ಬಿಲ್ಲವ ವಾರಿರ್ಯಸ್ ತಂಡದ ೩ನೇ ಸೇವೆಯನ್ನು ಬರಿಮಾರು ಗ್ರಾಮ ಬಂಟ್ವಾಳದ ಕುಟುಂಬಕ್ಕೆ ನೀಡಲು ನಿರ್ಧರಿಸಿತು. ಕಳೆದ ತಿಂಗಳು ಆಕ್ಸಿಡೆಂಟಾಗಿ ಕೆಲಸಕ್ಕೆ ಹೋಗಲು ಆಗದೆ ತನ್ನ ಕುಟುಂಬದ ಜವಾಬ್ದರಿಯನ್ನು ಹೊತ್ತ ಕುಟುಂಬಕ್ಕೆ ನೀಡಿದೆ. ಉತ್ತಮ ಕಾರ್ಯ, ಸೇವೆಗಳು ಎಂದೆಂದಿಗೂ ಅಮರ ಅನ್ನುವ ಹಾಗೆ ನಮ್ಮ ತಂಡ 10 ಸಾವಿರ ರೂಪಾಯಿ ನೀಡುವುದಾಗಿ ಮನವಿಯನ್ನು ಮಾಡಿತ್ತು. ಆದರೆ ಜನರ ಸ್ಪಂದನೆಯಿಂದಾಗಿ 18 ಸಾವಿರ ರೂಪಾಯಿಗಳನ್ನು ನೀಡಿರುತ್ತದೆ.
ಕೊರೊನ ಮಹಾಮಾರಿ ಸಂದಿಗ್ನ ಸ್ಥಿತಿ ಯಲ್ಲಿ ಜೀವನ ಕಳೆಯುತ್ತಿದ ಸಂದರ್ಭದಲ್ಲಿ ಜೀವನ ಶಾಶ್ವತ ಅಲ್ಲ, ಸಮಾಜಕ್ಕಾಗಿ ಮಾಡಿದ ಸೇವೆ ಶಾಶ್ವತ ಅನ್ನುವ ಹಾಗೆ ಸೇವೆಗೆ ಸ್ಪಂದಿಸಿದ ಧಾನಿಗಳು ಸತೀಶ್ ಅಂಚನ್ ಬಜಾಲ್ , ಸತೀಶ್ ಪೂಜಾರಿ ಸೌದಿ ಅರೇಬಿಯಾ, ಲೀಲಾದರ್ ಗುಜರಾನ್, ಸದಾನಂದ ಪೂಜಾರಿ, ನಮ್ಮ ತಂಡದ ರೂವರಿ ಪ್ರವೀಣ್ ಪೂಜಾರಿ ಬಿಲ್ಲವ ವಾರಿರ್ಯಸ್ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು.
ಬಿಲ್ಲವ ವಾರಿರ್ಯಸ್ ತಂಡದ ರೂವರಿಗಳಾದ ದಯಾನಂದ ಕ್ಕುಕಾಜೆ ಹಾಗು ಪುಷ್ಪರಾಜ್ ಓಟ್ಟುಗೂಡಿದ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.