TOP STORIES:

ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167ನೇ ಗುರು ಜಯಂತಿ ಆಚರಣೆ


ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇ ಗುರುಜಯಂತಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.


ಕಾರ್ಯಕ್ರಮದ ಪ್ರಾರಂಭದಲ್ಲಿಕುಶಾಲ್ ಕರ್ಕೇರ ಅವರು ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಶೀಬಾ ಸುಧೀರ್ ಉಳ್ಳಾಲ್, ಕೋರ್ ಸಮಿತಿ ಸದಸ್ಯರಾದಭಾಸ್ಕರ್ ಕೊಟ್ಯಾನ್, ಲೀಲಾದರ್ ಗುಜರನ್, ಸತೀಶ್ ಕುಮಾರ್ ಬಜಾಲ್, ಭಾಸ್ಕರ್ ಪೂಜಾರಿ, ಪ್ರಕಾಶ್ ಅಮೀನ್, ಸುಂದರ್ದಾಸ್ ಪೂಜಾರಿ, ಸತೀಶ್ ಅಮೀನ್ ,ಚಂದ್ರಶೇಕರ್ ಪೂಜಾರಿ , ಚೇತನ ಸದಾಶಿವ ಪೂಜಾರಿ,ರಕ್ಷಿತಾ ಜಗದೀಶ್, ಸುಮಿತ್ರಾ ಭಾಸ್ಕರ್ಇವರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಯುತ ಸದಾಶಿವ ಪೂಜಾರಿ, ಶೇಖರ್ ಕೋಟ್ಯಾನ್, ಉದಯ ಸನಿಲ್, ಚಂದ್ರಕಾಂತ್ಅಮೀನ್, ವಿಶ್ವನಾಥ್ ಸುವರ್ಣ , ಇವರುಗಳನ್ನು ವೇದಿಕೆಗೆ ಆಹ್ವಾನಿಸಿದರು.

ಅತಿಥಿಗಳು ದೀಪ ಬೆಳಗಿಸುವ ಮೂಲಕ ಹಾಗೂ ರಂಜಿತ್ ಕಕ್ಕಿಂಜಿ (ರಂಜು ತುಳು ರಂಗ ಪ್ರೇಮಿ) ವಿಘ್ನವಿನಾಶಕ ಶ್ಲೋಕದೂಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದಾನಂತರ ದಮ್ಮಾಮ್ಅಲ್ಖೋಬರ್ , ಜುಬೈಲ್ , ರಿಯಾದ್, ಅಭಾ. ಕಲಾವಿದರಿಂದ ನೃತ್ಯ, ಹಾಡುಗಳಲ್ಲದೆ. ವಿಭಿನ್ನ ರೀತಿಯ ಮನೋರಂಜನಾ 

ಕಾರ್ಯಕ್ರಮಗಳು ಪ್ರೇಕ್ಷಕರಮನಸೂರೆಗೊಂಡವು. ಹಾಗೂ

2021-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ದಮ್ಮಾಮ್(MASA) ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ಪ್ರಕಟಿಸಿದರು.ಅಧ್ಯಕ್ಷರು ಶ್ರೀಯುತಲೀಲಾದರ್ ಗುಜರನ್ , ಹಾಗೂ ಗೌರವ ಅಧ್ಯಕ್ಷರು , ಕೆ.ಸಿ.ಭಾಸ್ಕರ್ , ಉಪಾಧ್ಯಕ್ಷರುಗಳುಚೇತನಾ ಸದಾಶಿವ ಪೂಜಾರಿ, ರಕ್ಷಿತಾಜಗದೀಶ್, ಪ್ರಧಾನ ಕಾರ್ಯದರ್ಶೀ ಪ್ರಕಾಶ್ ಅಮೀನ್ , ಜೊತೆ ಸಹಕಾರ್ಯ ದರ್ಶಿ ಸುಂದರ್ ದಾಸ್  ಪೂಜಾರಿ, ಖಜಾಂಚಿ  : ಚಂದ್ರಶೇಖರ್ ಹಾಗೂ ಉಪ ಖಜಾಂಚಿ ಸುಮಿತ್ರ ಭಾಸ್ಕರ್ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾದರು.

ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ, ಅಶಕ್ತರಿಗೆ ಸಹಾಯಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತ ದೇಹವನ್ನು ಎಲ್ಲಾಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಾಲ್ವರುಮಹಾನೀಯರಾದ ಶ್ರೀ ಸತೀಶ್ ಕುಮಾರ್ ಬಜಾಲ್ , ಸತೀಶ್ ಅಮೀನ್ , ಸುಂದರ್ ದಾಸ್ ಪೂಜಾರಿ, ಸುದೀರ್ ಕೊಟ್ಯಾನ್ , ಇವರೆಲ್ಲರಿಗೆಆಪತ್ಭಾಂದವರುಎಂಬ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಮೀನ್ , ಅವರನ್ನುರೀಯಾದ್ ಬಿಲ್ಲವಾಸ್ ನಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿಸನ್ಮಾನಿಸಲಾಯಿತು ಮತ್ತು 60 ವರ್ಷ ಸಂಪೂರ್ಣ ಗೊಂಡ ಸಂಘದ ಕ್ರೀಯಾಶೀಲಾ ಹಿರಿಯರಾದ ಶ್ರೀಕಾಂತ್ ಅಮೀನ್, ಹೆಜಮಾಡಿರರಿಗೆ

ಇವರಿಗೂ. ಸಂಘದ ವತಿಯಿದ ಸನ್ಮಾನಿಸಿ ಗೌರವಿಸಲಾಯಿತು.ಸಂಪೂರ್ಣ  ಕಾರ್ಯಕ್ರಮವನ್ನು ಪ್ರವೀಣ್ ಪೂಜಾರಿ, ಕುಂಜತಬೈಲ್ಅವರು ನಿರ್ವಹಿಸಿದರು.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »