕ್ಷೇತ್ರಾಡಳಿತ ಸಮಿತಿಯ ನೇತೃತ್ವದಲ್ಲಿ ನಿರ್ಮಿಸಿರುವ ದೇಯಿ ಬೈದೆತಿ – ಕೋಟಿಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಎರಡನೇ ವರ್ಷದ ಜಾತ್ರಾ ಮಹೋತ್ಸವವು ಮಾರ್ಚ್ 3 ರಿಂದ ಮಾರ್ಚ್ 7 ರ ವರಗೆಜರುಗಲಿದೆ.
ಇದಕ್ಕೆ ದೇಶ ವಿದೇಶಗಳಲ್ಲಿ ನೆಲೆಸಿರುವ ಸಮಾಜ ಭಾಂಧವರು ಮತ್ತು ಗೆಜ್ಜೆಗಿರಿ ಕ್ಷೇತ್ರದ ಭಕ್ತರಿಂದ ಉತ್ತಮ ಸ್ಪಂದನೆಯುವ್ಯಕ್ತವಾಗಿದೆ.
ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯ, ರಿಯಾದ್. ಕೂಟದ ಬಿಲ್ಲವರು ತಮ್ಮ ಸಮರ್ಪಣಾ ಭಾವದಿಂದ ಶ್ರೀ ಕ್ಷೇತ್ರದ ಜಾತ್ರಾಮಹೋತ್ಸವದ ಅನ್ನಸಂತರ್ಪಣೆಗೆ ಸುಮಾರು 25 ಸಾವಿರಕ್ಕೂ ಅಧಿಕ ಮೊತ್ತವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಈ ಹಿಂದೆಯೂ ಕ್ಷೇತ್ರದ ಪುನರುತ್ಥಾನದ ಸಂದರ್ಭದಲ್ಲಿ ಮಾತೆ ದೇಯಿ ಬೈದೆತಿ ಮಹಾ ಸಮಾಧಿ ಇದರ ಸುತ್ತು ಗ್ಯಾಲರಿಯಸಂಪೂರ್ಣ ವೆಚ್ಚದೊಂದಿಗೆ ನಿರ್ಮಿಸಲು ಕ್ಷೇತ್ರಕ್ಕೆ ಸಹಕರಿಸಿರುವ ಸೌದಿ ಅರೇಬಿಯದ ಬಿಲ್ಲವರ ಸೇವೆಯನ್ನು ಸ್ಮರಿಸುತ್ತ….!
ತಮ್ಮ ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರಿಗೆ ಕ್ಷೇತ್ರದ ಸರ್ವ ಶಕ್ತಿಗಳು, ಮಾತೆ ದೇಯಿ ಬೈದೆತಿ, ಕೋಟಿ–ಚೆನ್ನಯರು ಅನುಗ್ರಹಿಸಲಿ ಎಂದು ಪ್ರಾರ್ಥಿಸುವ..
ದೇಯಿ ಬೈದ್ಯೆತಿ–ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ನೇಮೋತ್ಸವ ಸಮಿತಿ. ಗೆಜ್ಜೆಗಿರಿ ನಂದನ ಬಿತ್ತ್‘ಲ್, ಪುತ್ತೂರು.
23-2-2022