ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಇಡೀ ಬಿಲ್ಲವ ಸಮುದಾಯದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ಇನ್ನಾದರೂ ಯಾವುದೇರಾಜಕೀಯ ಸಿದ್ಧಾಂತಗಳಿಗೆ ಬಲಿಯಾಗದೆ, ತಾವು ದುಡಿದು ತಮ್ಮ ಮನೆಯವರಿಗೋಸ್ಕರ ಬದುಕಬೇಕು ಎಂದು ಶ್ರೀ ಪ್ರಣವಾನಂದಸ್ವಾಮೀಜಿ ಹೇಳೀದರು
ಪ್ರವೀಣ್ ನೆಟ್ಟಾರ್ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದರು.
ನೆಟ್ಟ್ಟಾರ್ ಅವರ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ಹಾಗೂ ಅವರ ಧರ್ಮಪತ್ನಿಗೆ ಕೂಡಲೇ ಸರ್ಕಾರಿನೌಕರಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಬಿಲ್ಲವ ಸಮುದಾಯದ ಯುವಕರು ಇನ್ನಾದರೂ ಎಚ್ಚೆತ್ತುಕೊಂಡು ಯಾವುದೇ ಪ್ರಚೋದನೆಗೆ ಒಳಗಾಗದೆ ಸಂಯಮದಿಂದಇರಬೇಕು. ಈಗಾಗಲೇ ಅನೇಕ ಬಿಲ್ಲವ ಯುವಕರು ಹತ್ಯೆಗೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮರುಕಳಿಸಬಾರದು. ನಾವುಬ್ರಹ್ಮಶ್ರೀ ನಾರಾಯಣ ಗುರುಗಳ ಅಹಿಂಸ ಸಿದ್ಧಾಂತದ ಹಾದಿಯಲ್ಲಿ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಮಾತನಾಡಿ, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಸೇರಿ, ಸಮಾಜದಲ್ಲಿ ಶಾಂತಿ ಕದಡುವ ಕೋಮುವಾದದಂತಹ ಎಲ್ಲ ಪ್ರಕರಣಗಳನ್ನು ತ್ವರಿತ ನ್ಯಾಯಾಲಯಸ್ಥಾಪಿಸಿ ಆರು ತಿಂಗಳೊಳಗೆ ಇತ್ಯರ್ಥಗೊಳಿಸಿ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಸರ್ಕಾರದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ, ಮಾಧ್ಯಮಗಳುಪ್ರತೀಕಾರದ ಕೊಲೆ ನಡೆಯಬಹುದು ಎಂದು ಸಂಶಯ ವ್ಯಕ್ತಪಡಿಸಿ, ಸರ್ಕಾರವನ್ನು ಎಚ್ಚರಿಸಿದರೂ ಏನೂ ಕ್ರಮ ಕೈಗೊಳ್ಳದಗುಪ್ತಚರ ಇಲಾಖೆಯ ವಿಫಲತೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪ್ರವೀಣ್ ನಮ್ಮ ಕುಟುಂಬದ ಸದಸ್ಯ ಮನೆಯವರ ದುಃಖದ ಸಮಯದಲ್ಲಿ ಬಿಲ್ಲವ ಸಮಾಜ ಸದಾ ಇರುತ್ತದೆ ಎಂದು ತಿಳಿಸಿದರು.
ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರದ ಗೌರವಾಧ್ಯಕ್ಷ ಜಯಂತ ನಡುಬೈಲ್, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಬೆಳ್ತಂಗಡಿ ಬಿಲ್ಲವ ಯುವವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ವಕೀಲ ಮನೋಹರ್, ವೇಣೂರು ಯುವವಾಹಿನಿ ಅಧ್ಯಕ್ಷಯೋಗೀಶ್, ರವಿ ಪೂಜಾರಿ ಚಿಲಿಂಬಿ, ರಾಜೇಂದ್ರ ಚಿಲಿಂಬಿ ನವೀನ್ ಪಚ್ಚೇರಿ, ಮೋಹನ್ ಪಡೀಲ್, ಪುರುಷೋತ್ತಮ ಸಜಿಪ, ರಾಜೇಶ್ ಸುವರ್ಣ, ಪ್ರವೀಣ್ ಅರ್ಕುಳ ಮೊದಲಾದವರಿದ್ದರು.
ಬಿಲ್ಲವ ಸಮಾಜದಿಂದ ಮನೆ ನಿರ್ಮಾಣ
ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಮಸ್ತ ಬಿಲ್ಲವ ಸಮುದಾಯದ ನೇತೃತ್ವದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಸಂಘಟಕರು ಭರವಸೆನೀಡಿದರು. ಈ ಸಂದರ್ಭ ಗುರುಬೆಳದಿಂಗಳು ಫೌಂಡೇಶನ್‌ನಿಂದ 1 ಲಕ್ಷ ರೂ ಪರಿಹಾರ ಹಸ್ತಾಂತರಿಸಲಾಯಿತು.