ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ತಂಡವು ಸಾಮಾಜಿಕ ಜಾಲತಾಣದ ಮೂಲಕ ತೆರೆಮರೆಯ ಪ್ರತಿಭೆಗಳನ್ನು ಪರಿಚಯಿಸಿ ಆ ಮೂಲಕ ಅವರ ಬೆಳವಣಿಗೆಗೆ ಕಾರ್ಯೋನ್ಮುಖ ವಾಗಿರುವುದು ಸಂತಸದ ವಿಷಯ. ಕೊರೋನಾ ಸಮಯದಲ್ಲಿ ಒಳ್ಳೆಯ ಚಿಂತನೆಯ ಮೂಲಕ ಸಮಯವನ್ನು ಸದುಪಯೋಗಪಡಿಸಿ ಕೊಳ್ಳಬೇಕಾಗಿದೆ. ಎಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದರು.
ಕುದ್ರೋಳಿ ದೇವಳದಲ್ಲಿ ನಡೆದ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ಬಿಲ್ಲವ ಗಾನ ತರಂಗ ಸೀಸನ್-1 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಪರಮಾನಂದ ಸಾಲ್ಯಾನ್ ಮಾತನಾಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣವನ್ನು ಪ್ರತಿಭೆಗಳಿಗೆ ತಮ್ಮ ಒತ್ತು ನೀಡಿ ಅವರನ್ನು ಬೆಳಕಿಗೆ ಬರುವ ಕೆಲಸ ಸಾರ್ಥಕವಾಗಿದೆ. 94 ಸ್ಪರ್ಧಿಗಳಲ್ಲಿ ಅಂತಿಮ ಆಯ್ಕೆ ಕಷ್ಟದ ಕೆಲಸ. ವಿಶ್ವವ್ಯಾಪಿ ಈ ಎಲ್ಲಾ ಸ್ಪರ್ಧಿಗಳನ್ನು ಪರಿಚಯಿಸಿದ ಕಾರ್ಯ ಶ್ಲಾಘನೀಯ ಎಂದರು.ರೇಡಿಯೋ ಜಾಕಿ ಮತ್ತು ಸಮಾಜಸೇವಕಿ ರಶ್ಮಿ ಉಳ್ಳಾಲ್ ಮಾತನಾಡಿ ಕಲಿಕೆ ನಿರಂತರ. ಧನಾತ್ಮಕ ಚಿಂತನೆಯನ್ನು ಯುವ ಮನಸ್ಸುಗಳು ತುಂಬಿ ಕೊಳ್ಳಬೇಕಾಗಿದೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸುವ ಮೂಲಕ ನಾವು ಬೆಳೆಯ ಬೇಕಾಗಿದೆ ಎಂದರು. ಮಂಗಳೂರು ವಿಶ್ವವಿದ್ಯಾ ನಿಲಯದ ನಾರಾಯಣ ಗುರು ಅಧ್ಯಯನಪೀಠದ ಸಲಹಾ ಸಮಿತಿಯ ಸದಸ್ಯರಾದ ನಮಿತಾ ಶ್ಯಾಮ್ ಮಾತನಾಡಿ ಸಾಮಾಜಿಕ ಜಾಲತಾಣದ ಮೂಲಕ ಇನ್ನಷ್ಟು ಸ್ಪರ್ಧೆಗಳಿಗೆ ನಮ್ಮ ಸಹಕಾರವಿದೆ. ಬಿಲ್ಲವ ಸೇವಾ ಮಾಣಿಕ್ಯದಾರ ಸಮಾಗಮ ಮಾಡುತ್ತಿರುವ ಕಾರ್ಯಗಳು ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಬಿರುವೆರ್ ಕುಡ್ಲ ಮೂಡಬಿದ್ರೆ ಘಟಕದ ರಾಜ್ ಪವಿ ಬಿಲ್ಲವ ಉಪಸ್ಥಿತರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 98.5 ಪಡೆದ ನಿರೀಕ್ಷಾ ಪೂಜಾರಿಯನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ನಿರ್ಮಾಣದ ಗೆಜ್ಜೆಗಿರಿತ ಮಾಣಿಕ್ಯ ಅಪ್ಪೆ ದೇಯಿಬೈದೆದಿ ಸುಗಿಪು ಧ್ವನಿಸುರುಳಿಯಲ್ಲಿ ಹಾಡಿದ ವಾತ್ಸಲ್ಯ ಪೂಜಾರಿಯನ್ನು ಗೌರವಿಸ ಲಾಯಿತು.ಬಿಲ್ಲವ ಗಾನ ತರಂಗ ವಿಜೇತರು: ಪ್ರಥಮ-ಲಹರಿ ಕೋಟ್ಯಾನ್, ದ್ವಿತೀಯ ರಂಜಿತ್ ಪೂಜಾರಿ ಮೊಗರು, ತೃತೀಯ ಅನುರಾಧ ಚಂದ್ರೇಶ್. ಸಮಾಧಾನಕರ ಬಹುಮಾನ: ಸಚಿನ್ ಪೂಜಾರಿ, ನಿಶ್ಮಿತಾ, ಸಂತೋಷ್ ಪೂಜಾರಿ,ಸಹನಾ ಕರ್ಕೇರ. ಬೆಸ್ಟ್ ರಾಕ್ ಮೆಲೋಡಿ -ಆದಿತ್ಯ ಕರ್ಕೇರ ಪಡೆದುಕೊಂಡಿರುತ್ತಾರೆ.
ಸಮಾರಂಭದಲ್ಲಿ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ಪದಾಧಿಕಾರಿಗಳಾದ ದಿನೇಶ್ ಸುವರ್ಣ ರಾಯಿ, ಶಿವಕುಮಾರ್ ಮರಕ್ಕೂರು, ಶ್ರೇಯಸ್, ಅನುಪ್ ಉಪಸ್ಥಿತರಿದ್ದರು.
ರೇಣುಕ ಕಣಿಯೂರು ಸ್ವಾಗತಿಸಿ, ಅಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಚ್ಚೇಂದ್ರ ಅಂಬಾಗಿಲು ನಿರೂಪಿಸಿ, ದೀಪಕ್ ಬೀರ ವಂದಿಸಿದರು.