ಬಾನು ಬೆಳಕಾದಂತೆ ಹಸಿರು ರಂಗೇರಿ ಕರೆದಂತೆ
ಇಬ್ಬನಿಯ ತಂಪಿನಂತೆ, ಅಚ್ಚ ಮಲ್ಲಿಗೆಯ ಶುಭ್ರ ಕಾಂತಿಯಂತೆ
ಮಾತು ಮುತ್ತು ಮೌನ ಬಂಗಾರವೇ ಶ್ರಂಗಾರವೆನುವಂತೆ
ನಡೆನುಡಿಯ, ಜನಮಾನಸರ ಪರಮಾಪ್ತ ಸೂರ್ಯ
ಬಿಲ್ಲವ ಸಮಾಜೋದ್ಧಾರಕ, ಬಡವರ ಬಂಧು
ಜಯ ಸಿ. ಸುವರ್ಣರ ಪ್ರತಿರೂಪ ಸೂರ್ಯ
ಅವರ ಸಾಧನೆಯ ಶಿಖರಕ್ಕೆ ಮೂರ್ತರೂಪವನೀಯಲು
ಹೊರಟಿರುವ ತೇಜದ ಹೊಳಪು ಸೂರ್ಯ
ಸಮಾಜ ಸೇವೆಯೇ ತನ್ನ ಜೀವ ಜೀವನದ ಉಸಿರು
ಸತ್ಯ ಧರ್ಮ, ಶಾಂತಿ ನೀತಿ, ನಿಯತ್ತಿಗೊಂದು ಹೆಸರು ಸೂರ್ಯ
ಆದರ್ಶ ತತ್ವಗಳನ್ನು ಆಧರಿಸಿ ಪರಿಪಾಲಿಸುವ
ಸಾಮಾನ್ಯರೊಳು ಸಾಮಾನ್ಯರಾಗಿರುವ
ಅಸಮಾನ್ಯ ವ್ಯಕ್ತಿತ್ವದ ವರ್ತಮಾನ, ಭವಿಷ್ಯದ ಶಕ್ತಿ ಸೂರ್ಯ
ಅದೆಷ್ಟೋ ಕನಸುಗಳು ಕಾಯುತಿವೆ
ಸಹಸ್ರಾರು ಮನಸ್ಸುಗಳು ನಿಮ್ಮ ಬಳಿಸಾರಿ ನಿಂತಿವೆ
ಮುನ್ನಡೆಯಿರಿ ಬಾಂಧವರ ಬಲವಾಗಿ, ಛಲವಾಗಿ, ಒಲವಾಗಿ
ಸಾಧನೆಯ ಹಾದಿಯಲಿ ಉತ್ತುಂಗಕ್ಕೇರಲು
ಸಮಾಜದ ಕೀರ್ತಿ ಪತಾಕೆಯನು ಎಲ್ಲೆಡೆ ರಾರಾಜಿಸಲು.
ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಜನ್ಮ ದಿನದ ಪ್ರೀತಿಯ ಶುಭಾಶಯ