ಬಿಲ್ಲವ ಸಮುದಾಯವನ್ನು ಹೀಯಾಳಿಸಿದ ಜಗದೀಶ್ ಅಧಿಕಾರಿ ಹೇಳಿಕೆ ಖಂಡನೀಯ:
ಕಾರ್ಕಳ : ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯವರ ಹೇಳಿಕೆ ಖಂಡನೀಯ. ಮಾತ್ರವಲ್ಲದೇ “ಬ್ಯಾರಿಲು ಆಂಡಲ ಆವು, ಪೂಜಾರಿಲು ಅತ್ತ್” ( ಬಿಲ್ಲವರಿಗಿಂತ ಮುಸ್ಲಿಮರೇ ಆಗಬಹುದು) ಎಂದು ಹೇಳಿರುವುದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುವ ಜಗದೀಶ್ ಅಧಿಕಾರಿ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಬಜರಂಗದಳ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್ ಕೆ.ಆರ್. ಆಗ್ರಹಿಸಿದ್ದಾರೆ.