ಬಿಲ್ಲವ ಬ್ರಿಗೇಡ್ ನ “ನಂದಾದೀಪ” ವಸತಿ ಯೋಜನೆಯಡಿಯಲ್ಲಿ ಬಿಲ್ಲವ ಸಮಾಜದ ಪ್ರಮುಖರ ಸಹಭಾಗಿತ್ವದಲ್ಲಿ ಹಿಂದುಳಿದವರ್ಗಗಳ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯಕ್ರಮದಲ್ಲಿ ಪ್ರಥಮ ಮನೆ ಪುಣಚ ಗ್ರಾಮದ ತೋರಣಕಟ್ಟೆ ನಿವಾಸಿ, ಕಳೆದಕೆಲ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಚಂದ್ರಾವತಿ ಟಿ. ಅವರ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತುಅಡಿಗಲ್ಲು ಹಾಕುವ ಕಾರ್ಯಕ್ರಮ ಶನಿವಾರ ನಡೆಯಿತು.ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಗುದ್ದಲಿ ಪೂಜೆ ಮತ್ತು ಅಡಿಗಲ್ಲುಹಾಕುವ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಬಿಲ್ಲವ ಬ್ರಿಗೇಡ್ ಹಾಗೂ ಸಮಾನ ಸೇವಾ ಮನಸ್ಕ ಬಿಲ್ಲವ ಪ್ರಮುಖರ ಕಾರ್ಯಶ್ರೇಷ್ಠ ಹಾಗೂ ಪುಣ್ಯಪ್ರದವಾಗಿದೆ. ಈ ಸೇವಾ ಕೈಂಕರ್ಯಕ್ಕೆ ಪ್ರತಿಯೊಬ್ಬರೂ ಅಳಿಲು ಸೇವೆ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜದ ನಾಯಕರಾದ ಉಲ್ಲಾಸ್ ಕೋಟ್ಯಾನ್,ಬಿಲ್ಲವ ಬ್ರಿಗೇಡ್ ಕೆ ಕೇಂದ್ರೀಯ ಮಂಡಳಿಯಅವಿನಾಶ್ ಸುವರ್ಣ ಮಂಗಳೂರು, ದೀಪಕ್ ಪೂಜಾರಿ ಮಂಗಳಾದೇವಿ , ಸುಧಾಕರ್ ಪಾಲನ್ ಮಲ್ಪೆ ಸ್ಥಳೀಯ ನಾಯಕರಾದವಿಶ್ವನಾಥ ಕೂರೇಲು, ವಿಶ್ವನಾಥ ಭಟ್, ಜನಾರ್ದನ್, ಮೋಹನ್ ಗುರ್ಜಿನಡ್ಕ, ಬಾಲಕೃಷ್ಣ ಹಿತ್ತಿಲು, ಊರ ಹಿರಿಯರುಭಾಗವಹಿಸಿದ್ದರು.