ದೈವ ದೇವರನ್ನು ವಿಶೇಷ ವಾಗಿ ಆರಾಧಿಸುವ ಪುಣ್ಯಭೂಮಿ ತುಳುನಾಡು,ಈ ಭೂಮಿಯಲ್ಲಿ ವಿವಿಧ ಸಂಸ್ಕ್ರತಿಯನ್ನು ಹೊಂದಿರುವಜಾತಿ ವ್ಯವಸ್ಥೆ ಈ ಮಣ್ಣಿನ ಸೊಡಗನ್ನು ಹೆಚ್ಚಿಸುತ್ತದೆ, ಪ್ರತಿಯೊಂದು ಜಾತಿ ಧರ್ಮ ದೈವಾರಾಧನೆಯಲ್ಲಿ ಒಂದೇ ತುಳು ತಾಯಿಯಮಕ್ಕಳಂತೆ ಒಗ್ಗಟ್ಟಾಗಿ ಆರಾಧಿಸುವ ಪದ್ದತಿಯೂ ಈ ಮಣ್ಣಲ್ಲಿತ್ತು. ಈ ಮಣ್ಣಿನ ಅತ್ಯಂತ ಇತಿಹಾಸವುಲ್ಲ ಬಲಿಷ್ಠ ವಾಗಿತುಳುನಾಡಿನಾದ್ಯಂತ ಇರುವ ಸಮಾಜ ” ಬಿಲ್ಲವ ” ಸಮಾಜ ಈ ಸಮಾಜದ ಇತಿಹಾಸ ಕೆಣಕಿದಷ್ಟು ಅದ್ಭುತ ವಾದ ವೀರರ ಚರಿತ್ರೆಗಳನ್ನು ಕಾಣಬಹುದು ಈ ಕಾರಣದಿಂದಲೇ ಪ್ರತಿಯೊಬ್ಬ ಬಿಲ್ಲವನು ಹೆಮ್ಮೆ ಪಡುತ್ತಿದ್ದರು ತನ್ನ ಇತಿಹಾಸದಿಂದ. ಇಂತಹಸಮಾಜವನ್ನು ರಾಜಕೀಯ ಹಿತಾಸಕ್ತಿ ಗಳು ತಮ್ಮ ಸ್ವಾರ್ಥಕ್ಕಾಗಿ ಕ್ರಮೇಣವಾಗಿ ಬಳಸುತ್ತಾ IAS KAS ಅಥವಾ ಸ್ವ ಉದ್ಯಮದಿಂದಪ್ರಗತಿಹೊಂದಬಲ್ಲ ಯುವಕರು ರಾಜಕೀಯಕ್ಕಾಗಿ ಹೆಚ್ಚಾಗಿ ವಾಲುತಿದ್ದಾರೆ
ಬಿಲ್ಲವ ಸಮಾಜದ ಹೆಸರಿನಿಂದ ಎಷ್ಟೋ ವ್ಯಕ್ತಿಗಳು ಊರಿಡಿ ತಿರುಗಿ ಮತ ಪಡೆಯುವ, ಹೆಸರು ಗಳಿಸುವ ಉದ್ದೇಶವನ್ನಿಟ್ಟು ನಮ್ಮಸಮಾಜವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ
ಬಿಲ್ಲವ ಸಮಾಜ ಎಂದು ಬೆಳೆದ ವ್ಯಕ್ತಿಗಳ ಹತ್ತಿರ ಒಬ್ಬ ಬಿಲ್ಲವ ತನ್ನ ಸಮಸ್ಯೆಗಳನ್ನು ಹೇಳಿದಾಗ ತನ್ನಲ್ಲಿ ಸಹಾಯ ಮಾಡುವ ಎಲ್ಲಾಶಕ್ತಿಯಿದ್ದರು ಅವರು ಸಹಕರಿಸಲು ಹಿಂಜರಿಯುತ್ತಾರೆ. ಇಂತಹ ಹಲವು ನಾಯಕರ ಉದಾಹರಣೆಯೂ ನಮ್ಮಲ್ಲಿದೆ ಅದೇನೆ ಇರಲಿನಮ್ಮಸಮಾಜದ ನಾಯಕರೆಂದು ಗೌರವಿಸುವ ನಮಗೆ ಇರುವಷ್ಟು ಅಭಿಮಾನ ನಾಯಕರಿಗೆ ಇರುವುದು ಅತೀ ಕಡಿಮೆ.
ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ತಮ್ಮ ಸಮಾಜದ ಇತಿಹಾಸದ ವೀರರು ನಮಗೆ ಆದರ್ಶವಾಗಿರಲಿ.
✍ ಬಿಲ್ಲವ